Priyanka Lok Sabha Candidate: ಮುಸಲ್ಮಾನ ಬಹುಸಂಖ್ಯಾತ ವಾಯನಾಡಿನಲ್ಲಿ ಉಪಚುನಾವಣೆ; ಪ್ರಿಯಾಂಕ ವಾಡ್ರಾ ಕಾಂಗ್ರೆಸ್ ಅಭ್ಯರ್ಥಿ !

ಪ್ರಿಯಾಂಕ ವಾಡ್ರಾ

ವಾಯನಾಡ್ (ಕೇರಳ) – ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಜೊತೆಗೆ ಕೇರಳದಲ್ಲಿನ ವಾಯನಾಡ್, ಮಹಾರಾಷ್ಟ್ರದಲ್ಲಿನ ನಾಂದೇಡ್ ಹಾಗೂ ಬಂಗಾಳದಲ್ಲಿನ ಬಶಿರಹಾಟ್ ಲೋಕಸಭಾ ಮತದಾರ ಕ್ಷೇತ್ರದಲ್ಲಿ ಉಪಚುನಾವಣೆ ಕೂಡ ಘೋಷಿಸಲಾಗಿದೆ. ಇಂತಹದರಲ್ಲಿ ಕಾಂಗ್ರೆಸ್ಸಿನ ವಾಯನಾಡಿನಿಂದ ಉಪಚುನಾವಣೆಗಾಗಿ ಪ್ರಿಯಾಂಕ ವಾಡ್ರಾ ಇವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಇಲ್ಲಿ ನವೆಂಬರ್ ೧೩ ರಂದು ಉಪಚುನಾವಣೆಗಾಗಿ ಮತದಾನ ನಡೆಯಲಿದೆ.
ಎಪ್ರಿಲ್-ಮೇ ೨೦೨೪ ರಲ್ಲಿ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರು ವಾಯನಾಡು ಮತ್ತು ರಾಯಬರೇಲಿ ಹೀಗೆ ಎರಡು ಲೋಕಸಭಾ ಮತದಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಆದ್ದರಿಂದ ಗಾಂಧಿ ಇವರು ವಾಯನಾಡಿನ ಸಂಸದ ಸ್ಥಾನವನ್ನು ತ್ಯಜಿಸಿದ್ದರು. ಈಗ ಇಲ್ಲಿ ಅವರ ಸಹೋದರಿಯನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. (ವಂಶಪರಂಪರೆಯನ್ನು ಕಾಪಾಡುವ ಕಾಂಗ್ರೆಸ್ ಪಕ್ಷ ! – ಸಂಪಾದಕರು)

ಸಂಪಾದಕೀಯ ನಿಲುವು

ಮುಸಲ್ಮಾನರ ಉರುಗೋಲು ಇಲ್ಲದೆ ಗಾಂಧಿ ಕುಟುಂಬಕ್ಕೆ ಬೇರೆ ಯಾವ ಆಧಾರ ಇಲ್ಲ ಎಂದು ಪ್ರಿಯಾಂಕ ಇವರು ಮುಸಲ್ಮಾನ ಬಹುಸಂಖ್ಯಾತ ವಾಯನಾಡಿನಿಂದ ಸ್ಪರ್ಧಿಸಿದೆ ಬೇರೆ ಪರ್ಯಾಯವಿಲ್ಲ, ಇದಕ್ಕೆ ಯಾರು ಏನು ಮಾಡುವರು ?