ಕೋಲಕಾತಾ (ಬಂಗಾಳ) – ಬಂಗಾಳದ ಸ್ಥಿತಿ ಚೆನ್ನಾಗಿಲ್ಲ. ಮಮತಾ ಬ್ಯಾನರ್ಜಿ ಅವರ ರಾಜ್ಯದ ಪೊಲೀಸರು ತೃಣಮೂಲ ಕಾಂಗ್ರೆಸ್ಸಿನ ಒಂದು ಗುಂಪು ಆಗಿದ್ದಾರೆ. ಹಿಂದೂಗಳ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇದ್ದರೆ, ನಾವು ಸುಮ್ಮನಿರುವುದಿಲ್ಲ, ನಾವು ಹಿಂದೂ ಮತ್ತು ಆದಿವಾಸಿಗಳ ಸುರಕ್ಷತೆಗಾಗಿ ಬದ್ಧರಾಗಿದ್ದೇವೆ, ಎಂದು ಭಾಜಪ ಶಾಸಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಹೇಳಿದ್ದಾರೆ.
ಮುರ್ಶಿದಾಬಾದ ಗಲಭೆಗಾಗಿ ಟರ್ಕಿಯಿಂದ ಹಣ ಬಂದಿರುವ ಶಂಕೆ!
ಮುರ್ಶಿದಾಬಾದನಲ್ಲಿ ನಡೆದ ಗಲಭೆಯ ಸಂಚನ್ನು 3 ತಿಂಗಳ ಹಿಂದೆಯೇ ರೂಪಿಸಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಮೂಲಗಳ ಪ್ರಕಾರ, ಈ ಗಲಭೆಗಳಿಗೆ ಟರ್ಕಿಯಿಂದ ಹಣ ನೀಡಲಾಗಿತ್ತು. ಮುಸ್ಲಿಂ ಗಲಭೆಕೋರರಿಗೆ ಲೂಟಿ ಮತ್ತು ಹಿಂಸಾಚಾರಕ್ಕಾಗಿ ತಲಾ 500 ರೂಪಾಯಿ ನೀಡಲಾಗಿತ್ತು. ಈ ಗಲಭೆ ಶ್ರೀರಾಮನವಮಿಯಂದು ನಡೆಯಬೇಕಿತ್ತು; ಆದರೆ ಭದ್ರತಾ ಕಾರಣಗಳಿಂದ ಅದನ್ನು ಮುಂದೂಡಲಾಯಿತು ಮತ್ತು ವಕ್ಫ್ ವಿಧೇಯಕದ ವಿರೋಧವಾಗಿ ನಡೆಸಲಾಯಿತು.
ಮುರ್ಶಿದಾಬಾದನ ಗಲಭೆಯ ಹಿಂದೆ ಬಾಂಗ್ಲಾದೇಶಿ ನುಸುಳುಕೋರರು
ಮುರ್ಶಿದಾಬಾದ ಹಿಂಸಾಚಾರದ ಆರಂಭಿಕ ತನಿಖೆಯ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಲಾಗಿದೆ. ಈ ಹಿಂಸಾಚಾರದ ಹಿಂದೆ ಬಾಂಗ್ಲಾದೇಶಿ ನುಸುಳುಕೋರರು ಇದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ಹೇಳುತ್ತವೆ. (ದೇಶದಲ್ಲಿ 5 ಕೋಟಿ ಬಾಂಗ್ಲಾದೇಶಿ ನುಸುಳುಕೋರರಿದ್ದಾರೆ ಎಂದು ಹೇಳಲಾಗುತ್ತದೆ. ನಾಳೆ ಅವರೆಲ್ಲರೂ ದಂಗೆ ಎದ್ದರೆ, ದೇಶದಲ್ಲಿ ಏನಾಗುತ್ತದೆ ಎಂಬುದರ ಒಂದು ತುಣುಕು ಇದಾಗಿದೆ ಎಂದು ಹೇಳಬಹುದೇ? – ಸಂಪಾದಕರು) ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳು ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿಗಳು ಬಂಗಾಳದ ಪೊಲೀಸ ಮಹಾನಿರ್ದೇಶಕರು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಬಂಗಾಳದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರಗಳು ಮೊದಲಿನಿಂದಲೂ ನಡೆಯುತ್ತಿವೆ ಮತ್ತು ಮುಂದೆಯೂ ನಡೆಯುತ್ತಲೇ ಇರಲಿವೆ, ಇದೇ ಸ್ಥಿತಿ ಇರುವುದರಿಂದ ಇನ್ನು ಏನಾಗಲೆಂದು ಕಾಯಲಾಗುತ್ತಿದೆ? |