ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !

ಪುರಾಣಗಳ ಪ್ರಕಾರ, ಈ ಮನ್ವಂತರದ ಸಜೀವ ಸೃಷ್ಟಿಯು ಮಹರ್ಷಿ ಕಶ್ಯಪ ಮತ್ತು ಅವರ ಪತ್ನಿಯರ ಸಂತತಿಯಿಂದ ವಿಸ್ತರಿಸಿತು; ಅದಿತಿಯಿಂದ ದೇವತೆಗಳು, ದಿತಿಯಿಂದ ದೈತ್ಯರು ಹಾಗೂ ದನುವಿನಿಂದ ದಾನವರು ಹುಟ್ಟಿದರು.

ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…

ಋಷಿಮುನಿಗಳು ಎಂದರೆ ಈಶ್ವರನ ಸೃಷ್ಟಿಯೇ ಆಗಿದ್ದಾರೆ. ಮನುಷ್ಯ ಮತ್ತು ದೇವರ ನಡುವಿನ ಕೊಂಡಿ ಅವರಾಗಿದ್ದಾರೆ ! ಅವರಿಂದಲೇ ಮಾನವನ ಮುಂದಿನ ವಂಶಗಳು ಹುಟ್ಟಿ ಬೆಳೆದವು.

ಸದ್ಗುರುಗಳ ಮಹತ್ವ !

ಸದ್ಗುರುಗಳ ಆಜ್ಞೆಯನ್ನು ಪಾಲಿಸುತ್ತಾ ಸಾಧಕನಿಗೆ ನಾಮದ ಆಸಕ್ತಿ ಮೂಡುತ್ತದೆ ಮತ್ತು ನಾಮವನ್ನು ಹೊಟ್ಟೆ ತುಂಬುವಷ್ಟೆ ತೆಗೆದುಕೊಂಡರೆ ಅವನ ಆತ್ಮವು ತೃಪ್ತವಾಗುತ್ತದೆ.

ಸಪ್ತರ್ಷಿಗಳ ನಕ್ಷತ್ರಪುಂಜ !

ಭಗವಂತನು ಧ್ರುವ ಬಾಲಕನಂತೆ ಸಪ್ತರ್ಷಿಗಳಿಗೂ ನಕ್ಷತ್ರಪುಂಜದಲ್ಲಿ ಸ್ಥಾನ ನೀಡಿದ್ದಾನೆ. ಆದ್ದರಿಂದ ರಾತ್ರಿಯ ಸಮಯದಲ್ಲಿ ನಮಗೆ ಸಪ್ತರ್ಷಿಗಳ ದರ್ಶನ ಸಿಗುತ್ತದೆ. ರಾತ್ರಿ ನಮಗೆ ೭ ನಕ್ಷತ್ರಗಳ ಒಂದು ಸಮೂಹವೂ ಕಾಣಿಸುತ್ತದೆ. ಇದರ ಆಕಾರವು ಆಕಾಶದಲ್ಲಿ ಗಾಳಿಪಟ ಹಾರುತ್ತಿರುವಂತೆ ಕಾಣಿಸುತ್ತದೆ. ಈ ನಕ್ಷತ್ರಪುಂಜಕ್ಕೆ ‘ಸಪ್ತರ್ಷಿ ತಾರಾಸಮೂಹ ಎಂದೂ ಕರೆಯಲಾಗುತ್ತದೆ.

ಶ್ರೀರಾಮನ ಮೇಲಿನ ಆಘಾತ !

ಭಗವಾನ ಶ್ರೀರಾಮನೇ ಈ ಭಾರತ ಭೂಮಿಯ ಹೃದಯ ! ನಮ್ಮ ಆರಾಧ್ಯ ದೈವದ ಅಯೋಧ್ಯೆಯಲ್ಲಿ, ಅಂದರೆ ಸಾಕ್ಷಾತ್ ಶ್ರೀರಾಮಜನ್ಮಭೂಮಿ ಮಂದಿರದಲ್ಲಿ ಕಾಣಿಕೆಯ ಕಳ್ಳತನ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರಕಾರವು ರಚಿಸಿದ್ದ ವಿಶೇಷ ತನಿಖಾ ದಳವು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ೮ ಜನರಲ್ಲಿ ೭ ಜನರನ್ನು ದಸ್ತಗಿರಿ ಮಾಡಲಾಗಿದೆ.

ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !

ವಿಶ್ವಾಮಿತ್ರನು ಸಂಪೂರ್ಣವಾಗಿ ಬದಲಾಗಿ ವಸಿಷ್ಠರ ಆಶ್ರಮಕ್ಕೆ ಬಂದು ಅವರ ಪಾದಗಳಿಗೆ ಶರಣಾದಾಗ, ಮಹರ್ಷಿ ವಸಿಷ್ಠರು ಪ್ರೀತಿಯಿಂದ ಅವನನ್ನು ಅಪ್ಪಿಕೊಂಡು ಬ್ರಹ್ಮರ್ಷಿ ಎಂದು ಮನ್ನಣೆ ನೀಡಿದರು.

ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !

ನೀವು ಋಷಿಮುನಿಗಳು ಗಡ್ಡ ಬೆಳೆಸಿದ್ದನ್ನು ನೋಡುತ್ತೀರಿ; ಆದರೆ ಅವರು ಮಾಡಿದ ಸಾಧನೆಯನ್ನು ನೀವು ಮಾಡುತ್ತೀರಾ ?

‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !

ನಾವು ತಳಮಳದಿಂದ ಸೇವೆ ಮಾಡಿದರೆ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಖಂಡಿತ ಸಹಾಯ ಮಾಡುತ್ತಾರೆ ! ಎಂದರು.