|
ಹಜಾರಿಬಾಗ (ಜಾರ್ಖಂಡ) – ಇಲ್ಲಿನ ಝುರಝುರಿ ಗ್ರಾಮದಲ್ಲಿ 9 ದಿನಗಳ ಕಾಲ ನಡೆಯುವ ಶ್ರೀ ಶ್ರೀ ಶತಚಂಡಿ ಮಹಾಯಜ್ಞದ ಅಂಗವಾಗಿ ಏಪ್ರಿಲ್ 13 ರಂದು ಆಯೋಜಿಸಿದ್ದ ಮೆರವಣಿಗೆಯು ಮಸೀದಿಯ ಬಳಿ ಬರುತ್ತಿದ್ದಂತೆ ಮತಾಂಧ ಮುಸ್ಲಿಮರು ಕಲ್ಲು ತೂರಾಟ ನಡೆಸಿದರು. ಇದ್ದಕ್ಕಿದ್ದಂತೆ ನಡೆದ ಕಲ್ಲು ತೂರಾಟದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡರು. ಕಲ್ಲು ತೂರಾಟದೊಂದಿಗೆ ಬೆಂಕಿಯನ್ನೂ ಹಚ್ಚಿದರು. ಕಲ್ಲು ತೂರಾಟದಿಂದ ಆಕ್ರೋಶಗೊಂಡ ಹಿಂದೂಗಳು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಅವರು ರಸ್ತೆ ತಡೆದು ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪೊಲೀಸರು ಹೇಗೋ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ರಸ್ತೆ ತೆರವುಗೊಳಿಸಿದರು. (ಮತಾಂಧ ಮುಸ್ಲಿಮರ ಮೇಲೆ ಕ್ರಮ ಕೈಗೊಳ್ಳುವ ಬದಲು ಸಂತ್ರಸ್ತ ಹಿಂದೂಗಳನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸುವ ಪೊಲೀಸರು ಎಂದಾದರೂ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಸಾಧ್ಯವೇ? ಇಂತಹ ಪೊಲೀಸರ ಮೇಲೆ ಮತಾಂಧರು ದಾಳಿ ಮಾಡಿದಾಗಲಾದರೂ ಅವರು ಕ್ರಮ ಕೈಗೊಳ್ಳುತ್ತಾರೆಯೇ? – ಸಂಪಾದಕರು)
Hazaribagh (Jharkhand): Hindu religious procession attacked with stones near a mosque;
Several Hindu women injured 🚨Similar attacks took place even on Ram Navami!
Why aren’t mosques from where stone-pelting takes place permanently shut down?🔒
The JMM govt in Jharkhand has… pic.twitter.com/IKRuXgBF0X
— Sanatan Prabhat (@SanatanPrabhat) April 14, 2025
ಈ ಹಿಂಸಾಚಾರದ ನಂತರ ಪೊಲೀಸರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತು ವ್ಯವಸ್ಥೆ ಮಾಡಿದ್ದಾರೆ. (ದಾಳಿಯ ನಂತರ ಬಂದೋಬಸ್ತು ಹೆಚ್ಚಿಸುವ ಪೊಲೀಸರು ಅಂದರೆ ರೈಲು ಹೋದ ಮೇಲೆ ತಿಕೀಟು ತೆಗೆದುಕೊಂಡಂತೆ ! ದೇಶದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮಸೀದಿಗಳ ಬಳಿ ಮುಸ್ಲಿಮರಿಂದ ದಾಳಿಗಳು ನಡೆಯುತ್ತಿವೆ ಎಂದು ತಿಳಿದಿದ್ದರೂ, ಪೊಲೀಸರು ಮೊದಲೇ ಈ ಮಸೀದಿಗಳನ್ನು ಪರಿಶೀಲಿಸಿ ಅಲ್ಲಿ ಪೊಲೀಸರನ್ನು ಏಕೆ ನಿಯೋಜಿಸಲಿಲ್ಲ? – ಸಂಪಾದಕರು)
ಆಡಳಿತವು ಜನರಿಗೆ ಯಾವುದೇ ವದಂತಿಗಳಿಗೆ ಗಮನ ಕೊಡದಂತೆ ಮತ್ತು ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. (ಶಾಂತಿ ಭಂಗ ಹಿಂದೂಗಳಲ್ಲ, ಮತಾಂಧ ಮುಸ್ಲಿಮರು ಮಾಡುತ್ತಾರೆ ಎಂದು ತಿಳಿದಿದ್ದರೂ, ಅಂತಹ ಮುಸ್ಲಿಮರ ಮೇಲೆ ಕ್ರಮ ಕೈಗೊಳ್ಳುವ ಬದಲು ಇಂತಹ ಮನವಿ ಮಾಡುವ ಆಡಳಿತ! – ಸಂಪಾದಕರು)
ಹಜಾರಿಬಾಗನಲ್ಲಿ ಮತಾಂಧರಿಂದ ಹಿಂದೂಗಳ ಮೆರವಣಿಗೆಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ!ಹಜಾರಿಬಾಗನಲ್ಲಿ ನಿರಂತರವಾಗಿ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ದಾಳಿಗಳು ನಡೆಯುತ್ತಿವೆ. ಈ ಹಿಂದೆ ಫೆಬ್ರವರಿ 26, 2025 ರಂದು ಮಹಾಶಿವರಾತ್ರಿಯ ದಿನದಂದು ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದರು. ನಂತರ ಮಾರ್ಚ್ 26, 2025 ರಂದು ಇಲ್ಲಿನ ಝಂಡಾ ಚೌಕಿಯಲ್ಲಿ ಶ್ರೀರಾಮನವಮಿ ಉತ್ಸವದ ಅಂಗವಾಗಿ ಹೊರಟಿದ್ದ ಮಂಗಳಾ ಮೆರವಣಿಗೆಯ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದರು. ಆ ಸಮಯದಲ್ಲಿ ಪೊಲೀಸ ಉಪ ಆಯುಕ್ತ ನ್ಯಾನ್ಸಿ ಸಹಾಯ ಅವರು, ಮೆರವಣಿಗೆಯಲ್ಲಿ ಹಾಕಲಾಗಿದ್ದ ಕೆಲವು ಹಾಡುಗಳ ಬಗ್ಗೆ ಇತರ ಸಮುದಾಯದ ಜನರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ವಾಗ್ವಾದ ನಡೆದು ಹೊಡೆದಾಟ ಮತ್ತು ಕಲ್ಲು ತೂರಾಟ ನಡೆಯಿತು ಎಂದು ತಿಳಿಸಿದ್ದರು. |
ಸಂಪಾದಕೀಯ ನಿಲುವು
|