ಭಾರತೀಯ ವಿಮಾನ ನಿಲ್ದಾಣ ಮತ್ತು ವಿಮಾನಗಳಲ್ಲಿ ಭಾರತೀಯ ಸಂಗೀತ ಕೇಳಲು ಸಿಗಲಿದೆ !

ಭಾರತದ ವಿಮಾನನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ಭಾರತೀಯ ಸಂಗೀತ ಕೇಳಲು ಸಿಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧಿ ಇವರು ಈ ವಿಷಯವಾಗಿ ದೇಶದ ವಿಮಾನ ಕಂಪನಿಗಳು ಮತ್ತು ವಿಮಾನ ನಿಲ್ದಾಣ ಸಂಚಾಲಕರಿಗೆ ಪತ್ರ ಬರೆದಿದ್ದಾರೆ.

ಬಿಜನೌರ (ಉತ್ತರಪ್ರದೇಶ) ಇಲ್ಲಿ ಇಬ್ಬರೂ ಗೂಂಡಾಗಳಿಂದ ಪೋಲಿಸ ಸಿಬ್ಬಂದಿಗೆ ಥಳಿತ !

ಇಬ್ಬರು ಗೂಂಡಾಗಳು ಪೊಲೀಸ್ ಸಿಬ್ಬಂದಿಗೆ ಥಳಿಸಿ ಅವರಿಂದ ರೈಫಲ್ ದೋಚಿದ್ದಾರೆ. ಭೂತಪುರಿ ತಿರಾಹಾ ಪೊಲೀಸ್ ಠಾಣೆಯಲ್ಲಿನ ಲಲಿತ್ ಕುಮಾರ ಇವರು ಥಳಿತಕ್ಕೊಳಗಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮಾಹಿತಿ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ ಕಾರ್ಯಕರ್ತರಿಗೆ ನೀಡಿದ ಪ್ರಕರಣದಲ್ಲಿ ಮತಾಂಧ ಪೊಲೀಸ್ ಸಿಬ್ಬಂದಿ ಅಮಾನತು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮಾಹಿತಿಯನ್ನು ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷ ಇರುವ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ (ಎಸ್.ಡಿ.ಪಿ.ಐ. ನ) ಕಾರ್ಯಕರ್ತರಿಗೆ ನೀಡಿರುವ ಪ್ರಕರಣದಲ್ಲಿ ಅನಾಜ್ ಎಂಬ ಪೊಲೀಸ್ ಸಿಬ್ಬಂದಿಗೆ ಅಮಾನತು ಮಾಡಲಾಗಿದೆ.

ಜೀವನದಲ್ಲಿ ಸವಾಲುಗಳು ಇದ್ದೇ ಇರುವುದು, ಅದೇ ನಿಮ್ಮ ಬೇಟೆಯಾಗಿರುವುದು ! – ಪ್ರಧಾನಿ ಮೋದಿ

ಇಂದು ನೀವು ದೇಶದ ಸುವರ್ಣ ಕಾಲವನ್ನು ಪ್ರವೇಶಿಸುತ್ತಿದ್ದೀರಿ. ರಾಷ್ಟ್ರದ ಅಮೃತ ಕಾಲದ ಹಾಗೆ ಇದು ನಿಮ್ಮ ಜೀವನದ ಅಮೃತ ಕಾಲವಾಗಿದೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ಆದರೆ ಜೀವನದಲ್ಲಿ ಸವಾಲುಗಳು ಇದ್ದೇ ಇರುವುದು. ಅದರಿಂದ ಪಲಾಯನ ಮಾಡುವರು ಅದಕ್ಕೆ ಬಲಿಯಾಗುವರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮೊದಲು ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸಲಾಗುವುದು !(ಅಂತೆ)

ವಿಧಾನಸಭೆಯ ಮೊದಲ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂಬ ಹಿಂದೂದ್ರೋಹಿ ಹೇಳಿಕೆಯನ್ನು ಕಾಂಗ್ರೆಸ್‌ನ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ವಿಪಕ್ಷದ ನಾಯಕ ಸಿದ್ಧರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಹೇಳಿದರು.

‘ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ !’(ವಂತೆ)

ನಾನು ಜೀವಂತ ಇರುವ ವರೆಗೂ ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ, ಎಂದು ತೆಲಂಗಾಣಾದ ಕಾಂಗ್ರೆಸ್ ನಾಯಕ ರಶೀದ್ ಖಾನ್ ಇವರು ಬೆದರಿಕೆಯೊಡ್ಡಿದರು.

ಮದರ್ ತೆರೇಸಾ ಇವರ ಸಂಸ್ಥೆಯ ‘ವಿದೇಶಿ ಯೋಗದಾನದ ನೋಂದಣಿ’ಯ ನವೀಕರಣ ಅರ್ಜಿಯನ್ನು ತಳ್ಳಿಹಾಕಿದ ಕೇಂದ್ರೀಯ ಗೃಹ ಸಚಿವಾಲಯ

ಮದರ ತೆರೇಸಾ ಅವರು ಸ್ಥಾಪನೆ ಮಾಡಿರುವ ಸಂಸ್ಥೆಯ ‘ವಿದೇಶಿ ಕೊಡುಗೆ (ನಿಯಂತ್ರಣ) ಕಾನೂನಿ’ನಿಗನುಸಾರ ಆಗಿರುವ ನೋಂದಣಿಯ ನವೀಕರಣ ಮಾಡುವ ವಿಷಯದ ಅರ್ಜಿಯನ್ನು ಕೆಲವು ಪ್ರತಿಕೂಲ ಮಾಹಿತಿ ಸಿಕ್ಕಿರುವುದರಿಂದ ಡಿಸೆಂಬರ್ ೨೫ ರಂದು ಅದನ್ನು ನಿರಾಕರಿಸಲಾಗಿದೆ.

ಸರಪಂಚರು ೧೫ ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣದ ಭ್ರಷ್ಟಾಚಾರ ನಡೆಸಿದರೆ ಮಾತ್ರ ನನ್ನಲ್ಲಿ ದೂರು ನೀಡಿ !

ನನ್ನ ಬಳಿ ಸರಪಂಚರ ಭ್ರಷ್ಟಾಚಾರದ ಬಗ್ಗೆ ದೂರು ನೀಡಬೇಡಿ. ಒಬ್ಬ ಸರಪಂಚನು ೧೫ ಲಕ್ಷ ರೂಪಾಯಿಯ ವರೆಗೂ ಭ್ರಷ್ಟಾಚಾರ ಮಾಡುತ್ತಿದ್ದರೆ, ಆ ವಿಷಯವಾಗಿ ನನಗೆ ಹೇಳಬೇಡಿ

ಲುಧಿಯಾನಾ ಬಾಂಬ್‌ಸ್ಫೋಟದ ಮುಖ್ಯ ರೂವಾರಿ ಜಸವಿಂದರ ಸಿಂಹ ಮುಲತಾನಿ ಜರ್ಮನಿಯಲ್ಲಿ ಬಂಧನ

ಪಂಜಾಬಿನ ಲುಧಿಯಾನಾದ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ನಡೆಸಿರುವ ಪ್ರಕರಣದಲ್ಲಿ ಜರ್ಮನಿಯಲ್ಲಿ ಜಸವಿಂದರ ಸಿಂಹ ಮುಲತಾನಿ ಈ ಪ್ರಮುಖ ರೂವಾರಿಯನ್ನು ಬಂಧಿಸಲಾಗಿದೆ.

ರಾಜಸ್ಥಾನದಲ್ಲಿ ರಘುನಾಥ ಮಂದಿರದಲ್ಲಿನ ದೇವತೆಯ ವಿಗ್ರಹ ಕಳವು

ರಾಜಸ್ಥಾನದ ಬಗಡಿ ಊರಿನಲ್ಲಿ ರಘುನಾಥ ಮಂದಿರದ ಶ್ರೀರಘುನಾಥ ಮತ್ತು ಶ್ರೀ ಗಣೇಶ ಇವರ ವಿಗ್ರಹಗಳು ಹಾಗೂ ಬೆಳ್ಳಿಯ ಕಿರೀಟ ಮತ್ತು ಛತ್ರ ಇದನ್ನು ಕಳವು ಮಾಡಲಾಗಿದೆ.