ಮದರ್ ತೆರೇಸಾ ಇವರ ಸಂಸ್ಥೆಯ ‘ವಿದೇಶಿ ಯೋಗದಾನದ ನೋಂದಣಿ’ಯ ನವೀಕರಣ ಅರ್ಜಿಯನ್ನು ತಳ್ಳಿಹಾಕಿದ ಕೇಂದ್ರೀಯ ಗೃಹ ಸಚಿವಾಲಯ

ಅರ್ಹತಾ ಷರತ್ತುಗಳನ್ನು ಪೂರ್ತಿ ಮಾಡದಿರುವ ಪರಿಣಾಮ

ನವ ದೆಹಲಿ – ‘ಮಿಶನರಿ ಆಫ್ ಚಾರಿಟಿ’ ಈ ಮದರ ತೆರೇಸಾ ಅವರು ಸ್ಥಾಪನೆ ಮಾಡಿರುವ ಸಂಸ್ಥೆಯ ‘ವಿದೇಶಿ ಕೊಡುಗೆ (ನಿಯಂತ್ರಣ) ಕಾನೂನಿ’ನಿಗನುಸಾರ (‘ಎಫ್‌ಸಿಆರ್‌ಎ’ ಪ್ರಕಾರ) ಆಗಿರುವ ನೋಂದಣಿಯ ನವೀಕರಣ ಮಾಡುವ ವಿಷಯದ ಅರ್ಜಿಯನ್ನು ಅರ್ಹತಾ ಷರತ್ತುಗಳು ಪೂರ್ಣ ಮಾಡದೇ ಇದ್ದರಿಂದ ಮತ್ತು ಕೆಲವು ಪ್ರತಿಕೂಲ ಮಾಹಿತಿ ಸಿಕ್ಕಿರುವುದರಿಂದ ಡಿಸೆಂಬರ್ ೨೫ ರಂದು ಅದನ್ನು ನಿರಾಕರಿಸಲಾಗಿದೆ.

ಈ ಮಾಹಿತಿ ಕೇಂದ್ರೀಯ ಗೃಹ ಸಚಿವಾಲಯವು ನೀಡಿದೆ. ‘ಮಿಶನರಿಸ್ ಆಫ್ ಚಾರಿಟಿ’ ಸಂಸ್ಥೆಯ ಯಾವುದೇ ಬ್ಯಾಂಕ್ ಖಾತೆಯನ್ನು ಗೃಹ ಸಚಿವಾಲವು ಸ್ಥಗಿತಗೊಳಿಸಿಲ್ಲ, ಆದರೆ ಭಾರತೀಯ ಸ್ಟೇಟ್ ಬ್ಯಾಂಕ್ ಸಂಸ್ಥೆಯು ಮಾಡಿರುವ ವಿನಂತಿಯ ಮೇರೆಗೆ ಖಾತೆ ಸ್ಥಗಿತಗೊಳಿಸಲಾಗಿದೆ’, ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರಕಾರವು ಕ್ರಿಸ್‌ಮಸ್ ಸಮಯದಲ್ಲಿ ಮದರ್ ತೆರೇಸಾ ಅವರ ಸಂಸ್ಥೆಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವಾಲಯವು ತುರ್ತಾಗಿ ಸ್ಪಷ್ಟೀಕರಣ ನೀಡಿದೆ.