ಬಿಜನೌರ (ಉತ್ತರಪ್ರದೇಶ) ಇಲ್ಲಿ ಇಬ್ಬರೂ ಗೂಂಡಾಗಳಿಂದ ಪೋಲಿಸ ಸಿಬ್ಬಂದಿಗೆ ಥಳಿತ !

ಪೋಲಿಸರ ರೈಫಲ್ ಕಸಿದು ಪಲಾಯನಗೈದ ಗೂಂಡಾಗಳು !

ಗೂಂಡಾಗಳಿಂದ ಹೊಡೆಸಿಕೊಳ್ಳುವ ಪೊಲೀಸರು ಜನರ ರಕ್ಷಣೆ ಏನು ಮಾಡುವರು ?

ಬಿಜನೌರ (ಉತ್ತರಪ್ರದೇಶ) – ಇಲ್ಲಿ ಇಬ್ಬರು ಗೂಂಡಾಗಳು ಪೊಲೀಸ್ ಸಿಬ್ಬಂದಿಗೆ ಥಳಿಸಿ ಅವರಿಂದ ರೈಫಲ್ ದೋಚಿದ್ದಾರೆ. ಭೂತಪುರಿ ತಿರಾಹಾ ಪೊಲೀಸ್ ಠಾಣೆಯಲ್ಲಿನ ಲಲಿತ್ ಕುಮಾರ ಇವರು ಥಳಿತಕ್ಕೊಳಗಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಇದರಲ್ಲಿ ಲಲಿತ್ ಕುಮಾರ್ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆ ವಿಷಯವಾಗಿ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಪೊಲೀಸರು ಈಗ ಈ ಗೂಂಡಾಗಳನ್ನು ಹುಡುಕುತ್ತಿದ್ದಾರೆ.