ರಿವಾ (ಮಧ್ಯಪ್ರದೇಶ) ಇಲ್ಲಿಯ ಭಾಜಪದ ಶಾಸಕ ಜನಾರ್ಧನ ಮಿಶ್ರಾ ಇವರ ಭ್ರಷ್ಟಾಚಾರಿಗಳನ್ನು ಬೆಂಬಲಿಸುವ ಹೇಳಿಕೆ !
|
ರಿವಾ (ಮಧ್ಯಪ್ರದೇಶ) – ನನ್ನ ಬಳಿ ಸರಪಂಚರ ಭ್ರಷ್ಟಾಚಾರದ ಬಗ್ಗೆ ದೂರು ನೀಡಬೇಡಿ. ಒಬ್ಬ ಸರಪಂಚನು ೧೫ ಲಕ್ಷ ರೂಪಾಯಿಯ ವರೆಗೂ ಭ್ರಷ್ಟಾಚಾರ ಮಾಡುತ್ತಿದ್ದರೆ, ಆ ವಿಷಯವಾಗಿ ನನಗೆ ಹೇಳಬೇಡಿ; ಏಕೆಂದರೆ ಅವನು ೭ ಲಕ್ಷ ರೂಪಾಯಿ ಖರ್ಚು ಮಾಡಿ ಚುನಾವಣೆ ಗೆದ್ದಿದ್ದಾನೆ ಮತ್ತು ಮುಂದಿನ ಚುನಾವಣೆಗಾಗಿ ೭ ಲಕ್ಷ ರೂಪಾಯಿ ಬೇಕಿದೆ. ಅದರಲ್ಲಿ ಈ ಬೆಲೆ ಏರಿಕೆಯ ೧ ಲಕ್ಷ ರೂಪಾಯಿ ಸೇರಿಸಿದರೆ ೧೫ ಲಕ್ಷ ರೂಪಾಯಿ ಆಗುತ್ತದೆ. ಹಾಗಾಗಿ ಸರಪಂಚರು ೧೫ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಭ್ರಷ್ಟಾಚಾರ ನಡೆಸಿದ್ದರೆ, ನಾನು ಅದನ್ನು ಭ್ರಷ್ಟಾಚಾರ ಎಂದು ತಿಳಿಯುತ್ತೇನೆ ಅಥವಾ ಹಗರಣ ಎಂದು ತಿಳಿಯುತ್ತೇನೆ.
…When people accuse sarpanch of corruption, I jokingly tell them that if corruption is up to Rs 15 lakhs don’t come to me…come only if it’s (corruption) beyond Rs 15 lakhs: BJP MP Janaradan Mishra in Rewa, Madhya Pradesh (27.12) pic.twitter.com/ImobGWecBH
— ANI (@ANI) December 28, 2021
ಪ್ರಸ್ತುತ ಈ ಸ್ಥಿತಿ ಇದೆ. ಇದು ಸಮಾಜದ ಬೆತ್ತಲೆ ಚಿತ್ರಣವಾಗಿದೆ ಮತ್ತು ಇದೆ ಕ್ರಮದಲ್ಲಿ ನೀವು ಮೇಲಿನ ಮೆಟ್ಟಲು ನೋಡಬಹುದು, ಎಂದು ಭಾಜಪದ ಸಂಸದ ಜನಾರ್ದನ ಮಿಶ್ರಾ ಅವರು ಒಂದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿದರು.