ಲುಧಿಯಾನಾ ಬಾಂಬ್‌ಸ್ಫೋಟದ ಮುಖ್ಯ ರೂವಾರಿ ಜಸವಿಂದರ ಸಿಂಹ ಮುಲತಾನಿ ಜರ್ಮನಿಯಲ್ಲಿ ಬಂಧನ

ಲುಧಿಯಾನಾ ಬಾಂಬ್‌ಸ್ಫೋಟ ಪ್ರಕರಣ

ನವ ದೆಹಲಿ – ಪಂಜಾಬಿನ ಲುಧಿಯಾನಾದ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ನಡೆಸಿರುವ ಪ್ರಕರಣದಲ್ಲಿ ಜರ್ಮನಿಯಲ್ಲಿ ಜಸವಿಂದರ ಸಿಂಹ ಮುಲತಾನಿ ಈ ಪ್ರಮುಖ ರೂವಾರಿಯನ್ನು ಬಂಧಿಸಲಾಗಿದೆ. ಪಂಜಾಬ ಪೊಲೀಸ್ ಸೇವೆಯಿಂದ ವಜಾಗೊಂಡಿರುವ ಪೊಲಿಸ್ ಪೇದೆಯು ಇಲ್ಲಿ ಬಾಂಬ್ ಜೋಡಿಸುತ್ತಿರುವಾಗ ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದ್ದನು. ಈ ಬಾಂಬ್‌ಸ್ಫೋಟದ ಸಂಚನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐ.ಎಸ್.ಐ. ಮತ್ತು ಪಾಕಿಸ್ತಾನದ ಗೂಂಡಾ ಹರವಿಂದರ ಸಿಂಹ ರಿಂದಾ ರಚಿಸಿದ್ದನು.

೧. ಜಸವಿಂದರ ಸಿಂಹ ಮುಲತಾನಿ ಲುಧಿಯಾನಾ ಮತ್ತು ದೇಶದಲ್ಲಿರುವ ಇತರ ನಗರಗಳಲ್ಲಿ ಬಾಂಬ್ ಸ್ಫೋಟವನ್ನು ನಡೆಸಿರುವ ‘ಸಿಖ್ ಫಾರ್ ಜಸ್ಟೀಸ್ ಈ ಖಲಿಸ್ತಾನಿ ಭಯೋತ್ಪಾದಕ ಸಂಸ್ಥೆಯ ಸಕ್ರಿಯ ಸದಸ್ಯನಾಗಿದ್ದಾನೆ. ಮುಲತಾನಿ ದೆಹಲಿ ಮತ್ತು ಮುಂಬಯಿಯಲ್ಲಿಯೂ ಬಾಂಬ್‌ಸ್ಫೋಟ ನಡೆಸಲು ಸಂಚು ರಚಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಖಲಿಸ್ತಾನ ಬೆಂಬಲಿಸುವವರೊಂದಿಗೆ ಮುಲತಾನಿಯ ಮೇಲೆ ಪಂಜಾಬ ಗಡಿಯಿಂದ ಶಸ್ತ್ರಾಸ್ತ್ರಗಳನ್ನು ಮತ್ತು ಅಮಲು ಪದಾರ್ಥಗಳ ಕಳ್ಳ ಸಾಗಾಣಿಕೆ ಮಾಡಿರುವ ಆರೋಪವಿದೆ. ಜಸವಿಂದರ ಸಿಂಹ ಮುಲತಾನಿಯು ಪಂಜಾಬದ ಹೋಶಿಯಾರಪೂರದ ಮುಕೆರಿಯಾದ ನಿವಾಸಿಯಾಗಿದ್ದಾನೆ. ೧೯೭೬ ನೇ ಇಸವಿಯಲ್ಲಿ ಜನಿಸಿರುವ ಮುಲತಾನಿಗೆ ಇಬ್ಬರು ಸಹೋದರರಿದ್ದು, ಇಬ್ಬರೂ ಜರ್ಮನಿಯಲ್ಲಿ ಅಂಗಡಿ ನಡೆಸುತ್ತಾರೆ. ಮುಲತಾನಿ ಪಾಕಿಸ್ತಾನಕ್ಕೆ ಹೋಗಿದ್ದನೋ ಅಥವಾ ಇಲ್ಲವೋ ಎನ್ನುವ ವಿಷಯದಲ್ಲಿ ತನಿಖಾ ದಳ ಅವನಲ್ಲಿ ವಿಚಾರಣೆ ಮಾಡುತ್ತಿದೆ. ಸದ್ಯಕ್ಕೆ ಜರ್ಮನಿಯ ತನಿಖಾ ದಳವು ಮುಲತಾನಿಯ ವಿಚಾರಣೆ ಮಾಡುತ್ತಿದೆ. ಮುಲತಾನಿಯ ವಿಚಾರಣೆಗಾಗಿ ಭಾರತೀಯ ತನಿಖಾ ದಳವು ಶೀಘ್ರದಲ್ಲಿ ಜರ್ಮನಿಗೆ ಹೋಗಲಿದೆ.

೨. ಇನ್ನೊಂದೆಡೆ ಪಾಕಿಸ್ತಾನದ ಗೂಂಡಾ ಹರವಿಂದರ ಸಿಂಹ ರಿಂದಾ ಪಂಜಾಬ, ಹರಿಯಾಣಾ, ಬಂಗಾಲ ಮತ್ತು ಮಹಾರಾಷ್ಟ್ರದ ಅಪರಾಧಗಳಲ್ಲಿ ಪರಾರಿಯಾಗಿದ್ದಾನೆ. ಅವನ ಮೇಲೆ ೧೦ ಹತ್ಯೆಗಳು, ೬ ಹತ್ಯೆಯ ಪ್ರಯತ್ನ ಮತ್ತು ೭ ದರೋಡೆ, ಶಸ್ತ್ರಾಸ್ತ್ರ ಕಾನೂನು, ಸುಲಿಗೆ ಹಣ, ಅಮಲು ಪದಾರ್ಥಗಳ ಕಳ್ಳ ಸಾಗಾಣಿಕೆ ಈ ರೀತಿ ಒಟ್ಟು ೩೦ ಅಪರಾಧಗಳು ದಾಖಲಾಗಿವೆ. ೨೦೧೭ ನೇ ಇಸವಿಯಲ್ಲಿ ರಿಂದಾ ಪೊಲೀಸರಿಂದ ತಪ್ಪಿಸಿಕೊಂಡಿದ್ದನು. ತದನಂತರ ಅವನು ಪಾಕಿಸ್ತಾನಕ್ಕೆ ಹೋಗಿರುವುದು ತಿಳಿದು ಬಂದಿತ್ತು.