ಜೀವನದಲ್ಲಿ ಸವಾಲುಗಳು ಇದ್ದೇ ಇರುವುದು, ಅದೇ ನಿಮ್ಮ ಬೇಟೆಯಾಗಿರುವುದು ! – ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರ ಉಪಸ್ಥಿತಿಯಲ್ಲಿ ಐಐಟಿ ಕಾನಪೂರನ ೫೪ ನೇ ಘಟಿಕೋತ್ಸವ !

ಕಾನಪುರ (ಉತ್ತರಪ್ರದೇಶ) – ಇಂದು ನೀವು ದೇಶದ ಸುವರ್ಣ ಕಾಲವನ್ನು ಪ್ರವೇಶಿಸುತ್ತಿದ್ದೀರಿ. ರಾಷ್ಟ್ರದ ಅಮೃತ ಕಾಲದ ಹಾಗೆ ಇದು ನಿಮ್ಮ ಜೀವನದ ಅಮೃತ ಕಾಲವಾಗಿದೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ಆದರೆ ಜೀವನದಲ್ಲಿ ಸವಾಲುಗಳು ಇದ್ದೇ ಇರುವುದು. ಅದರಿಂದ ಪಲಾಯನ ಮಾಡುವರು ಅದಕ್ಕೆ ಬಲಿಯಾಗುವರು. ಆದರೆ ಒಂದು ವೇಳೆ ನೀವು ಸವಾಲುಗಳನ್ನು ಹುಡುಕುತ್ತಾ ಹೋದರೆ ನೀವು ಬೇಟೆಗಾರ ಆಗುತ್ತೀರಿ ಮತ್ತು ಸವಾಲುಗಳು ನಿಮ್ಮ ಬೇಟೆ ಆಗಿದೆ, ಎಂದು ಪ್ರಧಾನಿ ಮೋದಿಯವರು ಐಐಟಿ ಕಾನಪೂರ್‌ನ ೫೪ ನೇ ಘಟಿಕೋತ್ಸವದಲ್ಲಿ ಮಾರ್ಗದರ್ಶನ ಮಾಡಿದರು. ಡಿಸೆಂಬರ್ ೨೮ ರಂದು ಈ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳಿಗೆ ಡಿಜಿಟಲ್ ಪದವಿಗಳನ್ನು ನೀಡಿದರು.

ಪ್ರಧಾನಿ ಮೋದಿ ತಮ್ಮ ಮಾತನ್ನು ಮುಂದುವರೆಸುತ್ತಾ,

೧೯೩೦ ನೇ ಕಾಲದಲ್ಲಿ ೨೦ ರಿಂದ ೨೫ ವಯಸ್ಸಿನ ಯುವಕರು, ೧೯೪೭ ರ ತನಕವೂ, ಸ್ವಾತಂತ್ರ್ಯ ಪಡೆಯುವ ಪ್ರವಾಸ ದೀರ್ಘ ಅನಿಸಿರಬೇಕು. ಅವರ ಜೀವನದಲ್ಲಿ ಇದು ಸುವರ್ಣ ಕಾಲವಾಗಿತ್ತು. ಸಂವೇದನಾಶೀಲತೆ, ಕುತೂಹಲ, ಕಲ್ಪನಾಶಕ್ತಿ ಮತ್ತು ಸೃಜನಶೀಲತೆ ಇದನ್ನು ನೀವು ಶಾಶ್ವತವಾಗಿ ಕಾಪಾಡಿಕೊಳ್ಳಿ. ‘ಜೀವನದಲ್ಲಿ ತಂತ್ರಜ್ಞಾನರಹಿತ ಇತರ ಎಲ್ಲ ವಿಷಯಗಳಲ್ಲಿ ಸಂವೇದನಾಶೀಲವಾಗಿರಿ’, ಎಂಬ ಮಹತ್ವಪೂರ್ಣ ಸಲಹೆಯನ್ನೂ ಪ್ರಧಾನಿಯವರು ವಿದ್ಯಾರ್ಥಿಗಳಿಗೆ ನೀಡಿದರು.