ಮುಂಬಯಿ – ಭಾರತದ ವಿಮಾನನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ಭಾರತೀಯ ಸಂಗೀತ ಕೇಳಲು ಸಿಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧಿ ಇವರು ಈ ವಿಷಯವಾಗಿ ದೇಶದ ವಿಮಾನ ಕಂಪನಿಗಳು ಮತ್ತು ವಿಮಾನ ನಿಲ್ದಾಣ ಸಂಚಾಲಕರಿಗೆ ಪತ್ರ ಬರೆದಿದ್ದಾರೆ. ಕೆಲವು ದಿನಗಳ ಹಿಂದೆ ‘ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಸರ್ಚ್’ ಈ ಸಂಸ್ಥೆಯ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಈ ಬಗ್ಗೆ ವಿನಂತಿಸಿತ್ತು. ಅನಂತರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. (ಒಂದು ವೇಳೆ ಈ ಸಂಸ್ಥೆಯು ವಿನಂತಿಸದಿದ್ದರೆ, ನಾಗರಿಕ ವಿಮಾನಯಾನ ಸಚಿವಾಲಯವು ನಿರ್ಣಯ ತೆಗೆದುಕೊಳ್ಳುತ್ತಿರಲಿಲ್ಲ, ಇದು ಅಷ್ಟೇ ಸತ್ಯವಾಗಿದೆ ! – ಸಂಪಾದಕರು)
ಉಷಾ ಪಾಧಿ ಇವರು ಪತ್ರದಲ್ಲಿ, ಜಗತ್ತಿನಾದ್ಯಂತ ಹೆಚ್ಚಿನ ವಿಮಾನಗಳಲ್ಲಿ ಆಯಾ ದೇಶಗಳ ಅತ್ಯುನ್ನತ ಹಾಡುಗಳನ್ನು ಕೇಳಿಸುತ್ತಾರೆ. ಉದಾಹರಣೆ ನೀಡುವುದಾದರೆ, ಅಮೇರಿಕ ವಿಮಾನಗಳಲ್ಲಿ ಜ್ಯಾಜ್ (ಪಾಶ್ಚಾತ್ಯ ಸಂಗೀತದ ಒಂದು ವಿಧ), ಆಸ್ಟ್ರಿಯಾದ ವಿಮಾನಗಳಲ್ಲಿ ಮೊಜಾರ್ಟ್ (೧೮ ನೇ ಶತಮಾನದ ಆಸ್ಟ್ರಿಯಾದ ಪ್ರಸಿದ್ಧ ಸಂಗೀತಗಾರ) ಮತ್ತು ಮಧ್ಯ-ಪೂರ್ವ ದೇಶಗಳಲ್ಲಿನ ವಿಮಾನಗಳಲ್ಲಿ ಅರಬಿ ಸಂಗೀತ ಕೇಳಿಸುತ್ತಾರೆ; ಆದರೆ ಭಾರತೀಯ ವಿಮಾನಗಳಲ್ಲಿ ಕೆಲವೊಮ್ಮೆ ಭಾರತೀಯ ಸಂಗೀತ ಕೇಳಲು ಸಿಗುತ್ತದೆ. ನಮ್ಮಲ್ಲಿ ಸಂಗೀತದ ಸಮೃದ್ಧ ಪರಂಪರೆಯೇ ಇದೆ. ನಮಗೆ ಅಭಿಮಾನವೆನಿಸುವಂತಹ ದೇಶದಲ್ಲಿ ಎಷ್ಟೋ ವಿಷಯಗಳಲ್ಲಿ ಸಂಗೀತವೂ ಒಂದಾಗಿದೆ ಎಂದು ಹೇಳಿದೆ.
ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಳಸಿ – ಸರ್ಕಾರ ಆದೇಶ https://t.co/DKMKvh7Koh#Flight #Airport #IndianMusic #KannadaNews
— PublicTV (@publictvnews) December 29, 2021