ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮಾಹಿತಿ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ ಕಾರ್ಯಕರ್ತರಿಗೆ ನೀಡಿದ ಪ್ರಕರಣದಲ್ಲಿ ಮತಾಂಧ ಪೊಲೀಸ್ ಸಿಬ್ಬಂದಿ ಅಮಾನತು

  • ಇಂತಹ ಪೊಲೀಸನನ್ನು ಬಂಧಿಸಿ ಅವನನ್ನು ನೌಕರಿಯಿಂದ ವಜಾಗೊಳಿಸುವುದು ಅಪೇಕ್ಷಿತವಿದೆ. ಕೇರಳದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ಇರುವುದರಿಂದ ಈ ಮತಾಂಧ ಪೊಲೀಸ್ ಸಿಬ್ಬಂದಿಯ ಮೇಲೆ ಕಠಿಣ ಕ್ರಮ ಜರುಗುವ ಸಾಧ್ಯತೆ ಕಡಿಮೆಯಿದೆ !
  • ಕೇರಳದಲ್ಲಿ ಮತಾಂಧ ಸಂಘಟನೆಗಳ ಜಿಹಾದಿ ಕಾರ್ಯಕರ್ತರು ಹಿಂದುತ್ವನಿಷ್ಠರ ಜೀವಗಳ ತೆಗೆಯುತ್ತಿದ್ದಾರೆ . ಆದ್ದರಿಂದ ಸಂಘದ ಕಾರ್ಯಕರ್ತರ ಮಾಹಿತಿ ಅವರ ವರೆಗೆ ತಲುಪಿದೆ ಮತ್ತು ಅದರ ದುರುಪಯೋಗ ಮಾಡಿಕೊಳ್ಳುತ್ತಾ ಉಗ್ರರು ಅವರ ಮೇಲೆ ಆಕ್ರಮಣ ನಡೆಸಿದರೆ ಅದಕ್ಕೆ ಯಾರು ಹೊಣೆ ?

ಇಡುಕ್ಕಿ (ಕೇರಳ) – ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮಾಹಿತಿಯನ್ನು ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷ ಇರುವ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ (ಎಸ್.ಡಿ.ಪಿ.ಐ. ನ) ಕಾರ್ಯಕರ್ತರಿಗೆ ನೀಡಿರುವ ಪ್ರಕರಣದಲ್ಲಿ ಅನಾಜ್ ಎಂಬ ಪೊಲೀಸ್ ಸಿಬ್ಬಂದಿಗೆ ಅಮಾನತು ಮಾಡಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಚ್ಚರಿಕೆಯ ಒಂದು ಭಾಗ ಎಂದು ಪೊಲೀಸರು ಸಂಘದ ಕಾರ್ಯಕರ್ತರ ಮಾಹಿತಿ ಕಲೆ ಹಾಕಿದ್ದರು. ಇದೇ ಸಮಯದಲ್ಲಿ ಎಸ್.ಡಿ.ಪಿ.ಐ. ಕಾರ್ಯಕರ್ತನನ್ನು ಒಂದು ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆ ಸಮಯದಲ್ಲಿ ಅನಾಜ ಈತ ಈ ಮಾಹಿತಿ ಆ ಕಾರ್ಯಕರ್ತನಿಗೆ ನೀಡಿದ್ದನು. ಈ ಘಟನೆಯ ವಿಚಾರಣೆ ಥೋಡ್ಡಪುಝಾ ಇಲ್ಲಿಯ ಉಪಅಧೀಕ್ಷಕರು ನಡೆಸಿದ ನಂತರ ಅನಾಜ ಈತ ತಪ್ಪಿತಸ್ಥ ಎಂದು ತಿಳಿದುಬಂದಿದೆ. ಅದರ ನಂತರ ಆತನನ್ನು ಅಮಾನತುಗೊಳಿಸಲಾಗಿದೆ.