ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ಹಿಂದೂವಿರೋಧಿ ಘೋಷಣೆ !
|
ಬೆಂಗಳೂರು – ೨೦೨೩ ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ವಿಧಾನಸಭೆಯ ಮೊದಲ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂಬ ಹಿಂದೂದ್ರೋಹಿ ಹೇಳಿಕೆಯನ್ನು ಕಾಂಗ್ರೆಸ್‌ನ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ವಿಪಕ್ಷದ ನಾಯಕ ಸಿದ್ಧರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಹೇಳಿದರು. ಈಗಿನ ಭಾಜಪ ಸರಕಾರವು ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಅಂಗೀಕರಿಸಿದ್ದು, ಇದೀಗ ವಿಧಾನ ಪರಿಷತ್ತಿನಲ್ಲಿ ಅನುಮೋದನೆಗಾಗಿ ಮಂಡಿಸಲಾಗಿದೆ.
Karnataka Congress promises to repeal ‘Anti-Conversion Bill’ if voted to power in 2023 https://t.co/OipyuaNfQm
— Republic (@republic) December 27, 2021
ಸಿದ್ಧರಾಮಯ್ಯ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ಕೂಡ ಬಲವಂತದ ಮತಾಂತರವನ್ನು ವಿರೋಧಿಸಿದ್ದೇನೆ. ಬಲವಂತದ ಮತಾಂತರದ ವಿರುದ್ಧ ಸಂವಿಧಾನದಲ್ಲಿ ಅವಕಾಶವಿದೆ; ಹಾಗಾದರೆ ಹೊಸ ಕಾನೂನನ್ನು ಜಾರಿಗೊಳಿಸುವ ಅಗತ್ಯ ಏನಿತ್ತು ? ಪ್ರಜ್ಞಾವಂತರೆಲ್ಲರೂ ಈ ಕಾನೂನನ್ನು ವಿರೋಧಿಸಬೇಕು. ಮತ್ತೊಂದೆಡೆ ಬೌದ್ಧ, ಜೈನ, ಲಿಂಗಾಯತ ಮತ್ತು ಸಿಕ್ಖ್ ಧರ್ಮಗಳು ಹಿಂದೂ ಧರ್ಮದ ಭಾಗವಾಗಿದೆ ಎಂದು ಹಬ್ಬಿಸಲಾಗುತ್ತಿದೆ. ಇದೊಂದು ಅಪಾಯಕಾರಿ ಪ್ರಯತ್ನ; ಏಕೆಂದರೆ ಈ ಧರ್ಮಗಳು ವೈದಿಕ ಧರ್ಮಕ್ಕೆ ವಿರುದ್ಧವಾಗಿ ಸ್ಥಾಪಿಸಲ್ಪಟ್ಟವು. ಇದನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ, ಎಂದಿದ್ದಾರೆ. (ಈ ಪಂಥಗಳು ಹಿಂದೂ ಧರ್ಮದಿಂದ ಹುಟ್ಟಿಕೊಂಡಿರುವುದರಿಂದ, ಅವು ಹಿಂದೂ ಧರ್ಮದ ಒಂದು ಭಾಗವೆಂದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲದೇ ೧ ಸಾವಿರದ ೪೦೦ ವರ್ಷಗಳ ಹಿಂದೆ ಇಸ್ಲಾಂ ಧರ್ಮವು ಭೂಮಿಯ ಮೇಲೆ ಅಸ್ತಿತ್ವದಲ್ಲಿಲ್ಲದಿದ್ದಾಗ ಜನರು ಮೂರ್ತಿಯನ್ನು ಪೂಜಿಸುತ್ತಿದ್ದರು, ಇದು ಇತಿಹಾಸವಿದೆ ಮತ್ತು ೨ ಸಾವಿರ ವರ್ಷಗಳ ಹಿಂದೆ ಯೇಸುವಿನ ಜನ್ಮವಾಗಿ ಕ್ರೈಸ್ತ ಧರ್ಮ ಸ್ಥಾಪನೆಯಾಗುವ ಮೊದಲು ಹಿಂದೂ ಧರ್ಮವನ್ನು ಪಾಲಿಸಲಾಗುತ್ತಿತ್ತು, ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿದ್ದರಿಂದ ಬೌದ್ಧರು, ಜೈನರು ಮತ್ತು ಸಿಕ್ಖ್‌ರನ್ನು ಹಿಂದೂ ಧರ್ಮದ ಭಾಗವೆಂದು ಕರೆಯುವುದು ಸೂಕ್ತವಾಗಿದೆ. ಅಲ್ಲದೆ, ಲಿಂಗಾಯತವು ಹಿಂದೂ ಧರ್ಮದ ಇಂದು ಸಮುದಾಯವಾಗಿದೆ, ಅದನ್ನು ಹಿಂದೂಗಳಿಂದ ಬೇರೆ ಎಂದು ತೋರಿಸುವ ಅಪಾಯಕಾರಿ ಪ್ರಯತ್ನವು ಹಿಂದೂದ್ರೋಹಿಗಳಿಂದ ಮಾಡಲಾಗುತ್ತಿದೆ. ಇದನ್ನು ಹಿಂದೂಗಳು ಕಾನೂನಿನ ಮೂಲಕ ವಿರೋಧಿಸುವುದು ಆವಶ್ಯಕವಾಗಿದೆ ! – ಸಂಪಾದಕರು)