ಖಜುರಾಹೋ (ಮಧ್ಯಪ್ರದೇಶ) ದಿಂದ ಛತ್ತೀಸಗಢ ಪೊಲೀಸರಿಂದ ಕಾಲೀಚರಣ ಮಹಾರಾಜರ ಬಂಧನ !
ಧರ್ಮಸಂಸತ್ತಿನಲ್ಲಿ ಮೋಹನದಾಸ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎನ್ನಲಾಗುವ ಪ್ರಕರಣದಲ್ಲಿ ಛತ್ತೀಸಗಢದ ಪೊಲೀಸರು ಮಧ್ಯಪ್ರದೇಶದ ಖಜುರಾಹೋದಿಂದ ಕಾಲೀಚರಣ ಮಹಾರಾಜರನ್ನು ಬಂಧಿಸಿದ್ದಾರೆ.
ಧರ್ಮಸಂಸತ್ತಿನಲ್ಲಿ ಮೋಹನದಾಸ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎನ್ನಲಾಗುವ ಪ್ರಕರಣದಲ್ಲಿ ಛತ್ತೀಸಗಢದ ಪೊಲೀಸರು ಮಧ್ಯಪ್ರದೇಶದ ಖಜುರಾಹೋದಿಂದ ಕಾಲೀಚರಣ ಮಹಾರಾಜರನ್ನು ಬಂಧಿಸಿದ್ದಾರೆ.
ಮಾರ್ನೆಮಿಕಟ್ಟೆ ಪ್ರದೇಶದ ಕೊರಗಜ್ಜನ ದೇವಸ್ಥಾನದ ಎದುರು ಉಪಯೋಗಿಸಿರುವ ಗರ್ಭನಿರೋಧಕ ಮತ್ತು ಏಸುವಿನ ಲೇಖನಗಳ ಭಿತ್ತಿಪತ್ರಗಳು ಇಟ್ಟಿರುವ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳು ಮತಾಂತರಿತ ಕ್ರೈಸ್ತ ದೇವದಾಸ ದೇಸಾಯಿ ಈತನನ್ನು ಬಂಧಿಸಿದ್ದಾರೆ.
ಭಾಜಪಕ್ಕೆ ಮತವನ್ನು ನೀಡಿದರೆ ೫೦ ರೂಪಾಯಿಯಲ್ಲಿ ಉತ್ತಮ ದರ್ಜೆಯ ಮದ್ಯ ನೀಡುವೆವು ಎಂದು ಭಾಜಪದ ತೆಲಂಗಾಣ ಪ್ರದೇಶಾಧ್ಯಕ್ಷರಾದ ಸೋಮೂ ವೀರರಾಜು ಆಶ್ವಾಸನೆ ನೀಡಿದ್ದಾರೆ.
ಡಿಸೆಂಬರ್ ೨೬ ರಂದು ಪಿರನವಾಡಿ ರಸ್ತೆ, ನಾವಗೆ ಕ್ರಾಸ್ ಗಣೇಶ ಬಾಗ್ ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮುಖ್ಯ ವಕ್ತಾರರೆಂದು ಭಾಗ್ಯನಗರದ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು.
ರಾಜ್ಯದ ಎಲ್ಲಾ ಸರಕಾರಿಕರಣಗೊಂಡ ದೇವಸ್ಥಾನಗಳನ್ನು ಮುಕ್ತಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಈ ಸಂಬಂಧ ಮುಂಬರುವ ಬಜೆಟ್ ಅಧಿವೇಶನದಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ನಾನು ಮುಸಲ್ಮಾನರನ್ನೂ ಆರೋಪಿಸುತ್ತಿಲ್ಲ, ಆದರೆ ಎಷ್ಟು ಉಗ್ರರಿದ್ದಾರೋ ಅವರೆಲ್ಲರೂ ಮುಸಲ್ಮಾನರೇ ಆಗಿದ್ದಾರೆ ಇದು ಸತ್ಯವಾಗಿದೆ, ಎಂದು ರಾಜ್ಯದ ಕೈಸರಗಂಜ ಇಲ್ಲಿಯ ಭಾಜಪದ ಶಾಸಕ ಮತ್ತು ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಬೃಜಭೂಷಣ ಶರಣ ಸಿಂಹ ಇವರು ಒಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಚಿತ್ತೋಡದ ಭಾಜಪದ ಶಾಸಕ ಚಂದ್ರಪ್ರಕಾಶ ಜೋಶಿ ಇವರು ಚಿತ್ತೋಡಗಡದಲ್ಲಿ ಇತ್ತಿಚೆಗೆ ಆರಂಭಿಸಲಾದ ಲೇಸರ್ ಶೋವನ್ನು ನಿಲ್ಲಿಸಿದ್ದಾರೆ. ಈ ಲೇಸರ್ ಶೋನಲ್ಲಿ ರಾಣಿ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಇವರ ಸಂದರ್ಭದ ಪ್ರಸಂಗಗಳು ತೋರಿಸಲಾಗಿತ್ತು.
ಜಮ್ಮು-ಕಾಶ್ಮೀರದ ಕುಲಗಾಮ್ ಮತ್ತು ಅನಂತನಾಗ ಈ ಜಿಲ್ಲೆಗಳಲ್ಲಿ ನಡೆದಿರುವ ಬೇರೆಬೇರೆ ಚಕಮಕಿಗಳಲ್ಲಿ ಭದ್ರತಾಪಡೆಯು ೬ ಭಯೋತ್ಪಾದಕರನ್ನು ಸಾಯಿಸಿದೆ. ಈ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾನೆ.
ಮನು, ಚಾಣಕ್ಯ ಮತ್ತು ಬೃಹಸ್ಪತಿಯವರು ವಿಕಸಿತಗೊಳಿಸಿದ ಪುರಾತನ ಭಾರತೀಯ ನ್ಯಾಯವ್ಯವಸ್ಥೆಯೇ ಭಾರತೀಯರಿಗೆ ಯೋಗ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ ನಝೀರ ಇವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಒಂದು ಶಾಲೆಯಲ್ಲಿ ಅಪ್ರಾಪ್ತ ಮಕ್ಕಳಿಗೆ ನೆಹರು ಪಾರ್ಕಿನಲ್ಲಿ ಭಾರತಕ್ಕೆ ಹಿಂದೂ ರಾಷ್ಟ್ರವನ್ನಾಗಿಸುವ ಬಗ್ಗೆ ಪ್ರತಿಜ್ಞೆ ಮಾಡಿರುವ ವಿಡಿಯೋವನ್ನು ‘ಸುದರ್ಶನ ನ್ಯೂಸ್’ ಈ ರಾಷ್ಟ್ರೀಯ ಹಿಂದಿ ವಾರ್ತಾವಾಹಿನಿಯ ಸಂಪಾದಕ ಶ್ರೀ. ಸುರೇಶ ಚೌಹಾಣಕೆ ಇವರು ಟ್ವೀಟ್ ಮಾಡಿದ್ದಾರೆ.