ಅಮೇರಿಕಾದಲ್ಲಿರುವ ಹಿಂದೂಗಳಿಗೆ ಭದ್ರತೆ ಒದಗಿಸಿ ! – ಅಮೇರಿಕಾದ ಸಂಸದರ ಬೇಡಿಕೆ

ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಘಟನೆಗಳು ಹೆಚ್ಚಾಗುತ್ತಿವೆ. ಹಿಂದೂ ಮತ್ತು ಅವರ ಆಸ್ತಿ-ಪಾಸ್ತಿಗಳನ್ನು ಗುರಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದೂಗಳ ಸಂಘಟನೆಗಳು ಅಮೇರಿಕಾದ ಕ್ಯಾಪಿಟಲ್ ಹಿಲ್ ನಲ್ಲಿ `ನ್ಯಾಶನಲ್ ಹಿಂದೂ ಎಡ್ವೊಕೆಸಿ ಡೆ ಆನ್ ದಿ ಹಿಲ್’ ಕಾರ್ಯಕ್ರಮದ ಆಯೋಜನೆ ಮಾಡಿತ್ತು.

ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ಕಾಳಿಮಾತೆಯ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ : ಸ್ಕರ್ಟ್ ಅಥವಾ ಜೀನ್ಸ್ ಗೆ ನಿಷೇಧ !

ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ‘ಬಾವೇ ವಾಲಿ ಮಾತಾ’ ದೇವಸ್ಥಾನದ ವ್ಯವಸ್ಥಾಪಕರಿಂದ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಿದ್ದಾರೆ. ಜಮ್ಮು ನಗರದಲ್ಲಿ ಮೊದಲ ಬಾರಿಗೆ ಈ ರೀತಿಯ ನಿಯಮ ರೂಪಿಸಿ ಅದರ ಫಲಕ ಶ್ರೀ ಕಾಳಿ ಮಾತೆಯ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಹಾಕಲಾಗಿದೆ.

ಉದಯಪುರದಲ್ಲಿ ಐತಿಹಾಸಿಕ ಮತ್ತು ಎಲ್ಲಕ್ಕಿಂತ ದೊಡ್ಡ ದೇವಸ್ಥಾನದಲ್ಲಿ ಡ್ರೆಸ್ ಕೋಡ ಜಾರಿ !

ಐತಿಹಾಸಿಕ ಮತ್ತು ಎಲ್ಲಕ್ಕಿಂತ ದೊಡ್ಡ ಜಗದೀಶ ದೇವಸ್ಥಾನದಲ್ಲಿ ತುಂಡು ಬಟ್ಟೆ ಧರಿಸಲು ನಿಷೇಧಿಸಲಾಗಿದೆ. ತುಂಡು ಟಿ ಶರ್ಟ್, ಜೀನ್ಸ್, ಬರ್ಮುಡಾ, ಮಿನಿಸ್ಕರ್ಟ್, ನೈಟ ಸೂಟ್ ಮುಂತಾದ ಬಟ್ಟೆ ಧರಿಸಿ ಬರುವವರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷೇಧಿಸಲಾಗಿದೆ.

ಟೆಕ್ಸಾಸ್ (ಅಮೆರಿಕಾ) ನಲ್ಲಿ ಗುರು ಪೂರ್ಣಿಮೆಯ ದಿನ ೧೦ ಸಾವಿರ ಜನರಿಂದ ಶ್ರೀಮದ್ಭಗವದ್ಗೀತೆಯ ಸಾಮೂಹಿಕ ಪಠಣ !

ಆಲನ್ ಈಸ್ಟ್ ಸೆಂಟರ್ ನಲ್ಲಿ ಜುಲೈ 3 ರಂದು ಗುರುಪೂರ್ಣಿಮೆಯ ನಿಮಿತ್ತ ೧೦ ಸಾವಿರ ಜನರು ಸಾಮೂಹಿಕವಾಗಿ ಶ್ರೀಮದ್ಭಗವದ್ಗೀತೆಯನ್ನು ಪಠಿಸಿದರು. ಈ ವೇಳೆ ೭೫೦ ಕ್ಕೂ ಹೆಚ್ಚು ಮಂತ್ರಗಳನ್ನು ಪಠಣ ಮಾಡಲಾಯಿತು. ‘ಯೋಗ ಸಂಗೀತ ಟ್ರಸ್ಟ್ ,ಅಮೆರಿಕಾ’ ಮತ್ತು ‘ಎಸ್.ಜಿ.ಎಸ್. ಗೀತಾ ಫೌಂಡೇಶನ್’ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಒಪ್ಪಿಗೆಯಿಂದ ದೈಹಿಕ ಸಂಬಂಧದ ವಯಸ್ಸಿನ ಮಿತಿ ೧೬ ಮಾಡಬೇಕು !

ಒಪ್ಪಿಗೆಯಿಂದ ದೈಹಿಕ ಸಂಬಂಧ ಇರಿಸಲು ೧೮ ವರ್ಷದ ಬದಲು ೧೬ ವರ್ಷ ಮಾಡಬೇಕೆಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ಗ್ವಾಲಿಯರ್ ಖಂಡ ಪೀಠದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಒಂದು ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ಮನವಿ ಮಾಡಿದೆ.

ಹಿಂದೂ ರಾಷ್ಟ್ರದ ಈ ಧರ್ಮಯುದ್ಧದಲ್ಲಿ ಎಷ್ಟೇ ಅಡಚಣೆ ಬಂದರೂ ನಾವು ನಿರಂತರವಾಗಿ ಮುಂದೆ ಹೋಗುವೆವು ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲಾ ಧರ್ಮಾಭಿಮಾನಿ ಹಿಂದೂಗಳು ಧರ್ಮಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಆದ್ದರಿಂದ, ಈ ಕಾರ್ಯದಲ್ಲಿ ಸ್ಥೂಲ ಮತ್ತು ಸೂಕ್ಷ್ಮ ಸ್ತರದಲ್ಲಿ ವಿವಿಧ ಅಡಚಣೆಗಳು ಬರುತ್ತಿರುತ್ತವೆ.

ಗರ್ಭಿಣಿಯರು ‘ರಾಮಾಯಣ’ ಮತ್ತು ‘ಸುಂದರಕಾಂಡ’ವನ್ನು ಓದಬೇಕು ! – ತೆಲಂಗಾಣದ ರಾಜ್ಯಪಾಲ ತಮಿಲಿಸಾಯಿ ಸೌಂದರರಾಜನ್

ಗರ್ಭಿಣಿಯರು ಸಂಸ್ಕಾರಿ ಮತ್ತು ದೇಶಭಕ್ತ ಮಕ್ಕಳಿಗೆ ಜನ್ಮ ನೀಡಬೇಕು, ಎಂದು ಹೇಳಿದರು.

ಎಲ್ಲಿಯವರೆಗೆ ಹಿಂದೂಗಳಿಗೆ ‘ಸನಾತನ ಎಂದರೆ ಏನು ?’ ಎಂಬುದು ದೇವಸ್ಥಾನಗಳಲ್ಲಿ ಕಲಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಮತಾಂತರ ಆಗುತ್ತಲೇ ಇರುವುದು !

ಎಲ್ಲಿಯವರೆಗೆ ಭಾರತದಲ್ಲಿರುವ ಪ್ರತಿಯೊಂದು ದೇವಸ್ಥಾನಗಳು ಹಿಂದೂಗಳಿಗೆ ಸನಾತನವೆಂದರೆ ಏನು? ಹಿಂದೂ ಎಂದರೆ ಏನು? ಎಂದು ಕಲಿಸುವುದಿಲ್ಲವೋ, ಅಲ್ಲಿಯವರೆಗೆ ಮತಾಂತರದ ಘಟನೆಗಳು ನಡೆಯುತ್ತಲೇ ಇರುತ್ತವೆ

ಭಾರತೀಯ ಸಂಸ್ಕೃತಿಯ ಜಾಗತೀಕರಣ ನಡೆಯುತ್ತಿದೆ ! – ವಿದೇಶಾಂಗ ಸಚಿವ ಎಸ್. ಜೈಶಂಕರ್

ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಹೊಸ ಮಾರ್ಗಗಳನ್ನು ಶೋಧಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನ ಇದಕ್ಕೆ ಉತ್ತಮ ಉದಾಹರಣೆವಾಗಿದೆ.

ಲಿಂಗ ಬದಲಾವಣೆಯನ್ನು ವೈಭವೀಕರಿಸುವ ‘ಸ್ಟಾರ್‌ಬಕ್ಸ್’ ಕಂಪನಿಯ ವಿರುದ್ಧ ಹಿಂದೂಗಳ ಆಕ್ರೋಶ !

‘ಸ್ಟಾರ್‌ಬಕ್ಸ್’ ಕಂಪನಿಯ ಹೊಸ ಜಾಹೀರಾತಿನಲ್ಲಿ, ಲಿಂಗ ಪರಿವರ್ತನೆಯ ವಿಕೃತತೆಯನ್ನು ವೈಭವೀಕರಿಸಿದೆ. ಇದರಲ್ಲಿ ಒಬ್ಬ ಹುಡುಗ ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಹುಡುಗಿಯಾಗಲು ಲಿಂಗವನ್ನು ಬದಲಾಯಿಸುವುದನ್ನು ತೋರಿಸಲಾಗಿದೆ ಮತ್ತು ಪೋಷಕರು ಅದನ್ನು ಶಾಂತವಾಗಿ ಒಪ್ಪಿಕೊಳ್ಳುತ್ತಾರೆ ಎಂಬ ಸಂದೇಶವನ್ನು ನೀಡುತ್ತದೆ.