ಎಲ್ಲಿಯವರೆಗೆ ಹಿಂದೂಗಳಿಗೆ ‘ಸನಾತನ ಎಂದರೆ ಏನು ?’ ಎಂಬುದು ದೇವಸ್ಥಾನಗಳಲ್ಲಿ ಕಲಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಮತಾಂತರ ಆಗುತ್ತಲೇ ಇರುವುದು !

ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು ! – ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಂದ ಕರೆ

ಸಾಗರ (ಮಧ್ಯಪ್ರದೇಶ) – `ದಿ ಕೇರಳ ಸ್ಟೋರಿ’ ಈ ಚಿತ್ರ ಒಂದು ಸತ್ಯ ಘಟನೆಯನ್ನು ಆಧರಿಸಿದೆ. ಈ ದೇಶದ ಸದ್ಯದ ಸ್ಥಿತಿಯಾಗಿದ್ದು, ನಾವೆಲ್ಲ ಹಿಂದೂಗಳು ನಿದ್ರಿಸ್ಥರಾಗಿದ್ದೇವೆ. ಜನರು ಅರ್ಥ ಮಾಡಿಕೊಳ್ಳುವುದಿಲ್ಲ. ಎಲ್ಲರೂ ನನಗೆ `ನಾನು ಪ್ರಚೋದನಕಾರಿ ಹೇಳಿಕೆ ನೀಡುತ್ತೇನೆ’ ಎಂದು ಹೇಳುತ್ತಾರೆ. ನನ್ನ ಹೇಳಿಕೆ ಪ್ರಚೋದನಕಾರಿಯಲ್ಲ. ಬದಲಾಗಿ ನಾನು ಹಿಂದೂಗಳನ್ನು ಜಾಗೃತಗೊಳಿಸುವುದಕ್ಕಾಗಿ ಹೇಳುತ್ತೇನೆ. ನಡೆದಿರುವುದನ್ನೇ ಈ ಚಲನಚಿತ್ರದಲ್ಲಿ ತೋರಿಸಲಾಗಿದೆ. ಹಿಂದೂಗಳ ದುರ್ದೈವವೆಂದರೆ, ಎಲ್ಲಿಯವರೆಗೆ ಭಾರತದಲ್ಲಿರುವ ಪ್ರತಿಯೊಂದು ದೇವಸ್ಥಾನಗಳು ಹಿಂದೂಗಳಿಗೆ ಸನಾತನವೆಂದರೆ ಏನು? ಹಿಂದೂ ಎಂದರೆ ಏನು? ಎಂದು ಕಲಿಸುವುದಿಲ್ಲವೋ, ಅಲ್ಲಿಯವರೆಗೆ ಮತಾಂತರದ ಘಟನೆಗಳು ನಡೆಯುತ್ತಲೇ ಇರುತ್ತವೆಯೆಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಹೇಳಿದ್ದಾರೆ. ಇಲ್ಲಿನ ಜಯಸೀನಗರದಲ್ಲಿ 3 ದಿನಗಳಕಾಲ ಹನುಮಂತ ಕಥೆಯನ್ನು ಆಯೋಜಿಸಲಾಗಿತ್ತು. ಇದರ ಎರಡನೇಯ ದಿನದಂದು ಪ್ರಶ್ನೋತ್ತರ ಸತ್ರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಒಬ್ಬ ಯುವಕನು `ದಿ ಕೇರಳ ಸ್ಟೋರಿ’ಯಲ್ಲಿ 3 ಯುವತಿಯರ ಮತಾಂತರಗೊಂಡಿರುವುದನ್ನು ತೋರಿಸಲಾಗಿದೆ. ಇದರ ಬಗ್ಗೆ ನೀವು ಏನು ಹೇಳಬಯಸುತ್ತೀರಿ? ‘ ಎಂದು ಪ್ರಶ್ನೆಯನ್ನು ಕೇಳಿದ್ದನು. ಇದಕ್ಕೆ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಮೇಲಿನಂತೆ ಉತ್ತರಿಸಿದರು.

ಧೀರೇಂದ್ರಕೃಷ್ಣ ಶಾಸ್ತ್ರಿಯವರು ತಮ್ಮ ಮಾತನ್ನು ಮುಂದುವರಿಸುತ್ತಾ, ”ಶ್ರೀಮದ್ಭವದ್ಗೀತೆಯಲ್ಲಿ ಭಗವಾನ ಶ್ರೀಕೃಷ್ಣ ಅರ್ಜುನನಿಗೆ, ”ಬೇರೆ ಧರ್ಮದ ವಿಚಾರ ಮಾಡುವುದಕ್ಕಿಂತ ಸ್ವಂತ ಧರ್ಮದಲ್ಲಿ ಸಾಯುವುದು ಮೇಲು” ಎಂದು ಹೇಳಿದ್ದಾರೆ. ಆದ್ದರಿಂದಲೇ ಸಮುದ್ರದಲ್ಲಿ ಎಸೆದ ನಾಣ್ಯ ಮರಳಿ ಸಿಗುವುದಿಲ್ಲ, ಎನ್ನುವುದರ ಮೇಲೆ ನಮಗೆ ಎಷ್ಟು ವಿಶ್ವಾಸವಿದೆಯೋ, ಅಷ್ಟೇ ವಿಶ್ವಾಸ ಇತರೆ ಧರ್ಮದವರ ಮತ್ತು ಪಂಥದ ವ್ಯಕ್ತಿಗಳ ಮೇಲೆಯೂ ಇಡಬೇಕು’’ಅಂದರೆ ಅವರು ನಮ್ಮೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸುವುದಿಲ್ಲವೆಂದೇ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಹೇಳಲು ಪ್ರಯತ್ನಿಸಿದರು.

(ಸೌಜನ್ಯ – Aaj Tak)