Russia Ukraine Cease Fire Final : ರಷ್ಯಾದಿಂದ ಯುಕ್ರೇನ್ ವಿರುದ್ಧದ ಕದನ ವಿರಾಮಕ್ಕೆ ರಾಜಿ !

ಯುದ್ಧವಿರಾಮಕ್ಕಾಗಿ ಪುತಿನ್ ಇವರಿಂದ ಟ್ರಂಪ್ ಮತ್ತು ಮೋದಿ ಮುಂತಾದವರಿಗೆ ಆಭಾರ ಮನ್ನಣೆ !

ಮಾಸ್ಕೋ (ರಷ್ಯಾ) – ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ಯುಕ್ರೇನ ಜೊತೆಗಿನ್ ಯುದ್ಧವನ್ನು ನಿಲ್ಲಿಸುವ ಸಿದ್ಧತೆಯನ್ನು ತೋರಿದ್ದಾರೆ. ಅಮೇರಿಕಾದ ರಾಷ್ಟ್ರಾಧ್ಯಕ್ಷ ಟ್ರಂಪ್ ಇವರು ೩೦ ದಿನಗಳ ಯುದ್ಧವಿರಾಮದ ಪ್ರಸ್ತಾವ ಮಂಡಿಸಿದ್ದಾರೆ. ಬೇಲಾರೂಸನ ರಾಷ್ಟ್ರಾಧ್ಯಕ್ಷ ಅಲೆಕ್ಸಾಂಡರ್ ಲುಕಾಶೇಂಕೊ ಇವರ ಜೊತೆಗೆ ನಡೆದಿರುವ ಪತ್ರಕರ್ತರ ಸಭೆಯಲ್ಲಿ ಪುತಿನ್ ಇವರು, ‘ನಾವು ಯುದ್ಧ ನಿಲ್ಲಿಸುವ ಪ್ರಸ್ತಾವನೆಗೆ ಬೆಂಬಲ ನೀಡುತ್ತೇವೆ; ಆದರೆ ನಮ್ಮ ಇನ್ನೊಂದು ವಿಚಾರ ಇದೆ. ಎರಡು ದೇಶದಲ್ಲಿನ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಂಡುಹಿಡಿದು ಯುದ್ಧ ನಿಷೇಧ ಮಾಡಬೇಕು. ಸಂಕಷ್ಟದ ಮೂಲ ಕಾರಣ ಹುಡುಕಿ ಅದರ ಮೇಲೆ ಉಪಾಯ ಯೋಜನೆ ಮಾಡುವುದು ಆವಶ್ಯಕವಾಗಿದೆ, ಎಂದು ಹೇಳಿದರು. ಅದರ ಜೊತೆಗೆ ಪುತಿನ್ ಇವರು ಮಾತು ಮುಂದುವರಿಸುತ್ತಾ, ಯುಕ್ರೇನಿನ ನಿರ್ಣಯದ ಕುರಿತು ಇಷ್ಟೊಂದು ಗಮನ ಇರಿಸಿರುವ ಅಮೆರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಾಗೂ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ನಾಯಕರಿಗೆ ಧನ್ಯವಾದ ಹೇಳುತ್ತೇನೆ; ಕಾರಣ ಅವರ ಉದ್ದೇಶ ಒಂದು ದೊಡ್ಡ ಧ್ಯೇಯದ ಪ್ರಾಪ್ತಿ ಮಾಡುವುದಾಗಿದೆ, ಅದರಿಂದ ಜೀವ ಮತ್ತು ಆರ್ಥಿಕ ಹಾನಿ ತಪ್ಪಿಸಬಹುದು.

ಯುಕ್ರೇನಿನ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಝೇಲಾಕ್ಷಿ ಇವರು, ರಷ್ಯಾದ ಅಧ್ಯಕ್ಷ ಪುತಿನ್ ಇವರು ಯುದ್ಧ ನಿಲ್ಲಿಸುವುದಿಲ್ಲ; ಆದರೆ ಇದು ನೇರ ಟ್ರಂಪ್ ಇವರಿಗೆ ಹೇಳಲು ಹೆದರುತ್ತದ್ದಾರೆ, ಎಂದು ಹೇಳಿದರು.