ಗರ್ಭಿಣಿಯರು ‘ರಾಮಾಯಣ’ ಮತ್ತು ‘ಸುಂದರಕಾಂಡ’ವನ್ನು ಓದಬೇಕು ! – ತೆಲಂಗಾಣದ ರಾಜ್ಯಪಾಲ ತಮಿಲಿಸಾಯಿ ಸೌಂದರರಾಜನ್

ತೆಲಂಗಾಣದ ರಾಜ್ಯಪಾಲ ತಮಿಲಿಸಾಯಿ ಸೌಂದರರಾಜನ್

ಭಾಗ್ಯನಗರ (ತೆಲಂಗಾಣ) – ನಾವು ವಿವಿಧ ಗ್ರಾಮಗಳಲ್ಲಿ ಗರ್ಭಿಣಿಯರು, ರಾಮಾಯಣ, ಮಹಾಭಾರತ ಹಾಗೂ ವಿವಿಧ ರೀತಿಯ ಸಂಸ್ಕಾರಗಳನ್ನು ನೀಡುವ ಗ್ರಂಥಗಳನ್ನು ಓದುವುದನ್ನು ನೋಡಿದ್ದೇವೆ. ತಮಿಳುನಾಡಿನಲ್ಲಿ ಮಹಿಳೆ ಗರ್ಭಿಣಿಯಾಗಿದ್ದಾಗ ರಾಮಾಯಣ ಮತ್ತು ಸುಂದರಕಾಂಡವನ್ನು ಓದಬೇಕು ಎಂಬ ನಂಬಿಕೆ ಇದೆ. ಹುಟ್ಟುವ ಮಗುವಿಗೆ ಇದು ತುಂಬಾ ಒಳ್ಳೆಯದು ಎಂದು ತೆಲಂಗಾಣದ ರಾಜ್ಯಪಾಲರಾದ ತಮಿಲಿಸಾಯಿ ಸೌಂದರರಾಜನರವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ಒಂದು ಗರ್ಭಸಂಸ್ಕಾರ ಶಿಬಿರದಲ್ಲಿ ಹೇಳಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯ ಶಾಖೆಯಾದ ‘ಸಂವರ್ಧಿನಿ ನ್ಯಾಸ’ದ ಅಡಿಯಲ್ಲಿ ಈ ಗರ್ಭಸಂಸ್ಕಾರದ ಶಿಬಿರವನ್ನು ಆಯೋಜಿಸಲಾಗಿತ್ತು. ಸಂವರ್ಧಿನಿ ನ್ಯಾಸವು ರಾಷ್ಟ್ರ ಸೇವಿಕಾ ಸಮಿತಿಯ ಒಂದು ಶಾಖೆಯಾಗಿದೆ. ತಮಿಲಿಸಾಯಿ ಸೌಂದರರಾಜನರವರು ಸ್ವತಃ ಸ್ತ್ರೀರೋಗ ತಜ್ಞೆಯಾಗಿದ್ದಾರೆ.

೧. ರಾಜ್ಯಪಾಲರು ತಮ್ಮ ಮಾತನ್ನು ಮುಂದುವರಿಸುತ್ತಾ, ಸದೃಢ ಮಕ್ಕಳಿಗೆ ಜನ್ಮ ನೀಡಲು ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಉಪಾಯವೇನು ? ಎಂಬುದನ್ನು ನಾವು ಹೇಳುತ್ತೇವೆ; ಏಕೆಂದರೆ ಗರ್ಭಿಣಿಯರು ಸಂಸ್ಕಾರಿ ಮತ್ತು ದೇಶಭಕ್ತ ಮಕ್ಕಳಿಗೆ ಜನ್ಮ ನೀಡಬೇಕು, ಎಂದು ಹೇಳಿದರು.

೨. ಸಂವಿರ್ಧಿನಿ ಶಾಖೆಯ ಹಿರಿಯ ಅಧಿಕಾರಿಯೊಬ್ಬರು, ನಾವು ಈ ಗರ್ಭಸಂಸ್ಕಾರ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ತಲುಪಿಸಲಿದ್ದೇವೆ. ದೇಶಾದ್ಯಂತ ಇರುವ ವೈದ್ಯರನ್ನು ಭೇಟಿ ಮಾಡಿ ಇದನ್ನು ಇಡೀ ದೇಶದಲ್ಲಿ ಹೇಗೆ ಜ್ಯಾರಿಗೆ ತರಬಹುದು ಎಂಬುದನ್ನು ನಾವು ನೋಡಲಿದ್ದೇವೆ ಎಂದು ಹೇಳಿದರು.