ಉದಯಪುರದಲ್ಲಿ ಐತಿಹಾಸಿಕ ಮತ್ತು ಎಲ್ಲಕ್ಕಿಂತ ದೊಡ್ಡ ದೇವಸ್ಥಾನದಲ್ಲಿ ಡ್ರೆಸ್ ಕೋಡ ಜಾರಿ !

(ಡ್ರೆಸ್ ಕೋಡ್ ಎಂದರೆ ದೇವಸ್ಥಾನದಲ್ಲಿ ಪ್ರವೇಶ ಮಾಡುವಾಗ ಧರಿಸಿರುವ ಬಟ್ಟೆಯ ಸಂದರ್ಭದಲ್ಲಿ ನಿಯಮಗಳು)

ಉದಯಪುರ (ರಾಜಸ್ಥಾನ) – ಇಲ್ಲಿಯ ಐತಿಹಾಸಿಕ ಮತ್ತು ಎಲ್ಲಕ್ಕಿಂತ ದೊಡ್ಡ ಜಗದೀಶ ದೇವಸ್ಥಾನದಲ್ಲಿ ತುಂಡು ಬಟ್ಟೆ ಧರಿಸಲು ನಿಷೇಧಿಸಲಾಗಿದೆ. ತುಂಡು ಟಿ ಶರ್ಟ್, ಜೀನ್ಸ್, ಬರ್ಮುಡಾ, ಮಿನಿಸ್ಕರ್ಟ್, ನೈಟ ಸೂಟ್ ಮುಂತಾದ ಬಟ್ಟೆ ಧರಿಸಿ ಬರುವವರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಇದನ್ನು ದೇವಸ್ಥಾನದ ಹೊರಗೆ ಹಚ್ಚಿರುವ ಭಿತ್ತಿ ಪತ್ರಗಳ ಮೂಲಕ ತಿಳಿಸಲಾಗಿದೆ. ಈ ದೇವಸ್ಥಾನ ೪೦೦ ವರ್ಷ ಹಳೆಯದಾಗಿದೆ.

೧. ದೇವಸ್ಥಾನದ ಅರ್ಚಕ ವಿನೋದ್ ಇವರು, ನಾವು ದೇವಸ್ಥಾನಕ್ಕೆ ಬರುವಾಗ ತುಂಡು ಬಟ್ಟೆ ಧರಿಸದಿರಲು ಕರೆ ನೀಡಿದ್ದೇವೆ. ನಾವು ಇದರ ಸಂದರ್ಭದಲ್ಲಿ ದೇವಸ್ಥಾನದ ಹೊರಗೆ ಫಲಕ ಹಾಕಿದ್ದೇವೆ ಅದರಿಂದ ಭಕ್ತರಲ್ಲಿ ಹಿಂದೂ ಸಂಸ್ಕೃತಿ ಜಾಗೃತ ಗೊಳಿಸುವುದು ಮತ್ತು ಅವರು ಸ್ವಇಚ್ಛೆಯಿಂದ ಈ ನಿಯಮಗಳ ಪಾಲನೆ ಮಾಡಬೇಕು. ಆದರೂ ಯಾರಾದರೂ ತುಂಡು ಬಟ್ಟೆ ಧರಿಸಿ ಬಂದರೆ ಅವರಿಗೆ ಪ್ರವೇಶ ನಿರಾಕರಿಸಲಾಗುವುದಿಲ್ಲ ಎಂದು ಹೇಳಿದರು.

೨. ದೇವಸ್ಥಾನದ ವ್ಯವಸ್ಥಾಪಕ ಧರ್ಮೋತ್ಸವ ಸಮಿತಿಯ ಅಧ್ಯಕ್ಷ ಮತ್ತು ಜಗನ್ನಾಥ ರಥಯಾತ್ರೆ ಸಮಿತಿಯ ಸಂಯೋಜಕ ದಿನೇಶ ಮಕವಾನಾ ಇವರು, ಜನರ ಭಾವನೆ ನೋಡುತ್ತ ನಾವು ದೇವಸ್ಥಾನದಲ್ಲಿ ತುಂಡು ಬಟ್ಟೆ ಧರಿಸಿ ಬರುವವರ ಪ್ರವೇಶಕ್ಕೆ ನಿಷೇಧ ಹೇರುವ ನಿರ್ಣಯ ತೆಗೆದುಕೊಂಡಿದ್ದೇನೆ. ನಾವು ಭಕ್ತರಿಗೆ ಈ ಸಂದರ್ಭದಲ್ಲಿ ಕರೆ ನೀಡಿದ್ದೇವೆ. ಮಂದಿರದಲ್ಲಿ ಕೆಲವ ಪ್ರವಾಸಿಗರು ಸಾರಾಯಿ ಕುಡಿದು ಪ್ರವೇಶ ಮಾಡುತ್ತಾರೆ, ಎಂದು ದೂರುಗಳು ಬಂದಿವೆ. ಈ ಬಗ್ಗೆ ಕೂಡ ಸಮಿತಿ ಬೇಗನೆ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ತುಂಡು ಬಟ್ಟೆ ಧರಿಸಿ ಬರುವವರು ಬಟ್ಟೆ ಬದಲಾಯಿಸುವುದಕ್ಕಾಗಿ ಬದಲಿ ವ್ಯವಸ್ಥೆ ಲಬ್ಧ !

ತುಂಡು ಬಟ್ಟೆ ಧರಿಸಿ ಯಾರಾದರೂ ಬಂದರೆ ಪುರುಷರಿಗೆ ಜುಬ್ಬಾ, ಪೈಜಾಮ ಹಾಗೂ ಮಹಿಳೆಯರಿಗೆ ಬೇರೆ ಬಟ್ಟೆ ನೀಡಲಾಗುವುದು. ಬಟ್ಟೆ ಬದಲಾಯಿಸುವುದಕ್ಕೆ ಕೋಣೆಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಆದ್ದರಿಂದ ತುಂಡು ಬಟ್ಟೆ ಧರಿಸಿ ಬಂದವರು ಬಟ್ಟೆ ಬದಲಾಯಿಸಿ ದೇವಸ್ಥಾನದಲ್ಲಿ ಪ್ರವೇಶ ಮಾಡಬಹುದು.

ಸಂಪಾದಕರ ನಿಲುವು

ದೇಶದಲ್ಲಿನ ಒಂದೊಂದೇ ದೇವಸ್ಥಾನದಲ್ಲಿ ಹೇಗೆ ಜಾರಿ ಮಾಡುವ ಬದಲು ದೇಶಾದ್ಯಂತ ಇಂತಹ ನಿರ್ಣಯ ತೆಗೆದುಕೊಂಡು ಎಲ್ಲಾ ದೇವಸ್ಥಾನದ ವಿಶ್ವಸ್ಥರು ಮತ್ತು ದೇವಸ್ಥಾನ ಸಮಿತಿಗಳು ಇದನ್ನು ಜಾರಿಗೊಳಿಸಬೇಕು ! ಇದಕ್ಕಾಗಿ ದೇವಸ್ಥಾನದ ಒಂದು ದೇಶವ್ಯಾಪಿ ಮಹಾಸಂಘದ ಸ್ಥಾಪನೆ ಮಾಡುವುದು ಆವಶ್ಯಕವಾಗಿದೆ !