ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಉಗ್ರ ನಿಗ್ರಹ ದಳವು ಆಗ್ರಾದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಏಜೆಂಟ್ ರವೀಂದ್ರ ಕುಮಾರ ಮತ್ತು ಅವರ ಸಹಚರನನ್ನು ಬಂಧಿಸಿದೆ. ರವೀಂದ್ರ ಕುಮಾರ ರಾಜ್ಯದ ಫಿರೋಜಾಬಾದ ಶಸ್ತ್ರಾಸ್ತ್ರ ಕಾರ್ಖಾನೆಯ ಅಧಿಕಾರಿಯಾಗಿದ್ದಾರೆ. ಅವರು ಐಎಸ್ಐ ಪರ ಬೇಹುಗಾರಿಕೆ ನಡೆಸುತ್ತಿದ್ದರು ಮತ್ತು ಕಾರ್ಖಾನೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ಪಾಕಿಸ್ತಾನದಲ್ಲಿರುವ ಮಹಿಳಾ ಏಜೆಂಟರಿಗೆ ಕಳುಹಿಸುತ್ತಿದ್ದರು. ಈ ಪ್ರಕರಣದ ಬಗ್ಗೆ ಉಗ್ರ ನಿಗ್ರಹ ದಳವು ಸಮಗ್ರ ತನಿಖೆ ನಡೆಸುತ್ತಿದೆ.
ಪಾಕಿಸ್ತಾನದ ಮಹಿಳಾ ಏಜೆಂಟ್ ‘ನೇಹಾ ಶರ್ಮಾ’ ಹೆಸರಿನಲ್ಲಿ ಫೇಸ್ಬುಕ್‌ನಲ್ಲಿ ನಕಲಿ ಖಾತೆ ತೆರೆದು ರವೀಂದ್ರನನ್ನು ಬಲೆಗೆ ಬೀಳಿಸಿದ್ದಳು. ಹಣದ ದುರಾಸೆಯಿಂದ ರವೀಂದ್ರ ದಿನನಿತ್ಯ ಉತ್ಪಾದನಾ ವರದಿ, ಸ್ಕ್ರೀನಿಂಗ್ ಸಮಿತಿಯ ಗೌಪ್ಯ ಪತ್ರಗಳು, ಡ್ರೋನ್ ಮತ್ತು ಗಗನಯಾನ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಮಹಿಳೆಗೆ ಕಳುಹಿಸಿದ್ದಾನೆ. ರವೀಂದ್ರನ ಮೊಬೈಲ್ ಫೋನ್‌ನಿಂದ ಕಾರ್ಖಾನೆಯ ಹಿರಿಯ ಅಧಿಕಾರಿಗಳು, 51 ಗೂರ್ಖಾ ರೈಫಲ್ಸ್ ಅಧಿಕಾರಿಗಳು ಮತ್ತು ಡ್ರೋನ್ ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರು ವಾಟ್ಸಾಪ್ ಮೂಲಕವೂ ಗೌಪ್ಯ ಮಾಹಿತಿಯನ್ನು ಕಳುಹಿಸಿದ್ದರು.
ಸಂಪಾದಕೀಯ ನಿಲುವುಇಂತಹ ದೇಶದ್ರೋಹಿಗಳಿಗೆ ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕು! |