ಕರ್ಣಾವತಿ (ಗುಜರಾತ) – ಕರ್ಣಾವತಿಯ ಬಾವಲಾ ತಾಲ್ಲೂಕಿನ ಮೇನಿ ಗ್ರಾಮದ ಹಿಂದೂಗಳು, ಮುಸ್ಲಿಂ ಸಮುದಾಯದ ಕೆಲವರು ಹೋಳಿ ಆಚರಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಗ್ರಾಮಸ್ಥರು ದೂರು ನೀಡುತ್ತಿರುವುದು ಕಂಡುಬರುತ್ತದೆ.
1. ವಿಶ್ವ ಹಿಂದೂ ಪರಿಷತ್ತಿನ ಧಾಂಧುಕನ ಪದಾಧಿಕಾರಿ ನಿತಿನಭಾಯಿ ಚೌಹಾಣ ಮಾತನಾಡಿ, ಮೆನಿ ಗ್ರಾಮದಲ್ಲಿ ಶೇ.40 ರಷ್ಟು ಹಿಂದೂಗಳು ಮತ್ತು ಶೇ.60 ರಷ್ಟು ಮುಸ್ಲಿಮರಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಮುಸ್ಲಿಮರು ಪ್ರಾಬಲ್ಯ ಹೊಂದಿದ್ದಾರೆ. ಕಳೆದ 2 ವರ್ಷಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಎಂದು ಅವರು ಹೇಳುತ್ತಿದ್ದಾರೆ. ಹಿಂದೂ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರುಗಳು ಬಂದವು. ಕೆಲವು ದಿನಗಳ ಹಿಂದೆ, ಒಬ್ಬ ಹಿಂದೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ, ಆಕೆಯ ಪತಿ ವಿರೋಧಿಸಿದ್ದರು. ಇದಾದ ನಂತರ, ಮುಸ್ಲಿಮರು ಆತನನ್ನು ಥಳಿಸಿದ್ದರು. ಈಗ ಹೋಳಿ ಹಬ್ಬದ ಸಂದರ್ಭದಲ್ಲಿ, “ನಾವು ಧ್ವಂಸ ಮಾಡುತ್ತೇವೆ ಮತ್ತು ನೀವು ಹೋಳಿಯನ್ನು ಹೇಗೆ ಆಚರಿಸುತ್ತೀರಿ ಎಂದು ನೋಡೋಣ” ಎಂದು ಜನರನ್ನು ಬೆದರಿಸಲಾಗುತ್ತಿದೆ. ಶಾಂತಿ ಕಾಪಾಡಲು ಹಿಂದೂಗಳು ಪೊಲೀಸರು ಮತ್ತು ಸರಕಾರದ ಸಹಾಯ ಕೋರಿದರು, ನಮ್ಮ ದೂರು ಪಡೆಯಲಿಲ್ಲ; ಆದರೆ ಪೊಲೀಸರು ಮುಸಲ್ಮಾನರ ದೂರನ್ನು ತಕ್ಷಣ ದಾಖಲಿಸಿಕೊಂಡರು. (ಭಾಜಪ ಸರಕಾರ ಅಂತಹ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು! – ಸಂಪಾದಕರು)
2. ಪೊಲೀಸರು ಮೊದಲು ಅವರ ದೂರುಗಳನ್ನು ಸ್ವೀಕರಿಸುತ್ತಿರಲಿಲ್ಲ; ಆದರೆ ವಿಡಿಯೋ ಪ್ರಸಾರವಾದ ನಂತರ ಅವರು ಹಾಗೆ ಮಾಡುವಂತೆ ಒತ್ತಾಯಿಸಲಾಯಿತು ಎಂದು ಹಿಂದೂಗಳು ಹೇಳುತ್ತಾರೆ. ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಮಹಿಳೆಯೊಬ್ಬರು ಹೇಳಿದರು.
3. ಮತ್ತೊಂದೆಡೆ, ಕರ್ಣಾವತಿ ಗ್ರಾಮೀಣ ಪೊಲೀಸರು ಇದು ಧಾರ್ಮಿಕ ವಿಷಯವಲ್ಲ ಇದು ಇಬ್ಬರು ನೆರೆಹೊರೆಯ ರೈತರ ನಡುವಿನ ಭೂ ವಿವಾದವಾಗಿದ್ದು, ಅದನ್ನು ಬಗೆಹರಿಸಲಾಗಿದೆಯೆಂದು ಹೇಳಿದ್ದಾರೆ.
4. ನಲಸರೋವರ ಪೊಲೀಸ್ ಠಾಣೆಯ ಪೊಲೀಸ ಉಪನಿರೀಕ್ಷಕ ಅಮಿ ಘೋರಿ ಇವರು, ಎರಡೂ ಕಡೆಯಿಂದ ದೂರುಗಳನ್ನು ಸ್ವೀಕರಿಸಲಾಗಿದೆ, ಯಾವುದೇ ತಾರತಮ್ಯ ಮಾಡಲಾಗಿಲ್ಲ. ಗ್ರಾಮದಲ್ಲಿ ಸಹೋದರತ್ವದಿಂದ ಹೋಳಿ ಆಚರಿಸಲಾಗುವುದು, ಎಂದು ಹೇಳಿದ್ದಾರೆ.
5. ಮುಸ್ಲಿಮರು ಹಿಂದೂಗಳ ಭೂಮಿಯನ್ನು ಅಗೆದು ಕೃಷಿ ಭೂಮಿಗೆ ಹೋಗುವ ಮಾರ್ಗವನ್ನು ನಿರ್ಬಂಧಿಸಿದ್ದಾರೆ ಎಂದು ಹಿಂದೂ ಸಂಘಟನೆಗಳು ಹೇಳುತ್ತವೆ. ‘ಯಾವುದೇ ಹಿಂದೂ ಸಂಘಟನೆ ಬಂದರೂ ನಾವು ನಿಮ್ಮನ್ನು ಗ್ರಾಮದಲ್ಲಿ ಇರಲು ಬಿಡುವುದಿಲ್ಲ’, ಎಂದು ಅವರು ಬೆದರಿಕೆ ಹಾಕಿದರು. ಹೋಳಿ ವಿಷಯವನ್ನು ಮರೆಮಾಚಲು ಭೂ ವಿವಾದದ ವಿಷಯವನ್ನು ಎತ್ತಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತು ಹೇಳಿದೆ.
6. ಉಸ್ಮಾನ ಸಮ ಎಂಬ ವ್ಯಕ್ತಿಯು ಮುಸ್ಲಿಮರಿಗೆ, 50 ಸಾವಿರ ರೂಪಾಯಿ ನೀಡುತ್ತೇನೆ ಯಾರೂ ಹಿಂದೆ ಸರಿಯಬಾರದು’, ಎಂದು ಹೇಳಿದ್ದಾನೆ. ಎಂದು ವಿಶ್ವಹಿಂದೂ ಪರಿಷತ್ತಿನ ಚೌಹಾಣ ಹೇಳಿದ್ದಾರೆ.
ಸಂಪಾದಕೀಯ ನಿಲುವುಗುಜರಾತ್ನಲ್ಲಿ ಹಲವು ವರ್ಷಗಳಿಂದ ಭಾಜಪದ ಸರಕಾರ ಇರುವಾಗ ಹಿಂದೂಗಳಿಗೆ ಈ ಪರಿಸ್ಥಿತಿ ಬರಬಾರದು ಎಂದು ಹಿಂದೂಗಳು ಬಯಸುತ್ತಾರೆ! |