Anti Conversion Law : ‘ಮತಾಂತರ ವಿರೋಧಿ ಕಾನೂನು ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ!’ – ಮಾಜಿ ನ್ಯಾಯಮೂರ್ತಿ ಎಸ್. ಮುರಳೀಧರ್

‘ನಗರ ನಕ್ಸಲ’ ಗೌತಮ್ ನವಲಖಾ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲು ಆದೇಶಿಸಿದ ಮಾಜಿ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರ ಹೇಳಿಕೆ

ನಿವೃತ್ತ ನ್ಯಾಯಾಧೀಶ ಎಸ್ ಮುರಳೀಧರ್ (ಎಡ), ಗೌತಮ್ ನವ್ಲಾಖಾ (ಬಲ)

ನವದೆಹಲಿ – ‘ನಗರ ನಕ್ಸಲ’ ಗೌತಮ್ ನವಲಖಾ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲು ಆದೇಶಿಸಿದ ಮಾಜಿ ನ್ಯಾಯಮೂರ್ತಿ ಎಸ್. ಮುರಳೀಧರ್ ಈಗ ಮತಾಂತರ ವಿರೋಧಿ ಕಾನೂನುಗಳ ವಿರುದ್ಧ ಮಾತನಾಡುತ್ತಿದ್ದಾರೆ. ಆಮಿಷ ಮತ್ತು ಬಲವಂತದ ಮತಾಂತರವನ್ನು ತಡೆಯಲು ರಚಿಸಿರುವ ಕಾನೂನು ವೈಯಕ್ತಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಮತಾಂತರ ವಿರೋಧಿ ಕಾನೂನುಗಳ ವಿಷಯದ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು.

ಮಾಜಿ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ಮಾತು ಮುಂದುವರೆಸುತ್ತಾ,

1. ಇಂತಹ ಕಾನೂನುಗಳು ಬಲವಂತದ ಮತಾಂತರವನ್ನು ತಡೆಯಲು ಕಡಿಮೆ ಮತ್ತು ಜನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದರಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ.

2. ಈ ಕಾನೂನುಗಳಲ್ಲಿ ಯಾರಾದರೂ ತಮ್ಮ ಧರ್ಮವನ್ನು ತೊರೆದು ಇನ್ನೊಂದು ಧರ್ಮವನ್ನು ಸ್ವೀಕರಿಸಿದರೆ, ಅದರ ಹಿಂದೆ ಕೆಲವು ಭಯ ಅಥವಾ ಒತ್ತಡ ಇರಬೇಕು ಎಂದು ಭಾವಿಸಲಾಗಿದೆ. ಈ ಕಾನೂನಿನಲ್ಲಿ ಇದನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಯ ಮೇಲೆ ಹೊರಿಸುತ್ತವೆ. (ಇದು ಸಹಜವಾಗಿದ್ದು, ಮತ್ತು ತಾರ್ಕಿಕವಾಗಿದೆ ಎಂದು ನ್ಯಾಯಮೂರ್ತಿಯಾಗಿದ್ದ ವಿಚಾರವಂತರಿಗೆ ತಿಳಿಯಬೇಕು ಎಂದು ಯಾರಾದರೂ ನಿರೀಕ್ಷಿಸಿದರೆ, ಅದು ತಪ್ಪಾಗುವುದಿಲ್ಲ! ಆದರೆ, ಈ ವಿಷಯದಲ್ಲಿ ನಿರಾಶೆಯ ದುಃಖ ಹೆಚ್ಚಾಗುತ್ತದೆ, ಇದು ಮಾತ್ರ ಸತ್ಯ! – ಸಂಪಾದಕರು)

3. ಈ ಕಾನೂನುಗಳು ದಲಿತರು ಮತ್ತು ಅಲ್ಪಸಂಖ್ಯಾತರ ವಿರುದ್ಧವಾಗಿವೆ. ಈಗ ಯಾವುದೇ ದಲಿತನು ಬೌದ್ಧ ಧರ್ಮವನ್ನು ಸ್ವೀಕರಿಸಲು ಬಯಸಿದರೆ, ಅವನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವನು ಹಾಗೆ ಏಕೆ ಮಾಡುತ್ತಿದ್ದಾನೆ? ಎಂದು ಹೇಳಬೇಕಾಗುತ್ತದೆ. ಮೊದಲು ಅವನು ಇಡೀ ಜಗತ್ತಿಗೆ ಹೇಳಬೇಕಾಗುತ್ತದೆ. (ಬಾಯಿಗೆ ಬಂದಂತೆ ಹೇಳುತ್ತಿರುವ ಮಾಜಿ ನ್ಯಾಯಮೂರ್ತಿ! – ಸಂಪಾದಕರು)

4. ಹಿಂದೆ ಕೇವಲ ಸಂತ್ರಸ್ತರು ಮಾತ್ರ ಬಲವಂತದ ಮತಾಂತರದ ದೂರು ದಾಖಲಿಸಬೇಕು ಎಂಬ ನಿಯಮವಿತ್ತು; ಆದರೆ ಈ ಕಾನೂನು ಯಾರು ಬೇಕಾದರೂ ದೂರು ದಾಖಲಿಸಲು ಅನುಮತಿಸುತ್ತದೆ. ಉದಾಹರಣೆಗೆ. ಸಂಬಂಧಿಕರು ಅಥವಾ ದೂರದ ಸೋದರಸಂಬಂಧಿ. (ಇದಕ್ಕಿಂತ ದೊಡ್ಡ ತಮಾಷೆ ಇನ್ನೊಂದಿಲ್ಲ! ಯಾರನ್ನಾದರೂ ಆಮಿಷವೊಡ್ಡಿ ಮತಾಂತರ ಮಾಡಿದ್ದರೆ, ಮತಾಂತರಗೊಂಡ ವ್ಯಕ್ತಿ ಈ ಬಗ್ಗೆ ಎಂದಿಗೂ ಹೇಳುವುದಿಲ್ಲ; ಆದರೆ ಕಾನೂನಿನ ಅಡಿಯಲ್ಲಿ ಅಪರಾಧ ನಡೆದಿದೆ ಎಂದು ಇತರ ಜನರು – ಸಂಬಂಧಿಕರೇ ಬಹಿರಂಗಪಡಿಸಬಹುದು. ಮೂಲತಃ ಆಮಿಷವೊಡ್ಡಿ ಮತಾಂತರ ಮಾಡುವವರನ್ನು ಬೆಂಬಲಿಸಲು ನ್ಯಾಯಮೂರ್ತಿ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು! – ಸಂಪಾದಕರು)

5. ಇದರಿಂದ ಕೆಲವು ಗೂಂಡಾ ಗುಂಪುಗಳ ಚಟುವಟಿಕೆಗಳು ಹೆಚ್ಚಾಗಿವೆ, ಅವರು ಜಿಲ್ಲಾಧಿಕಾರಿ ಕಚೇರಿಯ ಸೂಚನಾ ಫಲಕಗಳನ್ನು ನೋಡುತ್ತಾರೆ ಮತ್ತು ಯಾರು ಅಂತರ್ಜಾತೀಯ ವಿವಾಹ ಅಥವಾ ಮತಾಂತರಗೊಳ್ಳಲು ಬಯಸುತ್ತಾರೋ ಆ ವ್ಯಕ್ತಿಯನ್ನು ಬೆದರಿಸುತ್ತಾರೆ.

ಸಂಪಾದಕೀಯ ನಿಲುವು

  • ಯಾರನ್ನು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆಯೋ ಅವರನ್ನು ರಕ್ಷಿಸಬೇಕು ಎಂದು ಮುರಳೀಧರ್ ಅವರಿಗೆ ಅನಿಸುವುದಿಲ್ಲ; ಆದರೆ ಮತಾಂತರ ಮಾಡುವವರ ಬಗ್ಗೆ ಮುರಳೀಧರ್ ವಾದಿಸುತ್ತಾರೆ, ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ!
  • ಮುರಳೀಧರ್ ಅವರ ಇಂತಹ ಮನಸ್ಥಿತಿಯಿಂದಾಗಿ ಅವರ ನ್ಯಾಯಮೂರ್ತಿ ಹುದ್ದೆಯ ಅವಧಿಯಲ್ಲಿ ಅವರು ಹಿಂದೂ ವಿರೋಧಿ ಜನರ ಪರವಾಗಿ ತೀರ್ಪು ನೀಡಿದ್ದಾರೆಯೇ? ಎಂಬುದನ್ನು ಅಧ್ಯಯನ ಮಾಡುವುದು ಅವಶ್ಯಕವಾಗಿದೆ!
  • ನಾಳೆ ಇದೇ ನ್ಯಾಯಾಧೀಶರು ಬಲಾತ್ಕಾರ, ಕೊಲೆ ಮುಂತಾದ ಅಪರಾಧಗಳನ್ನು ಮಾಡುವವರನ್ನು ಸಹ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಿಡುಗಡೆ ಮಾಡಲು ಕರೆ ನೀಡಿದರೆ ಆಶ್ಚರ್ಯಪಡಬೇಕಾಗಿಲ್ಲ!