‘ಶಿವಾಜಿ ವಿದ್ಯಾಪೀಠ’ದ ನಾಮ ವಿಸ್ತರಣೆಗಾಗಿ ಮಾರ್ಚ್ 17 ರಂದು ಹಿಂದೂಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಭವ್ಯ ಮೆರವಣಿಗೆ!

ಭಾಗ್ಯನಗರದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಸಿಂಹ ಅವರ ಮುಖ್ಯ ಉಪಸ್ಥಿತಿ.

ಪತ್ರಕರ್ತರ ಸಭೆಯಲ್ಲಿ ಉಪಸ್ಥಿತರಿದ್ದವರು (ಎಡದಿಂದ ಬಲಕ್ಕೆ): ಶ್ರೀ.. ಸಂಜಯ ಹಸಬೆ, ಶ್ರೀ.. ಅಭಿಜಿತ ಪಾಟೀಲ್, ಶ್ರೀ.. ಉದಯ ಭೋಸಲೆ, ಶ್ರೀ.. ರಾಜು ಯಾದವ್, ಶ್ರೀ. ಅರುಣ ಗವಳಿ, ಶ್ರೀ.. ಪ್ರಮೋದ ಪಾಟೀಲ್, ಶ್ರೀ.. ಸುನೀಲ ಘನವಟ, ಶ್ರೀ.. ಶಿವಾನಂದ ಸ್ವಾಮಿ, ಶ್ರೀ.. ಆನಂದರಾವ್ ಕಾಶೀದ್, ಶ್ರೀ.. ಗಜಾನನ ತೋಡಕರ, ಶ್ರೀ.. ರಾಜು ತೋರಸ್ಕರ್ ಮತ್ತು ಶ್ರೀ.. ರಾಮಭಾವು ಮೇಥೆ.

ಕೊಲ್ಲಾಪುರ, ಮಾರ್ಚ್ 14 (ವಾರ್ತೆ): ಕೊಲ್ಲಾಪುರದ ‘ಶಿವಾಜಿ ವಿದ್ಯಾಪೀಠ’ದ ಹೆಸರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಪೂರ್ಣ ಉಲ್ಲೇಖವಿರುವುದರಿಂದ, ವಿದ್ಯಾಪೀಠದ ಹೆಸರನ್ನು ಗೌರವಯುತವಾಗಿ ಮತ್ತು ಪೂರ್ಣವಾಗಿ ‘ಛತ್ರಪತಿ ಶಿವಾಜಿ ಮಹಾರಾಜ್ ವಿದ್ಯಾಪೀಠ’ ಎಂದು ಬದಲಾಯಿಸಬೇಕೆಂದು ಆಗ್ರಹಿಸಿ, ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಜಂಟಿಯಾಗಿ ಮಾರ್ಚ್ 17 ರಂದು ಜಿಲ್ಲಾಧಿಕಾರಿ ಕಚೇರಿಗೆ ಭವ್ಯ ಮೆರವಣಿಗೆಯನ್ನು ಆಯೋಜಿಸಿವೆ. ಕೊಲ್ಲಾಪುರ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಸಂಸದರು, ಶಾಸಕರು, ಸಚಿವರು, ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು, ಕೋಟೆ ದುರ್ಗಾ ಪ್ರೇಮಿಗಳು, ಸಂಘಟನೆಗಳು, ಸಂಪ್ರದಾಯಗಳು, ಯುವ ಮಂಡಳಿಗಳು, ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿ ಸಂಘಟನೆಗಳು ಈ ಉದ್ದೇಶಕ್ಕೆ ರಾಜ್ಯಾದ್ಯಂತ ಬೆಂಬಲ ನೀಡಿವೆ. ಕೊಲ್ಲಾಪುರ ಜಿಲ್ಲೆಯ 200 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಈ ಕುರಿತು ನಿರ್ಣಯಗಳನ್ನು ಕೈಗೊಂಡಿವೆ. ಈ ಮೆರವಣಿಗೆ ಮಾರ್ಚ್ 17 ರಂದು ಮಧ್ಯಾಹ್ನ 3 ಗಂಟೆಗೆ ದಸರಾ ಚೌಕದಿಂದ ಪ್ರಾರಂಭವಾಗಿ, ಲಕ್ಷ್ಮೀಪುರಿ, ವೀನಸ್ ಕಾರ್ನರ್, ‘ಬಿ ನ್ಯೂಸ್’ ಕಚೇರಿಯ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಅಲ್ಲಿ ಗಣ್ಯರು ಭಾಷಣ ಮಾಡಲಿದ್ದಾರೆ. ಈ ಮೆರವಣಿಗೆಗೆ ಸಮಾಜದ ಹೆಚ್ಚಿನ ಸಂಖ್ಯೆಯ ಜನರು ಉಪಸ್ಥಿತರಿರಬೇಕೆಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ರಾಷ್ಟ್ರೀಯ ಸಂಘಟಕ ಶ್ರೀ.. ಸುನೀಲ್ ಘನವಟ್ ಇವರು ಮಾರ್ಚ್ 14 ರಂದು ನಡೆದ ಪತ್ರಕರ್ತರ ಸಭೆಯಲ್ಲಿ ಕರೆ ನೀಡಿದ್ದಾರೆ.

ಈ ಪತ್ರಕರ್ತರ ಸಭೆಯಲ್ಲಿ ಮಹಾರಾಷ್ಟ್ರ ಮಂದಿರ ಮಹಾಸಂಘದ ಸಹಸಂಯೋಜಕ ಶ್ರೀ.. ಅಭಿಜಿತ ಪಾಟೀಲ್, ‘ಛತ್ರಪತಿ ಗ್ರೂಪ್’ನ ಸಂಸ್ಥಾಪಕ ಶ್ರೀ.. ಪ್ರಮೋದ ಪಾಟೀಲ್, ‘ಹಿಂದೂ ಏಕತಾ ಆಂದೋಲನ’ದ ನಗರಾಧ್ಯಕ್ಷ ಶ್ರೀ. ಗಜಾನನ ತೋಡಕರ, ವೀರ ಶಿವ ಕಾಶೀದ ಅವರ ವಂಶಸ್ಥರಾದ ಶ್ರೀ. ಆನಂದರಾವ್ ಕಾಶೀದ್, ಹಿಂದೂ ಮಹಾಸಭೆಯ ಜಿಲ್ಲಾಧ್ಯಕ್ಷ ಶ್ರೀ. ರಾಜು ತೋರಸ್ಕರ, ಉದ್ದವ್ ಬಾಳಾಸಾಹೇಬ್ ಠಾಕ್ರೆ ಬಣದ ಕರವೀರ ತಾಲೂಕು ಮುಖ್ಯಸ್ಥ ಶ್ರೀ. ರಾಜು ಯಾದವ್, ‘ಶ್ರೀ. ಸ್ವಾಮಿ ಸಮರ್ಥ ಮಹಾಲಕ್ಷ್ಮಿ ದೇವಸ್ಥಾನ’ದ ಶ್ರೀ. ಸಂಜಯ ಹಸಬೆ, ಶಿವಸೇನೆಯ ಉಪಜಿಲ್ಲಾ ಮುಖ್ಯಸ್ಥ ಶ್ರೀ. ಉದಯ ಭೋಸಲೆ, ಸನಾತನ ಸಂಸ್ಥೆಯ ಡಾ. ಮನಸಿಂಗ್ ಶಿಂದೆ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.

ಶ್ರೀ. ಅಭಿಜಿತ ಪಾಟೀಲ್ ಅವರು, ”ಈ ಮೆರವಣಿಗೆಯಲ್ಲಿ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಸಿಂಹ, ಶ್ರೀ. ಶಿವಾಜಿ ಪ್ರತಿಷ್ಠಾನ ಹಿಂದೂಸ್ಥಾನದ ಸಂಸ್ಥಾಪಕ ಪೂ. ಸಂಭಾಜಿರಾವ್ ಭಿಡೆ ಗುರೂಜಿ ಮತ್ತು ಸನಾತನ ಸಂಸ್ಥೆಯ ಧರ್ಮ ಪ್ರಚಾರಕ ಸದ್ಗುರು ಸ್ವಾತಿ ಖಾಡಯೆ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರುವರು”, ಎಂದು ಹೇಳಿದರು.

ಶ್ರೀ. ಆನಂದರಾವ ಕಾಶೀದ್ ಅವರು, ”ಈ ಮೆರವಣಿಗೆಗೆ ವಿವಿಧ ಕೋಟೆ ದುರ್ಗಾ ಪ್ರೇಮಿಗಳು, ಸಂಘಟನೆಗಳು, ಶೌರ್ಯ ಆಟಕ್ಕೆ ಸಂಬಂಧಿಸಿದ ಮಂಡಳಿಗಳು, ಕಾರ್ಯಕರ್ತರು, ಇತಿಹಾಸ ಸಂಶೋಧಕರು ಮತ್ತು ಅಧ್ಯಯನಕಾರರು ದೊಡ್ಡ ಪ್ರಮಾಣದಲ್ಲಿ ಸ್ಪಂದಿಸಿದ್ದಾರೆ. ಈ ಮೆರವಣಿಗೆಯಲ್ಲಿ ರಾಜ್ಯದಿಂದ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ಮಾವಳೆಗಳ ವಂಶಸ್ಥರು ಉಪಸ್ಥಿತರಿರುವರು’, ಎಂದು ಹೇಳಿದರು.

ಹಿಂದೂ ಏಕತಾ ಆಂದೋಲನದ ನಗರಾಧ್ಯಕ್ಷ ಶ್ರೀ. ಗಜಾನನ ತೋಡಕರ ಅವರು, ”ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಛತ್ರಪತಿ ಉದಯನ್ ಮಹಾರಾಜ ಭೋಸಲೆ ಮತ್ತು ಶ್ರೀಮಂತ ಶಿವೇಂದ್ರರಾಜ ಭೋಸಲೆ ಅವರು ಕೂಡ ಇದಕ್ಕೆ ಬೆಂಬಲ ನೀಡಿದ್ದಾರೆ”, ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ‘ಛತ್ರಪತಿ ಗ್ರೂಪ್’ನ ಶ್ರೀ. ಪ್ರಮೋದ ಪಾಟೀಲ್ ಅವರು, ”ಈ ಮೆರವಣಿಗೆಗೆ ವ್ಯಾಪಕ ಪ್ರಚಾರ ದೊರೆಯುತ್ತಿದ್ದು, ಸಮಾಜದ ಪ್ರತಿಯೊಬ್ಬರ ಬೆಂಬಲವಿದೆ. ಚೇಂಬರ್ ಆಫ್ ಕಾಮರ್ಸ್, ವಿವಿಧ ಸಂಸ್ಥೆಗಳು, ಯುವ ಮಂಡಳಿಗಳು ಮತ್ತು ವಿದ್ಯಾರ್ಥಿಗಳು ಕೂಡ ಈ ಮೆರವಣಿಗೆಯಲ್ಲಿ ಭಾಗವಹಿಸುವರು”, ಎಂದು ತಿಳಿಸಿದರು.

‘ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್’ನ ಬೆಂಬಲ!

ಈ ಮೆರವಣಿಗೆಗೆ ‘ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್’ ಬೆಂಬಲ ನೀಡಿದ್ದು, ‘ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್’ನ ಅಧ್ಯಕ್ಷ ಶ್ರೀ. ಲಲಿತ್ ಗಾಂಧಿ ಅವರು, “ವಿದ್ಯಾಪೀಠದ ಹೆಸರು ‘ಛತ್ರಪತಿ ಶಿವಾಜಿ ಮಹಾರಾಜ್ ವಿದ್ಯಾಪೀಠ’ ಆಗಬೇಕೆಂದು ನಮ್ಮೆಲ್ಲರ ಆಗ್ರಹವಿದೆ. ಆದ್ದರಿಂದ, ಎಲ್ಲರೂ ಎರಡು ಗಂಟೆಗಳ ಕಾಲ ಅಂಗಡಿಗಳನ್ನು ಮುಚ್ಚಿ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ನಾವು ಕರೆ ನೀಡುತ್ತಿದ್ದೇವೆ.” ಎಂದು ಹೇಳಿದರು.

ಈ ಮೆರವಣಿಗೆಗೆ ‘ಶ್ರೀ’ ಸಂಪ್ರದಾಯದವರು ಬೆಂಬಲ ನೀಡಿದ್ದು, ಶ್ರೀ. ವಿಜಯ ಕುಮಾರ್ ಪಾಟೀಲ್ ಅವರು, “ಸಾತಾರಾ, ಸಾಂಗ್ಲಿ, ಕೊಲ್ಲಾಪುರ ಮತ್ತು ಬೆಳಗಾವಿಯಿಂದ ‘ಶ್ರೀ’ ಸಂಪ್ರದಾಯದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಉಪಸ್ಥಿತರಿರುವರು” ಎಂದು ತಿಳಿಸಿದರು. ಈ ಮೆರವಣಿಗೆಗೆ ‘ಶ್ರೀ ಶಿವಾಜಿ ಪ್ರತಿಷ್ಠಾನ ಹಿಂದೂಸ್ಥಾನ’ ಬೆಂಬಲ ಸೂಚಿಸಿದ್ದು, ಕೊಲ್ಲಾಪುರ ಜಿಲ್ಲಾ ಕಾರ್ಯವಾಹ ಶ್ರೀ. ಸುರೇಶ ಯಾದವ್ ಅವರು, “ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧಾರಕರು ಉಪಸ್ಥಿತರಿರುವರು” ಎಂದು ತಿಳಿಸಿದರು.

ವಿಶೇಷತೆಗಳು:

1. ಈ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ಸರದಾರ ಮಾವಳೆಗಳ ವಂಶಸ್ಥರು ಉಪಸ್ಥಿತರಿರುವರು.

2. ಈ ಮೆರವಣಿಗೆಯಲ್ಲಿ ಅನೇಕ ತಂಡಗಳು ಭಾಗವಹಿಸುವುದರ ಜೊತೆಗೆ, ಡೋಲು-ತಾಳ ತಂಡಗಳು, ಶೌರ್ಯದಾಟ, ಶಿವಾಜಿ ಕಾಲದ ಯುದ್ಧ ಪಥಕಗಳು, ವಾರಕರಿ-ತಾಳಕರಿ ತಂಡಗಳು, ವಿವಿಧ ಸಂಪ್ರದಾಯದ ಭಕ್ತರು, ಮಾವಳೆಯ ವೇಷಭೂಷಣದೊಂದಿಗೆ ಸಾಂಪ್ರದಾಯಿಕ ಉಡುಪುಗಳು ಮತ್ತು ಮಹಿಳೆಯರ ರಣರಾಗಿಣಿ ತಂಡಗಳು ಭಾಗವಹಿಸಲಿವೆ.