ಜಮ್ಮು – ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ‘ಬಾವೇ ವಾಲಿ ಮಾತಾ’ ದೇವಸ್ಥಾನದ ವ್ಯವಸ್ಥಾಪಕರಿಂದ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಿದ್ದಾರೆ. ಜಮ್ಮು ನಗರದಲ್ಲಿ ಮೊದಲ ಬಾರಿಗೆ ಈ ರೀತಿಯ ನಿಯಮ ರೂಪಿಸಿ ಅದರ ಫಲಕ ಶ್ರೀ ಕಾಳಿ ಮಾತೆಯ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಹಾಕಲಾಗಿದೆ. ಇದರ ಅಡಿಯಲ್ಲಿ ಭಕ್ತರಿಗೆ ದೇವಸ್ಥಾನ ಪರಿಸರದಲ್ಲಿ ಪ್ರವೇಶ ಮಾಡುವ ಮೊದಲು ಸಭ್ಯ ಉಡುಪು ಧರಿಸುವುದು ಮತ್ತು ತಲೆಯನ್ನು ಮುಚ್ಚಿಕೊಳ್ಳಲು ಮನವಿ ಮಾಡಿದ್ದಾರೆ. ಇದರ ಜೊತೆಗೆ ‘ಹಾಫ್ ಪ್ಯಾಂಟ್’, ‘ಮಿನಿ ಸ್ಕರ್ಟ್’, ಹರಿದಿರುವ ಜೀನ್ಸ್ ಮತ್ತು ‘ಕ್ಯಾಪ್ರಿ ಪ್ಯಾಂಟ್’ ಮೇಲೆಯೂ ನಿಷೇಧಿಸಲಾಗಿದೆ.
ಇದರ ಹಿನ್ನೆಲೆಯಲ್ಲಿ ಮುಖ್ಯ ಅರ್ಚಕರಾದ ಮಹಂತ ಬಿಟ್ಟಾ ಇವರು, ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರು ಶಿಸ್ತನ್ನು ಪಾಲಿಸುವಂತೆ ಕರೆ ನೀಡಿದ್ದಾರೆ. ಜನರಿಂದ ದೇವಸ್ಥಾನವನ್ನು ಪ್ರವಾಸಿ ತಾಣ ಮಾಡಿರುವುದರಿಂದ ನಮಗೆ ಈ ಕ್ರಮ ಕೈಗೊಳ್ಳಬೇಕಾಯಿತು.
Dress Code At Temple: जम्मू के प्रसिद्ध बावे वाली माता मंदिर (Bawe Wali Mata) में अब श्रद्धालुओं के लिए ड्रेस कोड जारी कर दिया गया है. इसमें श्रद्धालुओं से मंदिर के अंदर सिर ढंककर आने को कहा गया है. साथ ही मंदिर में छोटे कपड़े पहनकर आने पर भी प्रतिबंधhttps://t.co/v4Y8RiJi4H
— Fight Against Criminal (@facnewspaper) July 8, 2023
ಜಮ್ಮು-ಕಾಶ್ಮೀರ್ ಧಾರ್ಮಿಕ ದತ್ತಿ ಇಲಾಖೆಯ ಅಧ್ಯಕ್ಷ ನಿವೃತ್ತ ಬ್ರಿಗೇಡ್ ಆರ್.ಎಸ್. ಲಂಗೇಹ ಇವರು, ಇತರ ದೇವಸ್ಥಾನಗಳಲ್ಲಿ ಕೂಡ ಹೀಗೆ ಕ್ರಮ ಕೈಗೊಳ್ಳಬೇಕು, ಈ ವಿಷಯದ ಬಗ್ಗೆ ಚರ್ಚೆ ಕೂಡ ನಡೆಯಬೇಕು. ಉತ್ತರ ಪ್ರದೇಶದಿಂದ ಶ್ರೀ ಕಾಳಿ ಮಾತೆಯ ದರ್ಶನಕ್ಕಾಗಿ ಬಂದಿರುವ ಭಕ್ತರು ಶ್ರೀ. ಧನಂಜಯ ಪಾಟೀಲ್ ಇವರು, ‘ಹಿಂದೂ ಸಂಸ್ಕಾರವನ್ನು ಪುನರುಜ್ಜೀವನಗೊಳಿಸುವುದಕ್ಕಾಗಿ ಇದು ಒಂದು ಉತ್ತಮ ಹೆಜ್ಜೆಯಾಗಿದೆ ಎಂದು ಹೇಳಿದರು. ಇನ್ನೋರ್ವ ಭಕ್ತ ಮನಮಿತ ಕೌರ ಇವರು, ‘ನಾನು ಈ ನಿರ್ಣಯವನ್ನು ಸ್ವಾಗತಿಸುತ್ತೇನೆ. ಈ ಆದೇಶವನ್ನು ಪೂರ್ಣತಃ ಜಾರಿ ಮಾಡಬೇಕು’ ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವುದೇವಸ್ಥಾನದಲ್ಲಿನ ಪಾವಿತ್ರ್ಯ ಕಾಪಾಡಿದರೆ ಅಲ್ಲಿಯ ಚೈತನ್ಯ ಉಳಿಯುತ್ತದೆ ಮತ್ತು ಭಕ್ತರಿಗೆ ಆಧ್ಯಾತ್ಮಿಕ ಮಟ್ಟದಲ್ಲಿ ಅದರ ಲಾಭವಾಗುತ್ತದೆ. ಇದನ್ನು ಗಮನಿಸಿ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ ಮಾಡಿರುವ ಕಾಳಿಮಾತೆಯ ದೇವಸ್ಥಾನದ ವ್ಯವಸ್ಥಾಪಕರು ಅಭಿನಂದನೆಗೆ ಪಾತ್ರರಾಗಿದ್ದಾರೆ ! |