ವಿಶೇಷ ಸಂವಾದ : ಕಾನ್ವೆಂಟ್ ಶಾಲೆಗಳ ವಿರೋಧ ‘ಟಿಕಲೀ’ಗೋ ಹಿಂದೂ ಧರ್ಮಕ್ಕೆ !

ಕಾನ್ವೆಂಟ್ ಶಾಲೆಗಳ ಬದಲು ಒಳ್ಳೆಯ ಸಂಸ್ಕಾರಗಳ ಶಿಕ್ಷಣ ನೀಡುವ ವಿದ್ಯಾಲಯಗಳನ್ನು ಆರಿಸಿ ! – ಗೌರಿ ದ್ವಿವೇದಿ, ಮುಖ್ಯೋಪಾಧ್ಯಾಯಿನಿ, ರುದ್ರಪ್ರಯಾಗ ವಿದ್ಯಾಮಂದಿರ !

ಸಾಂದರ್ಭಿಕ ಚಿತ್ರ

ಕಾನ್ವೆಂಟ್ ಶಾಲೆಗಳಲ್ಲಿ ವಿಶಿಷ್ಟ ಶರತ್ತುಗಳನ್ನು ಹಾಕಿ ಶಿಕ್ಷಣ ನೀಡಲಾಗುತ್ತದೆ; ಆದರೆ ಕಾನ್ವೆಂಟ್ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಹುತೇಕ ಮಕ್ಕಳು ಹಿಂದೂಗಳಾಗಿರುತ್ತಾರೆ. ಕಾನ್ವೆಂಟ್ ಶಾಲೆಗಳಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಹಿಂದುಗಳಾಗಿರುವುದರಿಂದ ಹಿಂದೂ ಸಂಸ್ಕೃತಿಯನ್ನು ಒಳಗೊಂಡಿರುವ ಶಿಕ್ಷಣ ನೀಡುವ ವ್ಯವಸ್ಥೆ ಕೂಡ ಇರಬೇಕು ಮತ್ತು ಇದರಲ್ಲಿ ಭೇದಭಾವ ಆದರೆ ಹಿಂದೂ ಮಕ್ಕಳ ಪೋಷಕರ ಸಮೂಹವು ಆ ಶಾಲಾ ಆಡಳಿತಕ್ಕೆ ಪ್ರಶ್ನೆ ಕೇಳಬೇಕು. ಕಾನ್ವೆಂಟ್ ಶಾಲೆಗಳಲ್ಲಿ ಕಲಿತಿರುವ ವಿದ್ಯಾರ್ಥಿಗಳು ಹಿಂದೂ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತರೆ ಮಾತ್ರ ವಿದ್ಯಾರ್ಥಿ ಯಶಸ್ವಿ ಆಗುವನು ಎಂಬ ತಪ್ಪುತಿಳುವಳಿಕೆಯಿಂದ ಪೋಷಕರು ಹೊರಬರಬೇಕು. ವಿದ್ಯಾರ್ಥಿಗಳು ಸಂಸ್ಕಾರಭರಿತರಾದರೆ ಮಾತ್ರ ಯಶಸ್ವಿ ಆಗುತ್ತಾರೆ ಎಂಬುದನ್ನು ಗಮನದಲ್ಲಿಡಬೇಕು. ಆಧುನಿಕ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರದ ಶಿಕ್ಷಣ ನೀಡುವ ವಿದ್ಯಾಲಯಗಳನ್ನು ನಿಮ್ಮ ಮಕ್ಕಳಿಗಾಗಿ ಆಯ್ಕೆ ಮಾಡಿರಿ ಎಂದು ಪ್ರಯಾಗರಾಜ(ಉತ್ತರ ಪ್ರದೇಶ) ಇಲ್ಲಿಯ ರುದ್ರ ಪ್ರಯಾಗ ವಿದ್ಯಾಮಂದಿರದ ಮುಖ್ಯೋಪಾಧ್ಯಾಯಿನಿ ಗೌರಿ ದ್ವಿವೇದಿ ಇವರು ಕರೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕಾನ್ವೆಂಟ್ ಶಾಲೆಯ ವಿರೋಧ ‘ಟಿಕಲಿ’ಗೋ ಹಿಂದೂ ಧರ್ಮಕ್ಕೆ ? ಎಂಬ ವಿಷಯದ ಮೇಲೆ ಆಯೋಜಿಸಲಾದ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಕಾನ್ವೆಂಟ ಶಾಲೆಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ತೆಗೆದು ಹಾಕಿರಿ !

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪುಣೆಯ ಸಮನ್ವಯಕರಾದ ಶ್ರೀ ನಾಗೇಶ ಜೋಶಿ ಇವರು, ಜಾರ್ಖಂಡದಲ್ಲಿನ ಕಾನ್ವೆಂಟ್ ಶಾಲೆಯಲ್ಲಿ ಹಣೆಯ ಮೇಲೆ ಟಿಕಲಿ ಹಚ್ಚಿರುವುದರಿಂದ ಶಿಕ್ಷಕಿ ಯು ಕಪಾಳಕ್ಕೆ ಹೊಡೆದರು. ಈ ಅವಮಾನದಿಂದ ಉಷಾ ಕುಮಾರಿ ಎಂಬ ಹಿಂದೂ ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಳು. ಇದು ಇಂತಹ ಕಿರುಕುಳದ ಮೊದಲ ಉದಾಹರಣೆ ಏನಲ್ಲ , ಈ ಹಿಂದೆ ಕೂಡ ದೇಶಾದ್ಯಂತ ಅಲ್ಲಲ್ಲಿ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಜೊತೆಗೆ ಈ ರೀತಿಯ ಘಟನೆಗಳು ನಡೆದಿವೆ. ಭಾರತವು ಸ್ವತಂತ್ರ ಆದ ನಂತರ ಹಿಂದೂ ವಿದ್ಯಾರ್ಥಿಗಳಿಗೆ ಶಾಲೆಯಿಂದ ತಮ್ಮ ಹಿಂದೂ ಧರ್ಮದ ಶಿಕ್ಷಣ ನೀಡುವುದು ಆರಂಭ ಮಾಡಬೇಕಿತ್ತು ; ಆದರೆ ಹೀಗೆ ಆಗಲಿಲ್ಲ. ಇಂದು ಅನೇಕ ಕಾನ್ವೆಂಟ್ ಶಾಲೆಗಳಿಂದ ಕೇವಲ ಕ್ರೈಸ್ತ ಧರ್ಮದ ಶಿಕ್ಷಣ ನೀಡಲಾಗುತ್ತದೆ. ಹಿಂದೂ ಧರ್ಮವನ್ನು ಟೀಕಿಸಲಾಗುತ್ತದೆ. ಈ ಕಾನ್ವೆಂಟ್ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳನ್ನು ಮತಾಂತರಿಸಲು ಪ್ರಯತ್ನಿಸಲಾಗುತ್ತಿದ್ದು ಕಾನ್ವೆಂಟ್ ಶಾಲೆಗಳು ಇವು ಹಿಂದೂಗಳನ್ನು ಮತಾಂತರಿಸುವ ಕೇಂದ್ರಗಳಾಗಿವೆ. ಬಹುತೇಕ ಕಾನ್ವೆಂಟ್ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಶೇಕಡ ೫೦ ಕಿಂತಲೂ ಹೆಚ್ಚಿನವರು ಹಿಂದೂ ವಿದ್ಯಾರ್ಥಿಗಳಾಗಿರುತ್ತಾರೆ. ಆದ್ದರಿಂದ ಕಾನ್ವೆಂಟ್ ಶಾಲೆಗಳಿಗೆ ನೀಡಿರುವ ಅಲ್ಪಸಂಖ್ಯಾತರ ಸ್ಥಾನಮಾನವನ್ನು ಸರಕಾರವು ಹಿಂಪಡೆಯಬೇಕು ಎಂದು ಹೇಳಿದರು.
ಧೋರಿ, ಜಾರ್ಖಂಡದಲ್ಲಿನ ಕಸ್ತೂರಬಾ ವಿದ್ಯಾನಿಕೇತನದ ಸಂಯುಕ್ತ ಅಧ್ಯಕ್ಷ ಡಾ. ಪೂಜಾ ಇವರು ಹೀಗೆಂದರು, ಕಾನ್ವೆಂಟ್ ಶಾಲೆಗಳಲ್ಲಿ ಕಲಿತಿರುವ ವಿದ್ಯಾರ್ಥಿಗಳು ವಿದೇಶಿ ಸಂಸ್ಕೃತಿಯನ್ನು ಅನುಕರಿಸುತ್ತಾರೆ. ಕಾನ್ವೆಂಟ್ ಶಾಲೆಗಳಲ್ಲಿ ಕಲಿತಿರುವ ಮಕ್ಕಳು ನಿರಾಶೆಗೆ ಬಲಿಯಾಗುತ್ತಾರೆ, ಎಂದೂ ಕಂಡು ಬಂದಿದೆ. ಶಾಲೆಗೆ ಹೋಗುವ ಮಕ್ಕಳು ತಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಾರೆ ; ಇದರ ವಿರುದ್ಧ ಸನಾತನ ಹಿಂದೂ ಧರ್ಮದ ಶಿಕ್ಷಣ ಮತ್ತು ಆಚರಣೆ ಮಾಡುವ ಮಕ್ಕಳು ಆತ್ಮ ಬಲದಿಂದ ತುಂಬಿರುತ್ತಾರೆ. ಇಂತಹ ಮಕ್ಕಳು ನಿರಾಶೆಗೆ ಬಲಿಯಾಗುವುದಿಲ್ಲ, ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಕಾನ್ವೆಂಟ್ ಮಾತ್ರವಲ್ಲ, ಇತರ ಅನೇಕ ಶಾಲೆಗಳಲ್ಲಿಯೂ ಇಂಗ್ಲಿಷ್ ಭಾಷೆಯನ್ನು ಒಳ್ಳೆಯ ರೀತಿಯಲ್ಲಿ ಕಲಿಸಲಾಗುತ್ತದೆ. ನಮ್ಮ ದೇಶಾದ್ಯಂತ ಇರುವ ವಿದ್ಯಾಭಾರತಿ ಶಾಲೆಗಳಲ್ಲಿ ಈ ಪ್ರಯತ್ನ ನಡೆಯುತ್ತಿದೆ.