Nostradamus Prediction : ಭಾರತ ಹಿಂದೂ ರಾಷ್ಟ್ರವಾದ ಬಳಿಕ ರಷ್ಯಾ ಹಿಂದೂ ಧರ್ಮ ಸ್ವೀಕರಿಸಿ ಜಗತ್ತಿನಾದ್ಯಂತ ಪ್ರಸಾರ ಮಾಡಲಿದೆ!

ನವದೆಹಲಿ – ಪ್ರಾನ್ಸನ 15 ನೇ ಶತಮಾನದ ಜಗತ್ ಪ್ರಸಿದ್ಧ ಫ್ರೆಂಚ್ ಭವಿಷ್ಯಕಾರ ಮೈಕೆಲ್ ಡಿ. ನಾಸ್ಟ್ರಾಡಾಮಸ್ ಇವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಅವರು ತಮ್ಮ ‘ಲೆಸ್ ಪ್ರೊಫೆಸೀಸ್’ ಪುಸ್ತಕದಲ್ಲಿ ಅನೇಕ ಭವಿಷ್ಯವಾಣಿಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಹೆಚ್ಚಿನವು ನಿಜವಾಗಿವೆ. ಈ ಪುಸ್ತಕದಲ್ಲಿರುವ ಭವಿಷ್ಯವಾಣಿಗಳು ಕಾಲಕಾಲಕ್ಕೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಅವರ ಭವಿಷ್ಯವಾಣಿಯು ಪ್ರಕಟವಾಗಿದೆ. ಅದರಲ್ಲಿ ಮುಂದುವರಿದು ಜಗತ್ತಿನ ಒಂದು ಪ್ರಮುಖ ದೇಶವು ಕಮ್ಯುನಿಸಂ ಅನ್ನು ತ್ಯಜಿಸಿ, ಹಿಂದೂ ಧರ್ಮವನ್ನು ಸ್ವೀಕರಿಸಿ ನಂತರ ಅದನ್ನು ಹರಡುತ್ತದೆ. ಈ ದೊಡ್ಡ ದೇಶವೆಂದರೆ ರಷ್ಯಾ ಆಗಲಿದೆ; ಏಕೆಂದರೆ ಕಮ್ಯುನಿಸ್ಟ್ ರಾಷ್ಟ್ರವಾಗಿರುವ ರಷ್ಯಾ ಇಂದು ಅತಿದೊಡ್ಡ ದೇಶವಾಗಿದ್ದು, ಭಾರತದೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದೆ.

ದಕ್ಷಿಣ ಭಾರತದಿಂದಲೇ ಭಾರತದ ಹಿಂದೂ ನಾಯಕ ಉದಯ!

ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳ ಪ್ರಕಾರ, ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದಿಂದ ಒಬ್ಬ ಹಿಂದೂ ನಾಯಕ ಹೊರಹೊಮ್ಮುತ್ತಾನೆ. ಈ ನಾಯಕ ಇಡೀ ಜಗತ್ತನ್ನು ಒಂದುಗೂಡಿಸುವನು. ಇದಾದ ನಂತರ ರಷ್ಯಾ ಕಮ್ಯುನಿಸಂ ಅನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸುತ್ತದೆ. ಈ ಅವಧಿಯಲ್ಲಿ, ರಷ್ಯಾ ಇತರ ದೇಶಗಳಲ್ಲಿ ಹಿಂದೂ ಧರ್ಮವನ್ನು ಪ್ರಚಾರ ಮಾಡುತ್ತದೆ. 21 ನೇ ಶತಮಾನದಲ್ಲಿ, ಭಾರತವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಮತ್ತು ಅದರ ಆಧ್ಯಾತ್ಮಿಕ ತತ್ವಶಾಸ್ತ್ರ (ಹಿಂದೂ ಧರ್ಮ ಸೇರಿದಂತೆ) ಪ್ರಪಂಚದಾದ್ಯಂತ ಹರಡಲು ಸಾಧ್ಯವಾಗುತ್ತದೆ. ಈ ಭಾರತೀಯ ನಾಯಕ ಜಗತ್ತಿನ ರಾಜಕೀಯ ಮತ್ತು ಆಧ್ಯಾತ್ಮದ ಮೇಲೆ ಪ್ರಭಾವ ಬೀರುತ್ತಾನೆ.

ಸನಾತನ ಸಂಸ್ಕೃತಿ ಮತ್ತು ಯೋಗದ ಪ್ರಸಾರ!

ಭಾರತೀಯ ಸಂಸ್ಕೃತಿ, ಯೋಗ ಮತ್ತು ವೇದಾಂತವು ಜಾಗತಿಕವಾಗಿ ಪ್ರಚಾರ ಮಾಡುವ ಸಮಯದ ಬಗ್ಗೆಯೂ ನಾಸ್ಟ್ರಾಡಾಮಸ್ ಸುಳಿವು ನೀಡಿದ್ದರು. ಇಂದು, ಯೋಗ ಮತ್ತು ಧ್ಯಾನವು ಪ್ರಪಂಚದಾದ್ಯಂತ ಜನಪ್ರಿಯವಾಗಿವೆ, ಕೆಲವರು ಇದನ್ನು ಅವರ ಭವಿಷ್ಯವಾಣಿಯೊಂದಿಗೆ ಹೋಲಿಕೆ ಮಾಡುತ್ತಾರೆ.