Bangladeshi Army House Arrest : ಬಾಂಗ್ಲಾದೇಶದಲ್ಲಿ ಸೇನಾ ಮುಖ್ಯಸ್ಥರನ್ನು ತೆಗೆದುಹಾಕುವ ಪ್ರಯತ್ನ ವಿಫಲ!

ಲೆಫ್ಟಿನೆಂಟ್ ಜನರಲ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ!

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಸೇನೆಯಲ್ಲಿ ಪಾಕಿಸ್ತಾನ ಮತ್ತು ಜಮಾತ್-ಎ-ಇಸ್ಲಾಮಿ ಸಂಘಟನೆಯ ಬೆಂಬಲಿಗ ಲೆಫ್ಟಿನೆಂಟ್ ಜನರಲ್ ಬಾಂಗ್ಲಾದೇಶದ ಸೇನೆಯನ್ನು ವಶಪಡಿಸಿಕೊಳ್ಳುವ ಪ್ರಯತ್ನ ವಿಫಲವಾದ ಕಾರಣ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಸಹಾಯದಿಂದ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಕಾರ್-ಉಜ್-ಜಮಾನ್ ಅವರನ್ನು ವಜಾಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಅದರಂತೆ ಲೆಫ್ಟಿನೆಂಟ್ ಜನರಲ್ ಫೈಜುರ್ ರೆಹಮಾನ್ ಈ ಪ್ರಯತ್ನ ಮಾಡಿದ್ದಾರೆ. ಅವರು ಜಮಾನ್ ಅವರ ಸ್ಥಾನವನ್ನು ಪಡೆಯಲು ಪ್ರಯತ್ನಿಸಿದ್ದಾರೆ; ಆದರೆ ಅವರಿಗೆ ಬೆಂಬಲ ಸಿಗದ ಕಾರಣ ಅವರ ಪ್ರಯತ್ನ ವಿಫಲವಾಗಿದೆ.

ಲೆಫ್ಟಿನೆಂಟ್ ಜನರಲ್ ರೆಹಮಾನ್ ಅವರು ತಮ್ಮ ಶಕ್ತಿಯನ್ನು ಪರೀಕ್ಷಿಸಲು ಕರೆದ ಸಭೆಗೆ ಸೇನೆಯ ಹಿರಿಯ ಅಧಿಕಾರಿಗಳು ಗೈರುಹಾಜರಾದ ಕಾರಣ ಅವರ ಶಕ್ತಿ ಬಯಲಾಗಿದೆ. ಇದರ ನಂತರ ಬಾಂಗ್ಲಾದೇಶದ ಸೇನಾ ಮುಖ್ಯಸ್ಥರು ಎಚ್ಚೆತ್ತುಕೊಂಡು ರೆಹಮಾನ್ ಅವರನ್ನು ಸೇನೆಯ ಗುಪ್ತಚರ ವಿಭಾಗದ ಕಣ್ಗಾವಲಿನಲ್ಲಿ ಇರಿಸಿದ್ದಾರೆ. ಈ ಪ್ರಕರಣದಲ್ಲಿ ಸೇನೆಯ ಸುಮಾರು 10 ಅಧಿಕಾರಿಗಳ ಹೆಸರುಗಳು ಬೆಳಕಿಗೆ ಬಂದಿವೆ. ಇದರಲ್ಲಿ ಮೇಜರ್ ಜನರಲ್ ಮೀರ್ ಮುಶ್ಫಿಕುರ್ ರೆಹಮಾನ್ ಅವರೂ ಸೇರಿದ್ದಾರೆ.