ಒಪ್ಪಿಗೆಯಿಂದ ದೈಹಿಕ ಸಂಬಂಧದ ವಯಸ್ಸಿನ ಮಿತಿ ೧೬ ಮಾಡಬೇಕು !

ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ !

ಗ್ವಾಲಿಯರ್ (ಮಧ್ಯ ಪ್ರದೇಶ) – ಒಪ್ಪಿಗೆಯಿಂದ ದೈಹಿಕ ಸಂಬಂಧ ಇರಿಸಲು ೧೮ ವರ್ಷದ ಬದಲು ೧೬ ವರ್ಷ ಮಾಡಬೇಕೆಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ಗ್ವಾಲಿಯರ್ ಖಂಡ ಪೀಠದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಒಂದು ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ಮನವಿ ಮಾಡಿದೆ.

೧. ಉಚ್ಚ ನ್ಯಾಯಾಲಯವು, ಇಂಟರ್ನೆಟ್ ಯುಗದಲ್ಲಿ ಮಕ್ಕಳು ಬೇಗನೆ ಪ್ರೌಢಾವಸ್ಥೆಗೆ ಬರುತ್ತಿದ್ದಾರೆ. ಅನೇಕ ಕಿಶೋರ ವಯಸ್ಸಿನ ಮಕ್ಕಳು ೧೮ ವರ್ಷ ಪೂರ್ಣವಾಗುವ ಮೊದಲೇ ಹೆಣ್ಣು ಮಕ್ಕಳ ಜೊತೆಗೆ ದೈಹಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ಅದರ ನಂತರ ಪೊಲೀಸರು ಅವರಿಗೆ ‘ಪೋಕ್ಸೋ’ ಕಾನೂನಿನ ಅಂತರ್ಗತ ಬಂಧಿಸುತ್ತಾರೆ. ಈ ಕ್ರಮದಿಂದ ಮಕ್ಕಳ ಭವಿಷ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಪ್ರೌಢಾವಸ್ಥೆಗೆ ಬರುವ ಮಕ್ಕಳ ವಿರುದ್ಧ ಲಿಂಗದ ವ್ಯಕ್ತಿಯ ಜೊತೆಗೆ ಆಕರ್ಷಣೆ ಅನಿಸುವುದು ಸ್ವಾಭಾವಿಕವಾಗಿದೆ; ಆದರೆ ಮಕ್ಕಳು ದೈಹಿಕ ಸಂಬಂಧ ಇರಿಸಿ ಕೊಳ್ಳುತ್ತಾರೆ ಮತ್ತು ಅವರ ಭವಿಷ್ಯ ಅಂಧಃಕಾರಮಯವಾಗುತ್ತದೆ.

(ಸೌಜನ್ಯ – News18 MP Chhattisgarh)

೨. ಗ್ವಾಲಿಯರ್ ನಲ್ಲಿ ರಾಹುಲ್ ಜಾಟವ ಇವನ ವಿರುದ್ಧ ೧೪ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ದೂರು ದಾಖಲಾಗಿದೆ. ಅವನನ್ನು ಬಂಧಿಸಲಾಗಿದ್ದು ಅವನು ಇನ್ನೂ ಕೂಡ ಜೈಲಿನಲ್ಲಿ ಇದ್ದಾನೆ.

೩. ಸಂತ್ರಸ್ತೇ ಹುಡುಗಿ ಟ್ಯೂಶನ್ ಗೆ ಹೋಗುತ್ತಿದ್ದಳು. ಜನೆವರಿ 18, ೨೦೨೦ ರಂದು ಆಕೆ ತರಗತಿಗೆ ಹೋದಳು ಅಲ್ಲಿ ಯಾರು ಇರಲಿಲ್ಲ. ಅಲ್ಲಿ ಉಪಸ್ಥಿತ ಇರುವ ರಾಹುಲನು ಆಕೆಗೆ ಪಾನೀಯ ಕುಡಿಸಿದನು. ಅದರ ನಂತರ ಹುಡುಗಿ ಮೂರ್ಛೆ ಹೋದಳು. ಅದರ ನಂತರ ರಾಹುಲನು ಆಕೆಯ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ ಮತ್ತು ಅಶ್ಲೀಲ ವಿಡಿಯೋ ತಯಾರಿಸಿದ. ಈ ಮೂಲಕ ಅವನು ಸಂತ್ರಸ್ತೇಗೆ ವಿಡಿಯೋ ಪ್ರಸಾರ ಮಾಡುವ ಬೆದರಿಕೆ ನೀಡುತ್ತಾ ಮೇಲಿಂದ ಮೇಲೆ ದೈಹಿಕ ಸಂಬಂಧ ಇರಿಸಲು ಅನಿವಾರ್ಯಗೊಳಿಸಿದ. ಸಂತ್ರಸ್ತೇ ಹುಡುಗಿ ಗರ್ಭಿಣಿಯಾದಳು. ನ್ಯಾಯಾಲಯದ ಅನುಮತಿಯ ನಂತರ ಆಕೆಯ ಗರ್ಭಪಾತ ಮಾಡಲಾಯಿತು.

೪. ರಾಹುಲನ ನ್ಯಾಯವಾದಿ ನ್ಯಾಯಾಲಯಕ್ಕೆ, ಇಬ್ಬರ ಒಪ್ಪಿಗೆಯಿಂದ ಸಂಬಂಧ ಇಟ್ಟುಕೊಂಡಿದ್ದರು. ಮತ್ತು ರಾಹುಲನ್ನು ಅನಾವಶ್ಯಕವಾಗಿ ಇದರಲ್ಲಿ ಸಿಲುಕಿಸಿದ್ದಾರೆ. ರಾಹುಲ ವಿರುದ್ಧ ನೀಡಿರುವ ದೂರ ರದ್ದುಪಡಿಸಿಲು ಕೂಡ ಒತ್ತಾಯಿಸಿದ್ದಾರೆ. ಅವರ ಬೇಡಿಕೆ ಒಪ್ಪುತ್ತ ಅಪರಾಧ ರದ್ದು ಪಡಿಸುತ್ತ ಒಪ್ಪಿಗೆಯಿಂದ ಸಂಬಂಧ ಇರಿಸಲು ೧೮ ವರ್ಷದ ಬದಲು ೧೬ ವರ್ಷ ಮಾಡುವ ಯೋಚನೆ ಮಾಡಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ನೀಡಿದೆ.

ಸಂಪಾದಕೀಯ ನಿಲುವು

ಬಾಲ್ಯದಿಂದಲೇ ಮಕ್ಕಳಿಗೆ ಸಾಧನೆ ಕಲಿಸಿದರೆ ಅವರ ಬುದ್ಧಿ ಸಾತ್ವಿಕವಾಗುತ್ತದೆ ಮತ್ತು ಅಯೋಗ್ಯ ಕೃತಿ ಮಾಡುವುದಿಲ್ಲ ! ಸರಕಾರದಿಂದ ಇದಕ್ಕಾಗಿ ಪ್ರಯತ್ನ ಮಾಡಬೇಕು !