ಅಮೇರಿಕಾಗೆ ಹಿಂದೂ ಸಮಾಜದ ಕೊಡುಗೆ ಮಹತ್ವಪೂರ್ಣವಾಗಿದೆಯೆಂದು ಹೇಳುತ್ತಾ ಹೊಗಳಿದರು !
ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಘಟನೆಗಳು ಹೆಚ್ಚಾಗುತ್ತಿವೆ. ಹಿಂದೂ ಮತ್ತು ಅವರ ಆಸ್ತಿ-ಪಾಸ್ತಿಗಳನ್ನು ಗುರಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದೂಗಳ ಸಂಘಟನೆಗಳು ಅಮೇರಿಕಾದ ಕ್ಯಾಪಿಟಲ್ ಹಿಲ್ ನಲ್ಲಿ `ನ್ಯಾಶನಲ್ ಹಿಂದೂ ಎಡ್ವೊಕೆಸಿ ಡೆ ಆನ್ ದಿ ಹಿಲ್’ ಕಾರ್ಯಕ್ರಮದ ಆಯೋಜನೆ ಮಾಡಿತ್ತು. ಅದರಲ್ಲಿ ಅಮೇರಿಕಾದಲ್ಲಿರುವ ಭಾರತೀಯ ಮೂಲದ ಸಂಸದರು ಮತ್ತು ಇತರೆ ಅಮೇರಿಕಾದ ಸಂಸದರು ಭಾಗವಹಿಸಿದ್ದರು. ಈ ಸಂಸದರು ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಿದರು. ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಸಹಿತ ಸಂಸದ ರಿಚ್ ಮಾಕ್ಕೊರ್ಮಿಕ್, ಬಡಿ ಕಾರ್ಟರ್, ಥಾಮ್ಸಸ್ ಕೀನ, ಹ್ಯಾಕ್ ಜಾನಸನ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸದ ರಿಚ್ ಮ್ಯಾಕ್ಕೊರ್ಮಿಕ್ ಮಾತನಾಡಿ, ಅಮೇರಿಕಾಗೆ ಮತ್ತು ಸಮಾಜಕ್ಕಾಗಿ ಹಿಂದೂ ಸಮಾಜದ ಮಹತ್ವಪೂರ್ಣ ಕೊಡುಗೆಯಿದೆಯೆಂದು ಹೇಳಿದರು.
1. ಸಂಸದ ಶ್ರೀ. ಠಾಣೆದಾರ ಮಾತನಾಡಿ, ನಾನು ಹಿಂದೂಗಳನ್ನು ಬೆಂಬಲಿಸಲು ಇಲ್ಲಿಗೆ ಬಂದಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯು ದ್ವೇಷ, ಕಟ್ಟರತೆ, ಯಾರ ಮೇಲಾದರೂ ದಾಳಿ ಮಾಡುವುದು ಮುಂತಾದ ವಿಷಯಗಳನ್ನು ತ್ಯಜಿಸಬೇಕು. ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಆಚರಿಸುವ ಅಧಿಕಾರವಿದೆ.
2. ಅಮೇರಿಕಾದ ತನಿಖಾ ಸಂಸ್ಥೆ ಎಫ್.ಬಿ.ಐ.ನ 2020ರ ಅಂಕಿ-ಅಂಶಗಳ ಪ್ರಕಾರ ಅಮೇರಿಕಾದಲ್ಲಿ ಭಾರತೀಯರ ವಿರುದ್ಧ ದ್ವೇಷದ ಅಪರಾಧಗಳು ಶೇ. 500 ರಷ್ಟು ಹೆಚ್ಚಾಗಿದೆ. ಅಮೇರಿಕಾದಲ್ಲಿ ಹಿಂದೂಗಳ ಜನಸಂಖ್ಯೆ 22 ಲಕ್ಷಕ್ಕಿಂತಲೂ ಹೆಚ್ಚಿದೆ ಎಂದು ಹೇಳಿದರು.
Hindu Americans call for protection against rising Hinduphobia and Caste Bill, US lawmakers stand in support
Read @ANI Story | https://t.co/4nuhnl23OG#CoHNA #HinduAmericans #SriThanedar #US pic.twitter.com/uy8y1HTy7v
— ANI Digital (@ani_digital) July 12, 2023