Bangladesh Infiltrators : ರಾಯಗಡನಲ್ಲಿ ಹಿಂದೂತ್ವನಿಷ್ಠ ಸಂಘಟನೆಗಳ ಮನವಿ ಬಳಿಕ ಪೊಲೀಸರಿಂದ ಕಾರ್ಯಾಚರಣೆ!

  • ಕಾರ್ಯಾಚರಣೆ ಆರಂಭ!

  • ಬಾಂಗ್ಲಾದೇಶದವರ ಮಾಹಿತಿ ನೀಡಲು ಸಾರ್ವಜನಿಕರಿಗೆ ಪೊಲೀಸರ ಮನವಿ!

ರಾಯಗಡ, ಮಾರ್ಚ್ 13 (ವಾರ್ತಾ) – ಜಿಲ್ಲೆಯ ರೋಹಾ ತಾಲೂಕಿನ ನಾಗೋಠಾಣೆಯ ಹಿಂದೂತ್ವನಿಷ್ಠ ಸಂಘಟನೆಗಳ ವತಿಯಿಂದ ವಾರಕರಿ ಸಂಪ್ರದಾಯದ ಹ.ಭ.ಪ. ಬಾಪು ಮಹಾರಾಜ ರಾವ್ಕರ್ ಅವರು ‘ನಾಗೋಠಾಣೆ ಪ್ರದೇಶದ ನಿವಾಸಿಗಳು, ಕಾರ್ಮಿಕರು, ಕೈಗಾಡಿ ಮಾರಾಟಗಾರರು, ಬೀದಿ ವ್ಯಾಪಾರಿಗಳ ಆಧಾರ್ ಕಾರ್ಡ್ ಪರಿಶೀಲಿಸಿ ಬಾಂಗ್ಲಾದೇಶಿ ನಾಗರಿಕರ ಶೋಧ ಕಾರ್ಯಾಚರಣೆ ನಡೆಸಬೇಕು’ ಎಂದು ಕೋಲಾಡ ಪೊಲೀಸ್ ಠಾಣೆಗೆ ಮನವಿ ನಿಡಿದ್ದರು. ಪೊಲೀಸರು ಈ ಮನವಿಯನ್ನು ದಾಖಲಿಸಿಕೊಂಡು ನಾಗೋಠಾಣೆ ಪ್ರದೇಶದಲ್ಲಿ ಬಾಂಗ್ಲಾದೇಶಿ ನಾಗರಿಕರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ ಮತ್ತು ಗ್ರಾಮದ ನಾಗರಿಕರಿಗೆ ಅವರ ಮಾಹಿತಿ ಸಿಕ್ಕರೆ ಕೂಡಲೇ ಕೋಲಾಡ ಪೊಲೀಸ್ ಠಾಣೆಗೆ ತಿಳಿಸುವಂತೆ ಕರೆ ನೀಡಿದ್ದಾರೆ.

ನಾಗೋಠಾಣೆಯ ಹಿಂದೂತ್ವನಿಷ್ಠ ಸಂಘಟನೆಗಳು ಪೊಲೀಸರಿಗೆ ಸಹಾಯ ಮಾಡಲಿವೆ!

ನಾಗೋಠಾಣೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಹೆಚ್ಚಾಗಿರುವುದರಿಂದ ಇದರ ವಿರುದ್ಧ ಎಲ್ಲಾ ಹಿಂದೂತ್ವನಿಷ್ಠ ಸಂಘಟನೆಗಳು ಒಗ್ಗೂಡಿವೆ. ಇದರಲ್ಲಿ ಹಿಂದೂ ಜನಜಾಗೃತಿ ಮಂಚ್ ನಾಗೋಠಾಣೆ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಪ್ರಜ್ಞಾ ಭಾರತಿ, ವಾರಕರಿ ಸಂಪ್ರದಾಯ, ಸನಾತನ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳು ಒಗ್ಗೂಡಿ ಸಭೆ ನಡೆಸಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು. ರೋಹಾ ಪೊಲೀಸ್ ಉಪಾಧೀಕ್ಷಕರಿಗೂ ಮನವಿ ಸಲ್ಲಿಸಲಾಯಿತು. ಪೊಲೀಸರು ಬಾಂಗ್ಲಾದೇಶಿ ನಾಗರಿಕರ ಶೋಧ ಕಾರ್ಯಾಚರಣೆಯನ್ನು ನಡೆಸುವ ಬಗ್ಗೆ ನೇರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಎಲ್ಲಾ ಹಿಂದೂತ್ವನಿಷ್ಠ ಸಂಘಟನೆಗಳು ನಿಗಾವಹಿಸಿವೆ.

ಬಾಂಗ್ಲಾದೇಶಿ ನಾಗರಿಕರ ಶೋಧ ಕಾರ್ಯಾಚರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು! – ಹಿಂದೂತ್ವನಿಷ್ಠರ ಬೇಡಿಕೆ

ಹಿಂದೂತ್ವನಿಷ್ಠ ಸಂಘಟನೆಗಳ ವತಿಯಿಂದ ಹ.ಭ.ಪ. ಬಾಪು ರಾವಕರ್ ಅವರು ಪೊಲೀಸ್ ಠಾಣೆಗೆ ನೀಡಿದ ಮನವಿಯಲ್ಲಿ ನಾಗೋಠಾಣೆ ಪ್ರದೇಶದಲ್ಲಿ ಬಾಂಗ್ಲಾದೇಶಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ‘ರಿಲಯನ್ಸ್’ ಸಂಸ್ಥೆಯ ಹೊಸ ಯೋಜನೆಗಳಲ್ಲಿರುವ ಹೊಸ ಕಾರ್ಮಿಕರನ್ನು ವಿಚಾರಣೆ ನಡೆಸಬೇಕು. ಮಿರಾನಗರ ನಾಗೋಠಾಣೆಯಲ್ಲಿ ಬಾಂಗ್ಲಾದೇಶಿಗಳ ವಸಾಹತು ಹೆಚ್ಚುತ್ತಿದೆ. ಅಲ್ಲಿನ ಪ್ರತಿಯೊಬ್ಬ ನಿವಾಸಿಗಳ ಆಧಾರ್ ಕಾರ್ಡ್ ಪರಿಶೀಲಿಸಿ ವಿಚಾರಣೆ ನಡೆಸಬೇಕು ಎಂದು ಹೇಳಲಾಗಿದೆ.

ಸಭೆಯಲ್ಲಿ ಉಪಸ್ಥಿತರಿದ್ದ ಹಿಂದೂತ್ವನಿಷ್ಠ ಸಂಘಟನೆಗಳು ಮತ್ತು ಪದಾಧಿಕಾರಿಗಳು

ವಾರಕರಿ ಸಂಪ್ರದಾಯದ ಹ.ಭ.ಪ. ಬಾಪು ರಾವಕರ್, ಶ್ರೀ ಶಿವಪ್ರತಿಷ್ಠಾನ ಹಿಂದುಸ್ತಾನದ ಧಾರಕರಿಗಳಾದ ಸರ್ವಶ್ರೀ ಯೋಗೇಶ್ ಠಾಕೂರ್, ಮಯೂರ್ ನಾಯ್ಕ್, ಚೇತನ್ ಕಾಮಥೆ, ಮಯೂರ್ ಶಿರ್ಕೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ್ವಶ್ರೀ ಮಂದಾರ್ ಪರಾಂಜಪೆ, ಕೈಲಾಸ್ ಪರದೇಶಿ, ಪಂಚಮ್ ಪರದೇಶಿ, ಕೇತನ್ ನಂದಗಾಂವ್ಕರ್, ಸ್ವಾವಲಂಬಿ ಭಾರತ ಅಭಿಯಾನದ ಶ್ರೀ ಸಂದೇಶ್ ಜಾಧವ್, ಭಾಜಪದ ಶ್ರೀ ಗಣೇಶ್ ಘಾಗ್, ಧನರಾಜ್ ಉಮಾಳೆ

ಕೋಲಾಡ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಎನ್.ಎಸ್. ಪಾಟೀಲ್ ಅವರು ಹ.ಭ.ಪ. ಬಾಪು ರಾವಕರ್ ಅವರಿಗೆ ಕಳುಹಿಸಿದ ಪತ್ರದಲ್ಲಿ,

1.  ನಾಗೋಠಾಣೆಯಲ್ಲಿ ಬಾಂಗ್ಲಾದೇಶಿ ನಾಗರಿಕರ ಮಾಹಿತಿ ನೀಡುವ ಬಗ್ಗೆ ಪೊಲೀಸ್ ಪಾಟೀಲ್ ಅವರ ವತಿಯಿಂದ ದಂಡೋರ ಹಾಕಲಾಗಿದೆ. ಬಾಂಗ್ಲಾದೇಶಿ ಅಥವಾ ಹೊರರಾಜ್ಯದ ನಾಗರಿಕರು ಕಂಡುಬಂದರೆ ಕೂಡಲೇ ಕೋಲಾಡ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಪೊಲೀಸ್ ಪಾಟೀಲರೊಂದಿಗೆ ನಡೆಸಿದ ಸಭೆಯಲ್ಲಿ ತಿಳಿಸಲಾಗಿದೆ.

2. ಕೋಲಾಡ ಪೊಲೀಸ್ ಠಾಣೆಯಲ್ಲಿ ನಡೆಸಿದ ಶಾಂತಿ ಸಮಿತಿ ಸಭೆಯಲ್ಲಿ ಹೊರರಾಜ್ಯದವರ ಮಾಹಿತಿಯನ್ನು ಪೊಲೀಸ್ ಠಾಣೆಗೆ ತಿಳಿಸುವಂತೆ ಹೇಳಲಾಗಿತ್ತು.

3. ವಿವಿಧ ಸ್ಥಳಗಳಲ್ಲಿ ಪ್ರಬೋಧನಾ ಫಲಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ನಿಮ್ಮ (ಹಿಂದೂಗಳು ನೀಡಿದ) ಅರ್ಜಿಯನ್ನು ಕಡತದಲ್ಲಿ ದಾಖಲೆ ರೂಪದಲ್ಲಿ ಇರಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂತ್ವನಿಷ್ಠ ಸಂಘಟನೆಗಳು ಹೇಳಿದ ನಂತರ ಕಾರ್ಯನಿರ್ವಹಿಸುವ ಪೊಲೀಸರು! ಪೊಲೀಸರು ವಾವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು!