ಜಾಫರ್ ಎಕ್ಸ್ಪ್ರೆಸ್ ರೈಲ್ವೆ ಅಪಹರಣದ ಹಿಂದೆ ಭಾರತದ ಕೈವಾಡ; ಪಾಕಿಸ್ತಾನದ ಹುರುಳಿಲ್ಲದ ದಾವೆ!

ಭಯೋತ್ಪಾದನೆಯ ಕೇಂದ್ರ ಎಲ್ಲಿದೆ, ಇದು ಇಡೀ ಜಗತ್ತಿಗೆ ತಿಳಿದಿದೆ ! – ಭಾರತ

ನವದೆಹಲಿ – ಪಾಕಿಸ್ತಾನದಲ್ಲಿ ‘ಬಲೂಚಿಸ್ತಾನ ಲಿಬ್ರೇಶನ್ ಆರ್ಮಿ’ ಯಿಂದ ಅಪಹರಿಸಲಾದ ಜಾಫರ್ ಎಕ್ಸ್ಪ್ರೆಸ್ ಹಿಂದೆ ಭಾರತದ ಕೈವಾಡ ಇದೆ ಎಂದು ಪಾಕಿಸ್ತಾನ ಆರೋಪವನ್ನು ಭಾರತ ತಳ್ಳಿ ಹಾಕಿದೆ. ಭಾರತದ ವಿದೇಶಾಂಗ ಸಚಿವಾಲಯ ಸುತ್ತೋಲೆ ಪ್ರಸಾರ ಮಾಡಿ, ಭಯೋತ್ಪಾದನೆಯ ಕೇಂದ್ರ ಎಲ್ಲಿದೆ ಎಂದು ಜಗತ್ತಿಗೆ ತಿಳಿದಿದೆ. ಪಾಕಿಸ್ತಾನವು ಸ್ವತ ಆಂತರಿಕ ಸಮಸ್ಯೆ ಮತ್ತು ವಿಫಲತೆಯ ಬಗ್ಗೆ ಬೇರೆಯವರ ಕಡೆಗೆ ಬೆರಳು ತೋರಿಸುವ ಬದಲು ಮತ್ತು ಇತರರನ್ನು ದೋಷಿಸುವ ಬದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಶಪಕತ್ ಅಲಿ ಖಾನ್ ಇವರು, ಜಾಫರ್ ಎಕ್ಸ್ಪ್ರೆಸ್‌ನ ಘಟನೆಯಲ್ಲಿ ಸಹಭಾಗಿ ಇರುವ ಬಂಡಾಯಗಾರರು ಅಪಘಾನಿಸ್ತಾನದಲ್ಲಿ ಅವರ ಸೂತ್ರಧಾರನ ಸಂಪರ್ಕದಲ್ಲಿ ಇದ್ದರು ಎಂದು ಹೇಳಿದ್ದರು.

ರೈಲ್ವೆ ‘ಬಲೂಚಿಸ್ತಾನ್ ಲಿಬರೇಶನ್ ಆರ್ಮಿ’ ಯ ವಶದಲ್ಲಿ ಇರುವುದೆಂದು ದಾವೆ

ಅಪಹರಿಸಿರುವ ರೈಲ್ವೆ ಬಿಡುಗಡೆಗೊಳಿಸಲಾಗಿದೆ ಎಂದು ಪಾಕಿಸ್ತಾನ ಸೈನ್ಯದ ದಾವೆಯನ್ನು ‘ಬಲೂಚಿಸ್ತಾನ ಲಿಬರೆಶನ್ ಆರ್ಮಿ’ ಈ ಹಿಂದೆಯೇ ತಳ್ಳಿ ಹಾಕಿದೆ. ಈ ಸಂಘಟನೆ ಮನವಿ ಪ್ರಸಾರ ಮಾಡಿ ಅದರಲ್ಲಿ, ಪಾಕಿಸ್ತಾನದ ಸೈನ್ಯ ಏನಾದರೂ ನಿಜವಾಗಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದರೆ ಅದು ಒತ್ತೆಯಾಳುಗಳ ಛಾಯಾಚಿತ್ರ ಏಕೆ ಪ್ರಸಾರಗೊಳಿಸುವುದಿಲ್ಲ ?, ಎಂದು ಪ್ರಶ್ನಿಸಿದೆ.