ಮುಂಬಯಿ – ನಮಗೆ ಇಲ್ಲಿ ಔರಂಗಜೇಬ, ಟಿಪ್ಪು ಸುಲ್ತಾನ್ ಅವರ ವಿಚಾರಗಳ ಕೊಳಕು ಬೇಡವಾಗಿದೆ. ಅದನ್ನು ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗಬೇಕು. ಮಹಾರಾಷ್ಟ್ರಕ್ಕೆ ಹಿಂದವೀ ಸ್ವರಾಜ್ಯದ ವಿಚಾರಗಳು ಬೇಕು. ನಾನು ಹಿಂದೂ ಸಮಾಜಕ್ಕೆ ಔರಂಗಜೇಬನ ಸಮಾಧಿಯ ‘ಕರೆಕ್ಟ್’ (ಸರಿಯಾದ) ಕಾರ್ಯಕ್ರಮ ಖಂಡಿತಾ ನಡೆಯುತ್ತದೆ ಎಂದು ಭರವಸೆ ನೀಡುತ್ತೇನೆ, ಎಂದು ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಅವರು ಮಾತು ಮುಂದುವರೆಸಿ, “ಸರಕಾರದ ಬಳಿ 5 ವರ್ಷವಿದೆ. ಈಗ ನಾವು ಮೈದಾನಕ್ಕೆ ಇಳಿದಿದ್ದೇವೆ. ನಾವು ಶತಕ ಪೂರ್ಣಗೊಳಿಸಬೇಕು. ಔರಂಗಜೇಬನ ಸಮಾಧಿಯ ಸುತ್ತ ಭದ್ರತೆ ಹೆಚ್ಚಿಸಲಾಗಿದೆ ಎಂದು ಕೇಳಿದ್ದೇನೆ. ಭದ್ರತೆ ಹೆಚ್ಚಿಸಿದಷ್ಟು ಆ ಗೋರಿಯ ಕಾರ್ಯಕ್ರಮ ಮಾಡಲು ಮಜಾ ಇರುತ್ತದೆ. ‘ಔರಂಗಜೇಬನ ಗೋರಿಯನ್ನು ಯಾವಾಗ ಕೆಡವಲಾಗುತ್ತದೆ?’ ಎಂದು ಪತ್ರಕರ್ತ ಮಿತ್ರರು ಕೇಳುತ್ತಾರೆ; ಆದರೆ ಆಹ್ವಾನ ನೀಡಲು, ಇದೇನು ಮಗುವಿನ ಹೆಸರಿಡುವ `ನಾಮಕರಣ’ ಶಾಸ್ತ್ರದ ಕಾರ್ಯಕ್ರಮವಲ್ಲ. ಮೊದಲು ಕೆಲಸ ಮಾಡುತ್ತೇವೆ, ನಂತರ ಹೇಳುತ್ತೇವೆ. ಛತ್ರಪತಿ ಶಿವಾಜಿ ಮಹಾರಾಜರ ಕೋಟೆಗಳ ಮೇಲಿನ ಅತಿಕ್ರಮಣವನ್ನು ನಾವು ತೆರವುಗೊಳಿಸಿದಾಗ, ಪತ್ರಕರ್ತರನ್ನು ಕ್ಯಾಮೆರಾಗಳೊಂದಿಗೆ ಬನ್ನಿ ಎಂದು ಹೇಳಿರಲಿಲ್ಲ. ಮೊದಲು ಅತಿಕ್ರಮಣವನ್ನು ತೆರವುಗೊಳಿಸಿ, ನಂತರ ಸುದ್ದಿ ನೀಡಿದೆವು. ಆದ್ದರಿಂದ ಈ ಕಾರ್ಯಕ್ರಮವೂ ನಿಗದಿಯಂತೆ ನಡೆಯುತ್ತದೆ.” ಎಂದು ಹೇಳಿದರು.