ಪ್ರಸ್ತುತ ನಡೆಯುತ್ತಿರುವ ಅಧಿಕ ಮಾಸದ ವೈಜ್ಞಾನಿಕ ಮಾಹಿತಿ : ಶುಭ ಫಲ ನೀಡುವ ‘ಅಧಿಕ ಮಾಸ’ !

ಈ ವರ್ಷ ಅಧಿಕ ಶ್ರಾವಣ ಮಾಸ ಇದೆ. ಇದನ್ನು ಮಲಮಾಸ ಅಥವಾ ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಈ ತಿಂಗಳಲ್ಲಿ ಯಾವ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ? ಮತ್ತು ಏನು ಮಾಡಬಾರದು ? ಈ ವಿಷಯದಲ್ಲಿ ಅಲ್ಪಸ್ವಲ್ಪ ಸತ್ಯವಿದ್ದರೂ ಶಾಸ್ತ್ರಾಧಾರವಿಲ್ಲದ ಅಯೋಗ್ಯ ಮಾಹಿತಿಯೇ ಹೆಚ್ಚು ಪ್ರಸಾರವಾಗುತ್ತಿರುತ್ತದೆ. ಇದರಿಂದ ಶ್ರದ್ಧಾವಂತ ಹಿಂದೂಗಳಲ್ಲಿ ಅನೇಕ ತಪ್ಪು ತಿಳುವಳಿಕೆಗಳುಂಟಾಗುತ್ತವೆ. ತಪ್ಪು ಸಮಯದಲ್ಲಿ ತಿಳಿದು ಅಥವಾ ತಿಳಿಯದೇ ಮಾಡುವ ಧರ್ಮ ಕಾರ್ಯಗಳು ನಮಗೆ ಶುಭ ಫಲ ನೀಡುವುದಿಲ್ಲ. ಧರ್ಮಕಾರ್ಯದ ಶುಭ ಫಲವನ್ನು ಪಡೆಯಲು, ಸರಿಯಾದ ಸಮಯದ ಮತ್ತು ಸುಸಂಗತ ಸಮನ್ವಯ ಮಾಡುವುದು ಮತ್ತು ಯೋಗ್ಯ ಸಮಯದಲ್ಲಿ ಯೋಗ್ಯವಾದ ಕಾರ್ಯವನ್ನು ಮಾಡುವುದು, ಋಷಿಗಳಿಗೆ ಅಪೇಕ್ಷಿತವಿದೆ. ಆದ್ದರಿಂದಲೇ ಯಾವುದೇ ಧರ್ಮದ ಪಂಚಾಂಗದಲ್ಲಿ ಕಂಡುಬರದಂತಹ ಅತ್ಯಂತ ಪರಿಪೂರ್ಣವಾದ ಕಾಲಗಣನೆಯು ಹಿಂದೂ ಧರ್ಮದಲ್ಲಿದೆ. ಇದಕ್ಕಾಗಿ ನಮ್ಮ ಋಷಿಮುನಿಗಳು ಎಷ್ಟು ಕಠೋರ ಉಪಾಸನೆ ಮತ್ತು ಸಂಶೋಧನೆ ಮಾಡಿರಬೇಕು, ಎಂಬುದನ್ನು ಊಹಿಸಲು ನಮ್ಮಿಂದ ಅಸಾಧ್ಯ!

(ಭಾಗ ೧)

೧. ಅಧಿಕ ಮಾಸ ಮತ್ತು ಕ್ಷಯಮಾಸ ಈ ಕುರಿತು….

ಚಂದ್ರಮಾಸ ಮತ್ತು ಸೌರಮಾಸ ಈ ಎರಡು ಮಾಸಗಳನ್ನು ಸಮನ್ವಯಗೊಳಿಸಲು ಸನಾತನ ವೈದಿಕ ಹಿಂದೂ ಧರ್ಮದಲ್ಲಿ ‘ಅಧಿಕ ಮಾಸ’ ಅಥವಾ ‘ಪುರುಷೋತ್ತಮ ಮಾಸ’ ಅಥವಾ ‘ಕ್ಷಯಮಾಸ’ಗಳ ಆಯೋಜನೆ ಮಾಡಲಾಗಿದೆ. ಅಧಿಕ ಮಾಸವು ಜೀವನದಲ್ಲಿ ಅನೇಕ ಬಾರಿ ಅನುಭವಿಸಲು ಸಿಗುತ್ತದೆ; ಆದರೆ ಕ್ಷಯಮಾಸವು ಅಪರೂಪಕ್ಕೆ ಅನುಭವಿಸಲು ಸಿಗುತ್ತದೆ. ಪ್ರತಿ ತಿಂಗಳು ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತಾನೆ. ಅದಕ್ಕೆ ‘ಸಂಕ್ರಾಂತಿ’ ಎಂದು ಕರೆಯಲಾಗಿದೆ. ಮಕರ ಮತ್ತು ಕರ್ಕಾಟಕ ಎಂಬ ಎರಡು ಪ್ರಮುಖ ಸಂಕ್ರಾಂತಿಗಳು ನಮಗೆ ತಿಳಿದಿವೆ; ಪ್ರತಿ ತಿಂಗಳಿನಲ್ಲಿ ಒಂದು ಸಂಕ್ರಾಂತಿ ಬರುತ್ತದೆ. ಯಾವ ಮಾಸದಲ್ಲಿ ಸೌರ ಸಂಕ್ರಾಂತಿ ಬರುವುದಿಲ್ಲವೋ, ಆ ಮಾಸವನ್ನು ‘ಅಧಿಕ ಮಾಸ’ ಎನ್ನುತ್ತಾರೆ. ಯಾವ ಮಾಸದಲ್ಲಿ ಸಂಕ್ರಾಂತಿಯು ಎರಡು ಬಾರಿ ಬರುತ್ತದೆಯೋ ಆ ಮಾಸವನ್ನು ‘ಕ್ಷಯಮಾಸ’ ಎನ್ನುತ್ತಾರೆ. ಶಾಸ್ತ್ರದ ಪ್ರಕಾರ ಇವೆರಡನ್ನೂ ‘ಅಧಿಕ ಮಾಸ’ ಎನ್ನುತ್ತಾರೆ.

ವೇದಮೂರ್ತಿ ಭೂಷಣ ದಿಗಂಬರ ಜೋಶಿ

೨. ಕ್ಷಯಮಾಸ ಮತ್ತು ಅಧಿಕ ಮಾಸಗಳು ಯಾವಾಗ ಬರುತ್ತವೆ ?

ಎರಡು ಮಾಸಗಳ ನಡುವಿನ ಅಂತರವು ಈ ೩೦ ಮಾಸಗಳು ಕಳೆದ ನಂತರ ೮ ಅಥವಾ ೯ ಮಾಸಗಳು ಮುಗಿಯುವುದರ ನಡುವೆ ಇರುತ್ತದೆ. ಕ್ಷಯಮಾಸವು ೧೪೦ ವರ್ಷಗಳ ನಂತರ ಅಥವಾ ೧೯ ವರ್ಷಕ್ಕೊಮ್ಮೆ ಬರುತ್ತದೆ. ಕ್ಷಯಮಾಸವು ಅಧಿಕ ಮಾಸದಂತೆ ಮೂರೂವರೆ ವರ್ಷಗಳಿಗೊಮ್ಮೆ ಬರುವುದಿಲ್ಲ. ಕಾರ್ತಿಕ, ಮಾರ್ಗಶಿರ, ಪುಷ್ಯ ಇವುಗಳಲ್ಲಿ ಒಂದು ಮಾಸವು ಕ್ಷಯಮಾಸವಾಗಿರುತ್ತದೆ, ಇತರ ಮಾಸಗಳು ಕ್ಷಯಮಾಸಗಳಲ್ಲ. ಕ್ಷಯಾಮಾಸದ ಮೊದಲು ಮತ್ತು ನಂತರ ಹೀಗೆ ಎರಡು ಅಧಿಕ ಮಾಸಗಳು ಬರುತ್ತವೆ. ಕ್ಷಯಾಮಾಸದ ಮೊದಲು ಬರುವ ಮಾಸವನ್ನು ‘ಸಂಸರ್ಷ’ ಎಂದೂ ಮತ್ತು ಕ್ಷಯಮಾಸವನ್ನು ‘ಅಂಹಸ್ಪತಿ’ ಎಂದೂ ಕರೆಯಲಾಗುತ್ತದೆ.

೩. ಶಾಸ್ತ್ರಾನುಸಾರ ಆಚರಿಸಿದರೆ ಶುಭ ಫಲ ನಿಶ್ಚಿತ !

ನಮ್ಮಲ್ಲಿ ಪ್ರತಿಯೊಂದು ವಿಷಯಕ್ಕೂ ವಿಶೇಷ ನಿಯಮಗಳನ್ನು ಆಯೋಜಿಸಲಾಗಿದೆ. ಸಾಮಾನ್ಯವಾಗಿ ಅನೇಕ ಜನರಿಗೆ ಈ ನಿಯಮಗಳು ತಿಳಿದಿರುವುದಿಲ್ಲ. ಈ ನಿಯಮಗಳನ್ನು ಬಳಸಿ ಸರಿಯಾಗಿ ಮಾಹಿತಿಯನ್ನು ನೀಡುವವರನ್ನು ನಾವು ನಮ್ಮ ಅಜ್ಞಾನದ ಕಾರಣದಿಂದಾಗಿ ಟೀಕಿಸುತ್ತೇವೆ. ಆದ್ದರಿಂದ ಶ್ರದ್ದಾವಂತ ಆಸ್ತಿಕ ಹಿಂದೂಗಳಿಗಾಗಿ ಈ ಪ್ರಪಂಚವಿದೆ. ಯಾರು ಏನು ಹೇಳಿದರು? ಮತ್ತು ನನಗೇನು ಅನಿಸುತ್ತದೆ? ಅದರ ಬದಲು ಶಾಸ್ತ್ರಗಳ ಪ್ರಕಾರ, ಅಧಿಕ ಮಾಸದಲ್ಲಿ ನಿರ್ದಿಷ್ಠವಾಗಿ ಯಾವ ಕ್ರಿಯೆಗಳನ್ನು ಮಾಡಬೇಕು? ಮತ್ತು ಏನು ಮಾಡಬಾರದು? ಇದನ್ನು ತಿಳಿದುಕೊಂಡು ಹಾಗೆ ನಡೆದುಕೊಂಡರೆ ಖಂಡಿತವಾಗಿಯೂ ಶುಭಫಲಗಳು ಸಿಗುವುದರಲ್ಲಿ ಸಂಶಯವಿಲ್ಲ.

– ವೇದಮೂರ್ತಿ ಭೂಷಣ ದಿಗಂಬರ ಜೋಶಿ, ವೆಂಗುರ್ಲಾ, ಜಿಲ್ಲೆ ಸಿಂಧುದುರ್ಗ(೧೩.೭.೨೦೨೩)