Center Bans JK Organization : ದೇಶದ ಏಕತೆಗೆ ಮತ್ತು ಶಾಂತಿಗೆ ಅಪಾಯಕಾರಿಯಾಗಿದ್ದ ಎರಡು ಸಂಘಟನೆಗಳ ಮೇಲೆ ನಿಷೇಧ!

ನವದೆಹಲಿ – ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿನ ‘ಅವಾಮಿ ಆಕ್ಷನ್ ಕಮಿಟಿ’ ಮತ್ತು ‘ಜಮ್ಮು ಮತ್ತು ಕಾಶ್ಮೀರ ಇತ್ತೆಹಾದುಲ್ ಮುಸ್ಲಿಮೀನ್’ ಎಂಬ ಎರಡು ಸಂಘಟನೆಗಳ ಮೇಲೆ 5 ವರ್ಷಗಳ ಕಾಲ ನಿಷೇಧ ಹೇರಿದೆ. ‘ಅವಾಮಿ ಆಕ್ಷನ್ ಕಮಿಟಿ’ಯ ನಾಯಕ ಮಿರ್ವೈಜ್ ಉಮರ್ ಫಾರೂಕ್ ಮತ್ತು ‘ಜಮ್ಮು ಮತ್ತು ಕಾಶ್ಮೀರ ಇತ್ತೆಹಾದುಲ್ ಮುಸ್ಲಿಮೀನ್’ನ ನಾಯಕ ಮಸ್ರೂರ್ ಅಬ್ಬಾಸ್ ಅನ್ಸಾರಿಯಾಗಿದ್ದಾರೆ.

1. ಗೃಹ ಸಚಿವಾಲಯದ ಪ್ರಕಾರ, ಈ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಸಂಚು ರೂಪಿಸುತ್ತಿದ್ದವು. ಅವುಗಳ ಮೇಲೆ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದು, ಭಾರತ ವಿರೋಧಿ ಘೋಷಣೆಗಳನ್ನು ಕೂಗುವುದು ಮತ್ತು ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು ಜನರನ್ನು ಪ್ರಚೋದಿಸುವ ಆರೋಪವಿದೆ.

2. ಗೃಹ ಸಚಿವ ಅಮಿತ್ ಶಾ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ಈ ಸಂಘಟನೆಗಳು ದೇಶದ ಏಕತೆ ಮತ್ತು ಶಾಂತಿಗೆ ಅಪಾಯಕಾರಿ ಎಂದು ಹೇಳಿದ್ದಾರೆ. ದೇಶವಿರೋಧಿ ಕೃತ್ಯ ಎಸಗುವವರಿಗೆ ಸರಕಾರ ಕಠಿಣ ಶಿಕ್ಷೆ ನೀಡುತ್ತದೆ ಎಂದಿದ್ದಾರೆ.