ಪ್ರಧಾನಿ ವಿಡಿಯೋ ತಿರುಚಿದ ಮತಾಂಧನ ವಿರುದ್ಧ ದೂರು ದಾಖಲು !

ಸಾಂದರ್ಭಿಕ ಚಿತ್ರ

ನವಿ ಮುಂಬಯಿ – ಪ್ರಧಾನಿ ನರೇಂದ್ರ ಮೋದಿ ಸಂದೇಶದ ಮೂಲಕ ತಪ್ಪು ಮತ್ತು ಎರಡು ಸಮುದಾಯಗಳ ನಡುವೆ ಬಿರುಕು ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಸುಳ್ಳು ವೀಡಿಯೊವನ್ನು ಮೊಬೈಲ್ ನ ‘ಸ್ಟೇಟಸ್’ನಲ್ಲಿ ಹಾಕಿದ ಮುಖ್ತಾರ್ ನೂರ್ಮೊಹಮ್ಮದ್ ಸಯ್ಯದ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆತ ಪನವೇಲನ ಘೋಟ್ ಕ್ಯಾಂಪ್ ತಳೋಜಾದಲ್ಲಿ ವಾಸಿಸುತ್ತಿದ್ದಾನೆ.

ಆತ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಪ್ರಧಾನ ಮಂತ್ರಿಯ ಬಾಯಿಯಿಂದ ಧಾರ್ಮಿಕ ಹೇಳಿಕೆಗಳನ್ನು ತಿರುಚಿದ. ಈ ವಿಷಯ ತಿಳಿದ ನಂತರ ಪೊಲೀಸರು ಆತನನ್ನು ವಿಚಾರಣೆಗೆ ಕರೆದರು; ಆದರೆ ವಿಚಾರಣೆಗೆ ಮುನ್ನವೇ ಆತ ಆ ವೀಡಿಯೊವನ್ನು ‘ಸ್ಟೇಟಸ್’ನಿಂದ ತೆಗೆದು ಅದನ್ನು ಡಿಲೀಟ್ ಮಾಡಿದ್ದ. (ಹೀಗೆ ಮಾಡಿದ್ದರಿಂದ ಪೊಲೀಸರು ಕ್ರಮ ಕೈಗೊಳ್ಳುವುದನ್ನು ತಪ್ಪಿಸಬಾರದು. ಪ್ರಧಾನ ಮಂತ್ರಿಯ ಬಗ್ಗೆ ಇಂತಹ ಕೃತ್ಯ ಎಸಗಿದ ಮತಾಂಧನಿಗೆ ಕಠಿಣ ಶಿಕ್ಷೆಯಾಗಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಕಾನೂನು ಸುವ್ಯವಸ್ಥೆಯ ಭಯವಿಲ್ಲದ ಕಾರಣವೇ ಮತಾಂಧರು ಅತಿ ಮುಖ್ಯ ವ್ಯಕ್ತಿಗಳ ಬಗ್ಗೆ ಇಂತಹ ಕೃತ್ಯಗಳನ್ನು ಎಸಗುವ ಧೈರ್ಯ ಮಾಡುತ್ತಾರೆ ಎಂಬುದನ್ನು ಗಮನಿಸಬೇಕು!