|
ರಾಜಾಪುರ (ರತ್ನಗಿರಿ ಜಿಲ್ಲೆ) – ಹೋಳಿ ಮರವನ್ನು ಕೊಂಡೊಯ್ಯುವ ಸಾಂಪ್ರದಾಯಿಕ ಮೆರವಣಿಗೆಯ ಸಮಯದಲ್ಲಿ, ಇಲ್ಲಿನ ಜವಾಹರ ಚೌಕ್‌ನಲ್ಲಿರುವ ಮಸೀದಿಯ ಬಳಿ ಹಿಂದೂಗಳ ಮತ್ತು ಮುಸ್ಲಿಮರ ನಡುವೆ ಘರ್ಷಣೆ ಸಂಭವಿಸಿದೆ. ಮಸೀದಿಯ ಮೆಟ್ಟಿಲುಗಳಿಗೆ ಹೋಳಿ ಮರವನ್ನು ತಾಗಿಸುವ ಹಲವು ವರ್ಷಗಳ ಹಳೆಯ ಸಂಪ್ರದಾಯವಿದೆ, ಆದರೆ ಈ ಬಾರಿ ಮಸೀದಿಯ ಗೇಟ್ ಅನ್ನು ಮುಚ್ಚಲಾಗಿತ್ತು. ಈ ಸಮಯದಲ್ಲಿ, ಅಲ್ಲಿ ಜಮಾಯಿಸಿದ ಹಿಂದೂಗಳು ಮಸೀದಿಯ ಆವರಣಕ್ಕೆ ಹೋಗಲು ಪ್ರಯತ್ನಿಸಿದಾಗ ಅವರನ್ನು ತಳ್ಳಲಾಯಿತು. ಇದರಿಂದ ಕೋಪಗೊಂಡ ಹಿಂದೂಗಳು ಹೋಳಿ ಮರವನ್ನು ಗೇಟ್ ಮೂಲಕ ಒಳಗೆ ತಳ್ಳಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಎರಡೂ ಗುಂಪುಗಳು ಘೋಷಣೆಗಳನ್ನು ಕೂಗಿದ್ದರಿಂದ ಉದ್ವಿಗ್ನತೆ ಹೆಚ್ಚಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ ಘೋಷಣೆ ಮತ್ತು ಕಾನೂನುಬಾಹಿರ ಗುಂಪುಗೂಡುವಿಕೆಗಾಗಿ 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ವೀಡಿಯೊವನ್ನು ‘ಬಿಬಿಸಿ’, ‘ದಿ ಕ್ವಿಂಟ್’, ‘ಆಲ್ಟ್ ನ್ಯೂಸ್’ ಮುಂತಾದ ಹಿಂದೂ ವಿರೋಧಿ ಮಾಧ್ಯಮಗಳು ಹಂಚಿಕೊಂಡಿವೆ, ಅವರು ಸಂಪ್ರದಾಯದ ವಿಷಯವನ್ನು ಅನುಕೂಲಕ್ಕಾಗಿ ಕೇವಲ ಹಿಂದೂಗಳನ್ನು ಗುರಿಯಾಗಿಸಿದ್ದಾರೆ. ಪೊಲೀಸರು ಎಲ್ಲರಿಗೂ ಶಾಂತಿಯನ್ನು ಕಾಪಾಡಲು ಮನವಿ ಮಾಡಿದ್ದಾರೆ ಮತ್ತು ‘ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ’ ಭರವಸೆ ನೀಡಿದ್ದಾರೆ. ಅಲ್ಲದೆ, ತಪ್ಪು ಮಾಹಿತಿಯುಳ್ಳ ವೀಡಿಯೊವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ, ಆ ವೀಡಿಯೊ ‘ಎಕ್ಸ್’ ನಲ್ಲಿ ಹರಡುತ್ತಿದೆ. ಪ್ರಸ್ತುತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಮತ್ತು ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಘಟನೆಯ ವಿವರ:
ಮಾರ್ಚ್ 12 ರ ಸಂಜೆ 7:30 ಕ್ಕೆ ಗ್ರಾಮದ ಜವಾಹರ್ ಚೌಕ್‌ನಲ್ಲಿ ಹೋಳಿ ಹಬ್ಬದ ಮೆರವಣಿಗೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಈ ಮೆರವಣಿಗೆಯನ್ನು ಪ್ರತಿ 5 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಹೋಳಿ ಮರವನ್ನು ಹೊತ್ತೊಯ್ಯುವ ಈ ಮೆರವಣಿಗೆ ಧೋಪೇಶ್ವರ ದೇವಸ್ಥಾನದಲ್ಲಿ ಕೊನೆಗೊಳ್ಳುತ್ತದೆ. ಸಂಪ್ರದಾಯದ ಪ್ರಕಾರ, ದಾರಿಯಲ್ಲಿರುವ ಮಸೀದಿಯ ಮೆಟ್ಟಿಲುಗಳ ಮೇಲೆ ಕೆಲವು ನಿಮಿಷಗಳ ಕಾಲ ಈ ಹೋಳಿ ಮರವನ್ನು ಇರಿಸಲಾಗುತ್ತದೆ. ದೇವತೆ ನೀನಾದೇವಿಯ ಗೌರವಾರ್ಥವಾಗಿ ಇದನ್ನು ಮಾಡಲಾಗುತ್ತದೆ. ಈ ಮೆರವಣಿಗೆ ಯಾವಾಗಲೂ ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ನಡೆಯುತ್ತದೆ. ಆದರೆ ಈ ವರ್ಷ ಈ ಮಸೀದಿಯ ಪ್ರವೇಶದ್ವಾರ ಮುಚ್ಚಿತ್ತು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಈ ಮಸೀದಿಯ ಪ್ರವೇಶದ್ವಾರದ ಮೇಲೆ ಆಕ್ರಮಣ ನಡೆದಿದೆ ಎನ್ನಲಾದ ವೀಡಿಯೊ ಎಲ್ಲೆಡೆ ಹರಡಿದ ನಂತರ ಇಲ್ಲಿ ಅಶಾಂತಿ ಉಂಟಾಗಿದೆ.
ಹಿಂದೂಗಳು ಬಲವಂತವಾಗಿ ಮಸೀದಿಗೆ ಪ್ರವೇಶಿಸಲು ಪ್ರಯತ್ನಿಸಿದ ವರದಿ; ಪೊಲೀಸರು ನಿರಾಕರಣೆ!ರತ್ನಗಿರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ ಕುಲಕರ್ಣಿ ಅವರು, ಕೊಂಕಣದ ಸಂಪ್ರದಾಯಗಳು ವಿಭಿನ್ನವಾಗಿವೆ. ಸಂಪ್ರದಾಯದ ಪ್ರಕಾರ, ‘ಹೋಳಿ ಮರದ ಮೆರವಣಿಗೆ’ಯನ್ನು ಮಸೀದಿಯ ಬಾಗಿಲಿಗೆ ತರಲಾಗುತ್ತದೆ ಮತ್ತು ಹೋಳಿ ಮರದ ಭಾಗವನ್ನು ಮಸೀದಿಯ ಮೆಟ್ಟಿಲುಗಳಿಗೆ ತಾಗಿಸಲಾಗುತ್ತದೆ. ಪ್ರತಿ ವರ್ಷ ಮುಸ್ಲಿಮರು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಈ ಮೆರವಣಿಗೆಯನ್ನು ಸ್ವಾಗತಿಸಲು ತೆಂಗಿನಕಾಯಿ ನೀಡುವ ಗೌರವವನ್ನು ಸಾಂಪ್ರದಾಯಿಕವಾಗಿ ಮುಸ್ಲಿಮರಿಗೆ ನೀಡಲಾಗುತ್ತದೆ; ಆದರೆ, ಈ ಮೆರವಣಿಗೆಯ ಸಂದರ್ಭದಲ್ಲಿ ಘೋಷಣೆಗಳು ಮತ್ತು ಆಕ್ರಮಣಕಾರಿ ವರ್ತನೆಗಳು ನಡೆದಿವೆ. ಪೊಲೀಸರು ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ಸೆಕ್ಷನ್ 135 ರ ಅಡಿಯಲ್ಲಿ ಕಾನೂನುಬಾಹಿರ ಗುಂಪುಗೂಡುವಿಕೆಗಾಗಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಶಾಂತವಾಗಿದೆ ಮತ್ತು ಕಾನೂನು ಸುವ್ಯವಸ್ಥೆಯ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ. |
ದೇಶದ ವಿರುದ್ಧ ಯಾರಾದರೂ ಕ್ರಮ ಕೈಗೊಂಡರೆ, ಅವರಿಗೆ ಶಿಕ್ಷೆಯಾಗಬೇಕು! – ಉಸ್ತುವಾರಿ ಸಚಿವ ಉದಯ ಸಾಮಂತ
ಧರ್ಮಗಳಲ್ಲಿ ಬಿರುಕು ನಿರ್ಮಾಣ ಮಾಡುವ ಪ್ರಯತ್ನ ಮಾಡಿದರೆ, ಈ ತೊಂದರೆ ಎಲ್ಲರಿಗೂ ಆಗುತ್ತದೆ ಎಂದು ನನಗೆ ಅನಿಸುತ್ತದೆ. ಯಾರಾದರೂ ತಪ್ಪುತ್ತಿದ್ದರೆ, ಅವರ ಮೇಲೆ ನೂರಕ್ಕೆ ನೂರರಷ್ಟು ಕ್ರಮ ಕೈಗೊಳ್ಳಲಾಗುವುದು. ಯಾರು ಈ ದೇಶವನ್ನು ಪ್ರೀತಿಸುತ್ತಾರೆ ನಾಗರೀಕರೆಂದು ವಾಸಿಸುತ್ತಾರೆ, ಅವರಿಗೆ ರಕ್ಷಣೆ ದೊರೆಯಲೇಬೇಕು; ಆದರೆ ದೇಶದಲ್ಲಿ ವಾಸಿಸಿ ದೇಶದ ವಿರುದ್ಧ ಯಾರಾದರು ಚಟುವಟಿಕೆ ಮಾಡುತ್ತಿದ್ದರೆ ಅವರಿಗೆ ಪಾಠ ಕಲಿಸಲೇಬೇಕು, ಎಂದು ಹೇಳಿದರು.
ರಾಜಾಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಅನಗತ್ಯವಾಗಿ ವಾತಾವರಣವನ್ನು ಕೆರಳಿಸಬೇಡಿ! – ಶಾಸಕ ನಿಲೇಶ್ ರಾಣೆ
ರತ್ನಗಿರಿ – ಕೊಂಕಣದಲ್ಲಿ ಎಲ್ಲಾ ಹಬ್ಬ ಉತ್ಸವಗಳು ಶಾಂತಿಯಿಂದ ಆಚರಿಸಲಾಗುತ್ತವೆ, ರಾಜಾಪುರದಲ್ಲಿನ ಸ್ಥಿತಿ ನಿಯಂತ್ರಣಕ್ಕೆ ಬಂದಿರುವುದು ನಾವು ಇರುವವರೆಗೆ ಕೊಂಕಣ ಹೊತ್ತಿ ಉರಿಯಲು ಬಿಡುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲವು ಸ್ವಯಂ ಘೋಷಿತ ‘ಹ್ಯಾಂಡಲ್ಸ್’ ಈ ವಾತಾವರಣ ಹದಗೆಡಿಸಬಾರದು, ಎಂದು ಶಾಸಕ ರಾಣೆ ಇವರು ಕರೆ ನೀಡಿದರು.
ಶಾಸಕ ರಾಣೆ ಮಾತು ಮುಂದುವರೆಸುತ್ತಾ, “ಧೋಪೇಶ್ವರ ಹೋಳಿ ಸಂದರ್ಭದಲ್ಲಿ ನಡೆದ ಘಟನೆಯ ಕೆಲವು ಭಾಗಗಳನ್ನು ಮಾತ್ರ ತೋರಿಸಲಾಗುತ್ತಿದೆ. ಕೊಂಕಣದಲ್ಲಿ ಇಷ್ಟು ವರ್ಷ ಈ ಹಬ್ಬದ ಸಮಯದಲ್ಲಿ ಏನೂ ಸಂಭವಿಸಿಲ್ಲ ಮತ್ತು ಮುಂದೆಯೂ ಸಂಭವಿಸುವುದಿಲ್ಲ” ಎಂದು ಹೇಳಿದರು.
ಸಂಪಾದಕೀಯ ನಿಲುವು‘ಗಂಗಾ ಜಮುನಾ ತಹಜೀಬ್’ ಎಂದು ಕೂಗುವವರು ಈಗ ಮುಸ್ಲಿಮರು ವರ್ಷಗಳಿಂದ ನಡೆದುಕೊಂಡು ಬಂದಿರುವ ಹೋಳಿಯ ‘ಸೌಹಾರ್ದಯುತ’ ಸಂಪ್ರದಾಯಕ್ಕೆ ಅಡಚಣೆ ಮಾಡಿರುವ ಬಗ್ಗೆ ಒಂದು ಮಾತನ್ನೂ ಆಡುತ್ತಿಲ್ಲ. ಮತ್ತೊಂದೆಡೆ, ಸಂಪ್ರದಾಯವನ್ನು ಪಾಲಿಸಲು ಪ್ರಯತ್ನಿಸುತ್ತಿರುವ ಹಿಂದೂಗಳಿಗೆ ತೊಂದರೆ ಕೊಡಲಾಗುತ್ತಿದೆ. ಇದು ಹಿಂದೂ ವಿರೋಧಿಗಳ ಪಿತೂರಿ, ಇದನ್ನು ಮರೆಯಬೇಡಿ! |