ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಈಶ್ವರಪ್ರಾಪ್ತಿಗಾಗಿ ತನು-ಮನ-ಧನಗಳ ತ್ಯಾಗ ಮಾಡಬೇಕು. ಅದುದರಿಂದ ಆಯುಷ್ಯವನ್ನು ಹಣ ಸಂಪಾದನೆಯಲ್ಲಿ ಪುಕ್ಕಟೆ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು-ಮನಗಳ ತ್ಯಾಗ ಮಾಡಿದರೆ ಈಶ್ವರಪ್ರಾಪ್ತಿಯು ಬೇಗನೆ ಆಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಕೀರ್ತನೆ ಹೇಳುವವರು ಹಾಗೂ ಪ್ರವಚನ ನೀಡುವವರು ತಾತ್ತ್ವಿಕ ಮಾಹಿತಿಯನ್ನು ಹೇಳುತ್ತಾರೆ. ನಿಜವಾದ ಗುರುಗಳು ಪ್ರಾಯೋಗಿಕ ಕೃತಿಯನ್ನು ಮಾಡಿಸಿಕೊಂಡು ಶಿಷ್ಯನ ಪ್ರಗತಿಯನ್ನು ಮಾಡುತ್ತಾರೆ.

ಮನಸ್ಸಿನ ಮಹತ್ವ

ಹಿಂದಿನ ಯುಗಗಳಲ್ಲಿ ಸ್ವಭಾವದೋಷ ಕಡಿಮೆ ಇದ್ದಿದ್ದರಿಂದ ಯಾವುದೇ ಸಾಧನಾಮಾರ್ಗದಲ್ಲಿ ಸಾಧನೆಯನ್ನು ಮಾಡಿ ಸಾಧಕರು ಮುಂದೆ ಹೋಗುತ್ತಿದ್ದರು. ಆದರೆ ಕಲಿಯುಗದಲ್ಲಿ ಅನೇಕ ಸ್ವಭಾವದೋಷಗಳು ಇರುವುದರಿಂದ ಅದನ್ನು ಮೊದಲು ದೂರ ಮಾಡಬೇಕಾಗುತ್ತದೆ, ಅನಂತರವೇ ಸಾಧನೆ ಮಾಡಬಹುದು.

ರಾಮನಾಥಿಯ (ಗೋವಾ) ಸನಾತನ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮಂಗಲಹಸ್ತದಿಂದ ಗುರುಪೂಜೆ !

ಆಪತ್ಕಾಲದಲ್ಲಿ ಮೊದಲಿನಂತೆ ಸಾಮೂಹಿಕ ಗುರುಪೂರ್ಣಿಮೆ ಉತ್ಸವವನ್ನು ಆಚರಿಸಲು ಸಾಧ್ಯವಾಗದಿದ್ದರೂ, ಶ್ರೀಗುರುಗಳ ಅನನ್ಯ ಕೃಪೆಯ ಬಗ್ಗೆ ಸಾಧಕರು ಈ ಮಂಗಲಪ್ರಸಂಗದಲ್ಲಿ ಮನಸ್ಸಿನಲ್ಲಿ ಭಾವಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಸಪ್ತರ್ಷಿಯವರು ೨೦೨೧ ರ ಗುರುಪೂರ್ಣಿಮೆಯ ಗುರುಪೂಜೆಗಾಗಿ ಇಡಲು ಹೇಳಿದ ಚಿತ್ರದ ವೈಶಿಷ್ಟ್ಯಗಳು

ಪರಾತ್ಪರ ಗುರು ಡಾ. ಆಠವಲೆ ಇವರ ಕಾರ್ಯವು ಅಧಿಕಾಧಿಕ ನಿರ್ಗುಣ ಸ್ತರದಲ್ಲಿ ನಡೆಯುತ್ತಿದೆ, ಹಾಗಾಗಿ ಗುರುದೇವರ ಚಿತ್ರವನ್ನು ಗೋಲಾಕಾರದಲ್ಲಿ ತೆಗೆದುಕೊಳ್ಳಬೇಕು. ಶ್ರೀರಾಮನು ಸೂರ್ಯವಂಶದಲ್ಲಿ ಜನಿಸಿದ್ದರು. ಪರಾತ್ಪರ ಗುರು ಡಾ. ಆಠವಲೆ ಇವರು ಸಹ ಸೂರ್ಯದಶೆಯಲ್ಲಿ ಜನಿಸಿರುವುದರಿಂದ ಅವರ ಸುತ್ತಲೂ ಸೂರ್ಯನ ಪ್ರಭಾವಳಿ ಇರಬೇಕು

ಸೂಕ್ಷ್ಮದ ಪ್ರಯೋಗ !

‘ಸಪ್ತರ್ಷಿಗಳ ಆಜ್ಞೆಯಿಂದ ಪ್ರಭು ಶ್ರೀರಾಮ, ಭಗವಾನ ಶ್ರೀಕೃಷ್ಣ ಪರಾತ್ಪರ ಗುರು ಡಾ. ಆಠವಲೆ ಹಾಗೂ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತೆಗೆದ ಛಾಯಾಚಿತ್ರದ (ಪಕ್ಕದಲ್ಲಿ ನೀಡಿದ ಛಾಯಾಚಿತ್ರದ) ಮೇಲ್ಭಾಗವನ್ನು, ಮಧ್ಯದ ಭಾಗವನ್ನು ಮತ್ತು ಕೆಳಭಾಗವನ್ನು ಸ್ಪರ್ಶಿಸಿ ಏನು ಅರಿವಾಗುತ್ತದೆ, ಎಂಬುದರ ಅನುಭವ ಪಡೆಯಿರಿ.

ನಾವು ‘ಪರಾತ್ಪರ ಗುರು ಡಾ. ಆಠವಲೆಯವರಿಗೆ ನಮ್ಮ ಕೊನೆಯ ಶ್ವಾಸವಿರುವ ವರೆಗೆ ಕೃತಜ್ಞರಾಗಿರಬೇಕು ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ಸಂತ ಭಕ್ತರಾಜ ಮಹಾರಾಜರ ದೇಹತ್ಯಾಗದ ಬಳಿಕ ಪರಾತ್ಪರ ಗುರು ಡಾ. ಆಠವಲೆಯವರು ಗುರುತತ್ತ್ವವನ್ನು ಅರಿತುಕೊಂಡು (ಗುರುತತ್ತ್ವದ ಅನುಸಂಧಾನದಲ್ಲಿದ್ದು) ವ್ಯಾಪಕ ಕಾರ್ಯವನ್ನು ಮಾಡಿದರು. ಪ್ರತ್ಯಕ್ಷದಲ್ಲಿ ಅವರಿಗೆ ಅವರ ಗುರುಗಳ ಒಡನಾಟ ಅತ್ಯಲ್ಪಕಾಲ ಲಭಿಸಿತು.

‘ಗುರುಕೃಪಾಯೋಗ’ ಎಂಬ ಸಹಜಸಾಧ್ಯ ಸಾಧನಾಮಾರ್ಗದ ನಿರ್ಮಿತಿಯನ್ನು ಮಾಡಿ ಮಾನವರಿಗೆ ಆತ್ಮೋದ್ಧಾರದ ರಾಜಮಾರ್ಗವನ್ನು ತೋರಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆಗಳು !

ಗುರುಕೃಪಾಯೋಗಾನುಸಾರ ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸಾಧನೆಯನ್ನು ಮಾಡುವ ಸಾಧಕರ ಮೇಲೆ ಕೆಟ್ಟ ಶಕ್ತಿಗಳು ಮೇಲಿಂದ ಮೇಲೆ ಆಕ್ರಮಣಗಳನ್ನು ಮಾಡುತ್ತಿರುತ್ತವೆ. ಈ ಆಕ್ರಮಣಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಮೇಲೆ ತೆಗೆದುಕೊಂಡಿದ್ದಾರೆ.

‘ಪರಾತ್ಪರ ಗುರು ಡಾ. ಆಠವಲೆಯವರ ಕೆಳಗಿನ ಛಾಯಾಚಿತ್ರವನ್ನು ನೋಡಿ ಅವರ ವಯಸ್ಸು ಎಷ್ಟಿರಬಹುದು ?’, ಎಂಬುದನ್ನು ತಿಳಿಸಿ !

ಪರಾತ್ಪರ ಗುರು ಡಾ. ಆಠವಲೆಯವರ ಚರ್ಮ, ಕಣ್ಣುಗಳು ಮತ್ತು ಮುಖದ ಮೇಲಿನ ಭಾವವನ್ನು ನೋಡಿರಿ. ಇವುಗಳಿಂದ ‘ಅವರ ವಯಸ್ಸು ಅಥವಾ ಇತರ ಯಾವುದೇ ವಿಷಯಗಳ ಕುರಿತು ಏನಾದರೂ ವೈಶಿಷ್ಟ್ಯಪೂರ್ಣ ಅಂಶಗಳು ಅರಿವಾಗುವುದೇ ?’, ಎಂಬುದರ ಅಧ್ಯಯನ ಮಾಡಿರಿ.

ಸಾಧಕರನ್ನು ತಮ್ಮಲ್ಲಿ ಸಿಲುಕಲು ಬಿಡದೇ ತತ್ತ್ವನಿಷ್ಠರನ್ನಾಗಿಸುವ ವಿಶ್ವವ್ಯಾಪಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಶಿಷ್ಯನೆಂದು ಸಾಧಕರು ಮಾಡಬೇಕಾದ ಕರ್ತವ್ಯಗಳು !

ಸಂಪ್ರದಾಯದಲ್ಲಿ ಹೋಗುವುದು ಮತ್ತು ಅಲ್ಲಿಗೆ ಹೋಗಿ ಏನಾದರೂ ಸಾಧನೆಯನ್ನು ಮಾಡುವುದು, ಇದು ಸಹ ಜನರ ದೃಷ್ಟಿಯಿಂದ ಒಂದು ಆಡಂಬರವೇ ಆಗಿಬಿಟ್ಟಿದೆ. ಆದುದರಿಂದ ಅನೇಕ ಮಠಗಳು ಮತ್ತು ಆಶ್ರಮಗಳಲ್ಲಿನ ಚೈತನ್ಯವು ನಾಶವಾಗಿದೆ. ನಮಗೆ ಇದೆಲ್ಲವನ್ನು ಬದಲಾಯಿಸಬೇಕಾಗಿದೆ.