ಮುಂಬರುವ ೩ ವರ್ಷಗಳಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ !

ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಪ್ರತಿಪಾದನೆ !

  • ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಬೇಕು !
  • ೨೦೨೩ ರಲ್ಲಿ ‘ಹಿಂದೂ ರಾಷ್ಟ್ರ’ ಬರಲಿದೆ ಎಂದು ಈಗ ಶಂಕರಾಚಾರ್ಯರೂ ಹೇಳುತ್ತಿದ್ದಾರೆ. ಈಗ ಕೇಂದ್ರ ಸರಕಾರವು ಈ ದಿಶೆಯಲ್ಲಿ ಪ್ರಯತ್ನಿಸಿ ಸಂವಿಧಾನದಲ್ಲಿರುವ ’ಜಾತ್ಯತೀತ’ (ಸೆಕ್ಯುಲರ್) ಎಂಬ ಪದವನ್ನು ತೆಗೆದು ಅಲ್ಲಿ ‘ಹಿಂದೂ ರಾಷ್ಟ್ರ’ವೆಂದು ಬದಲಾಯಿಸಿ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ಆಗ್ರಾ (ಉತ್ತರಪ್ರದೇಶ) – ವರ್ತಮಾನದ ರಾಜಕೀಯ ವಿದ್ಯಮಾನವು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಪಕ್ಷದಲ್ಲಿದೆ. ರಾಹುಲ ಗಾಂಧಿಯವರು ಸಹ ಈಗ ತಮ್ಮನ್ನು ‘ಹಿಂದೂ’ ಎಂದು ಹೇಳತೊಡಗಿದ್ದಾರೆ. ಅವರು ತಮ್ಮನ್ನು ’ಜನಿವಾರ ಧರಿಸಿದ ಬ್ರಾಹ್ಮಣ’ನಿದ್ದೇನೆ ಎಂದು ಘೋಷಿಸಿದ್ದಾರೆ. ಇದರಿಂದಾಗಿ ಮುಂಬರುವ ೩ ವರ್ಷಗಳಲ್ಲಿ ಭಾರತವು ಹಿಂದೂ ರಾಷ್ಟ್ರವಾಗುವುದು ಎಂದು ಓಡಿಶಾದ ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಆಗ್ರಾ ಜಿಲ್ಲೆಯ ನಗಲಾ ಬಿಂದು ಎಂಬ ಊರಿಗೆ ಬಂದಾಗ ಹೇಳಿದ್ದಾರೆ. ಅವರು ಪ್ರಸ್ತುತ ಆಗ್ರಾದ ಪ್ರವಾಸದಲ್ಲಿದ್ದಾರೆ. ಅಲ್ಲಿನ ಭಾಜಪದ ಮುಖಂಡ ಹರೇಂದ್ರ ಸಿಂಹ ರವರ ಮನೆಯಲ್ಲಿ ಭಾವಿಕರೊಂದಿಗೆ ಮಾತನಾಡುವಾಗ ಅವರು ಈ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ‘ಹಿಂದೂಗಳು ಸನಾತನ ಪರಂಪರೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಕಾರ್ಯ ಮಾಡಬೇಕು’ ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.

ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಮಂಡಿಸಿದ ಅಂಶಗಳು

೧. ಇಂದು ವಿಜ್ಞಾನದ ಯುಗವಿದೆ. ವಿಜ್ಞಾನವೂ ಸನಾತನ ಧರ್ಮದ ಕೊಡುಗೆಯಾಗಿದೆ. ಆದುದರಿಂದ ವಿಜ್ಞಾನವೂ ವೇದ, ಪುರಾಣ ಇತ್ಯಾದಿಗಳ ಮಹತ್ವವನ್ನು ಅಲ್ಲಗಳೆಯಲಾರದು.

೨. ಭಾರತದಲ್ಲಿ ವಾಸಿಸುವ ಎಲ್ಲ ನಾಗರಿಕರ ಪೂರ್ವಜರು ಹಿಂದೂಗಳಾಗಿದ್ದರು. ಅವರ ಉದರ ನಿರ್ವಹಣೆಯನ್ನು ಸನಾತನ ಧರ್ಮವು ಮಾಡಿದೆ. ಮತಾಂತರಗೊಂಡವರಿಗೆ ಅವರ ಭೂತಕಾಲವನ್ನು ನೆನಪಿಸಿಕೊಟ್ಟು ಅವರನ್ನು ಪುನಃ ಹಿಂದೂ ಧರ್ಮದಲ್ಲಿ ಸೇರಿಸಬೇಕಿದೆ.

೩. ದೇಶದಲ್ಲಿ ಶೇ. ೪೦ ರಷ್ಟು ಜನರು ಹಿಂದಿ ಭಾಷೆ ಮಾತನಾಡುತ್ತಾರೆ. ಹಿಂದಿಯಲ್ಲಿಯೇ ಸಂಸ್ಕೃತವೂ ಸೇರಿದೆ. ವೇದ ಮತ್ತು ಪುರಾಣಗಳ ಹಿಂದಿ ಭಾಷೆಯ ಆವೃತ್ತಿಗಳು ಸನಾತನ ಧರ್ಮದ ಸಿದ್ಧಾಂತಗಳನ್ನು ಯೋಗ್ಯರೀತಿಯಲ್ಲಿ ಅನುವಾದ ಮಾಡುತ್ತವೆ. ಆದುದರಿಂದ ಹಿಂದಿ ಭಾಷೆಯ ಪ್ರಚಾರ ಮತ್ತು ಪ್ರಸಾರವಾಗುವುದೂ ಆವಶ್ಯಕವಾಗಿದೆ.
ಪರಾತ್ಪರ ಗುರು ಡಾ. ಆಠವಲೆಯವರ ದಾರ್ಶನಿಕತೆ !
ಪರಾತ್ಪರ ಗುರು ಡಾ. ಆಠವಲೆಯವರು ’೨೦೨೩ ನೇ ಇಸವಿಯಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು’, ಎಂದು ೨೫ ವರ್ಷಗಳ ಹಿಂದೆಯೇ ಹೇಳಿದ್ದರು. ಅದನ್ನೇ ಈಗ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಹೇಳುತ್ತಿದ್ದಾರೆ. ಇದರಿಂದ ಪರಾತ್ಪರ ಗುರು ಡಾ. ಆಠವಲೆಯವರ ದಾರ್ಶನಿಕತೆಯು ಗಮನಕ್ಕೆ ಬರುತ್ತದೆ. ಮುಂಬರುವ ಕಾಲದಲ್ಲಿ ಎಲ್ಲ ಸಂತರು ಮತ್ತು ಶಂಕರಾಚಾರ್ಯರು ಹೀಗೆ ಹೇಳಲು ಆರಂಭಿಸಿದರೆ ಮತ್ತು ಇದಕ್ಕಾಗಿ ಸಂಘಟಿತವಾಗಿ ಪ್ರಯತ್ನಿಸಿದರೆ ಆಶ್ಚರ್ಯವೇನಿಲ್ಲ.