ತನ್ನ ಸಮಯವನ್ನು ವ್ಯರ್ಥ ಮಾಡುವುದೆಂದರೆ ದೇವರ ಸಮಯವನ್ನೇ ವ್ಯರ್ಥ ಮಾಡಿದಂತೆ !

ನಾವು ಯಾವಾಗ ಸಾಧನೆ ಮಾಡುತ್ತೇವೆಯೋ, ಆಗ ನಾವು ನಮ್ಮನ್ನು ಮರೆತು ಗುರುಚರಣಗಳಲ್ಲಿ ಅಥವಾ ಭಗವಂತನ ಚರಣಗಳಲ್ಲಿ ಸಮರ್ಪಿತವಾಗಲು ಪ್ರಯತ್ನಿಸುತ್ತೇವೆ. ಹೀಗಿರುವಾಗ ನಮಗೆ ಸ್ವತಃದ ಸಮಯವೂ ಎಲ್ಲಿ ಸ್ವಂತದ್ದಾಗಿರುತ್ತದೆ ?

ಸಂತರು ಅಥವಾ ಜವಾಬ್ದಾರ ಸಾಧಕರು ತಪ್ಪುಗಳು ಹೇಳುವ ಹಿಂದಿನ ದೃಷ್ಟಿಕೋನ ತಿಳಿದುಕೊಳ್ಳಿ !

ಸಂತರು ಅಥವಾ ಜವಾಬ್ದಾರ ಸಾಧಕರು ತಪ್ಪುಗಳು ಹೇಳಿದ ನಂತರ ಅಥವಾ ಅವರ ಸೇವೆಯ ವರದಿ ತೆಗೆದುಕೊಂಡರೆ ಕೆಲವು ಸಾಧಕರಿಗೆ ಅಪಮಾನವಾದಂತಾಗಿ ಬೇಸರ ಆಗುತ್ತದೆ. ಸೇವೆಯಲ್ಲಿ ತಪ್ಪುಗಳು ಆಗಿಯೇ ಆಗುತ್ತವೆ.

ಆರೋಗ್ಯವನ್ನು ನಿರ್ಲಕ್ಷಿಸಬೇಡಿ; ಆದರೆ ಆರೋಗ್ಯದ ಬಗ್ಗೆ ಚಿಂತೆಯನ್ನೂ ಮಾಡಬೇಡಿ !

ಶಾರೀರಿಕ ಅಥವಾ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವಾಗ ಮನಸ್ಸಿನಲ್ಲಿ ಕಿರಿಕಿರಿಯಾಗುತ್ತಿದ್ದರೆ, ಅಸ್ವಸ್ಥತೆ ಹೆಚ್ಚುತ್ತಿದ್ದರೆ ಅಥವಾ ನಕಾರಾತ್ಮಕತೆ; ನಿರಾಶೆ ಉಂಟಾಗುತ್ತಿದ್ದರೆ, ಅದಕ್ಕಾಗಿ ಮನಸ್ಸಿಗೆ  ಸ್ವಯಂಸೂಚನೆ ನೀಡಬೇಕು ಮತ್ತು ಅವಶ್ಯಕತೆಯನುಸಾರ ಮನೋವೈದ್ಯರ ಮಾರ್ಗದರ್ಶನವನ್ನೂ ಪಡೆದುಕೊಳ್ಳಬೇಕು.’

ನಮ್ಮಲ್ಲಿ ಯಾವ ಭಾವವಿದೆ ? ಇದಕ್ಕಿಂತಲೂ ನಮ್ಮ ಮನಸ್ಸು ಸ್ಥಿರ ಮತ್ತು ಆನಂದದಲ್ಲಿದೆಯೇ ? ಎಂದು ಗಮನ ಕೊಡುವುದು ಬಹಳ ಆವಶ್ಯಕ !

ಯಾವಾಗ ಸಾಧಕನು ಗುರುಗಳು ಕೊಟ್ಟ ಸೇವೆಯಲ್ಲಿ ಹೆಚ್ಚು ಹೆಚ್ಚಾಗಿ ಏಕರೂಪನಾಗತೊಡಗುತ್ತಾನೋ ಆಗ ಅವನಲ್ಲಿರುವ ವ್ಯಕ್ತ ಭಾವವು ಅವ್ಯಕ್ತಭಾವದಲ್ಲಿ ರೂಪಾಂತರ ವಾಗಲು ಪ್ರಾರಂಭವಾಗುತ್ತದೆ.

ತಮ್ಮ ೮೦ ನೇ ವರ್ಷದಲ್ಲಿ ‘ಭಕ್ತಿಯೋಗದ ಸಾಧನೆ ಪ್ರಾರಂಭವಾಯಿತು, ಎಂಬ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉದ್ಗಾರ ಮತ್ತು ಅದರ ಬಗ್ಗೆ ಪೂ. ಸಂದೀಪ ಆಳಶಿಯವರು ಹೇಳಿದ ಗೂಢಾರ್ಥ (ಸೂಕ್ಷ್ಮ ಅರ್ಥ) !

ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳಿಂದಲೂ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಸಿಗದಿದ್ದಾಗ ಮುಂದೆ ನಾನು ‘ನನ್ನ ಬಳಿ ಇರುವ ಭಕ್ತಿ ಮಾರ್ಗಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಏನಾದರೂ ಉತ್ತರಗಳು ಸಿಗಬಹುದೇ ?, ಎಂಬುದರ ಅಧ್ಯಯನವನ್ನು ಆರಂಭಿಸಿದೆ.

ಗ್ರಂಥಲೇಖನದ ಅದ್ವಿತೀಯ ಕಾರ್ಯವನ್ನು ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಇಂದಿನ ವಿಜ್ಞಾನ ಯುಗದ ಪೀಳಿಗೆಗೆ ಅಧ್ಯಾತ್ಮದ ಪ್ರತಿಯೊಂದು ವಿಷಯದಲ್ಲಿ `ಏಕೆ ಮತ್ತು ಹೇಗೆ’ ಎಂಬುದನ್ನು ತಿಳಿದುಕೊಳ್ಳುವ ಜಿಜ್ಞಾಸೆ ಇರುತ್ತದೆ. ಅವರಿಗೆ ಅಧ್ಯಾತ್ಮದ ಯಾವುದೇ ಒಂದು ವಿಷಯದ ಹಿಂದಿನ ಶಾಸ್ತ್ರೀವನ್ನು ವಿವರಿಸಿ ಹೇಳಬೇಕು.

ಸಾಧನಾ ಪ್ರಯತ್ನಕ್ಕೆ ಭಂಗ ಬರದಿರಲು ಇದನ್ನು ಮಾಡಿ !

ಸಾಧನೆಯಲ್ಲಿ ಅನೇಕ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇವುಗಳಲ್ಲಿ ಆರಂಭದಲ್ಲಿ ಯಾವ ಪ್ರಯತ್ನವನ್ನು ನಾವು ಸಹಜವಾಗಿ ಮಾಡಬಲ್ಲೆವೋ, ಅಷ್ಟೇ ಪ್ರಯತ್ನವನ್ನು ಮಾಡಲು ಆರಂಭಿಸಬೇಕು.

ಸಮಷ್ಟಿ ಸೇವೆಯ ಜವಾಬ್ದಾರಿ ತೆಗೆದುಕೊಳ್ಳುವುದರ ಮಹತ್ವವೇನು ?

ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ತೆಗೆದುಕೊಂಡಾಗ ಆ ಸೇವೆಯು ಸಮಯಮಿತಿಯಲ್ಲಿ ಪೂರ್ಣಗೊಳ್ಳಲು ನಮ್ಮಿಂದ ಸಹಜವಾಗಿ ಹೆಚ್ಚೆಚ್ಚು ಸಮಯವನ್ನು ಕೊಟ್ಟು ಪ್ರಯತ್ನಗಳಾಗುತ್ತವೆ, ಅಂದರೆ ಶರೀರದ ಹೆಚ್ಚು ತ್ಯಾಗವಾಗುತ್ತದೆ.

ಸತತ ಇತರರ ದೋಷಗಳನ್ನೇ ನೋಡಿ ಬಹಿರ್ಮುಖರಾಗಬೇಡಿ !

ಸಾಧಕರಲ್ಲಿ ಇತರರ ದೋಷಗಳನ್ನು ನೋಡುವುದೇ ಹೆಚ್ಚಾಗುತ್ತಿದ್ದರೆ, ಅವರು ಆ ಸಮಯದಲ್ಲಿ ಗುರುಗಳಲ್ಲಿ ಅಥವಾ ದೇವರಲ್ಲಿ ಕ್ಷಮೆ ಯಾಚನೆಯನ್ನು ಮಾಡಿ, ‘ಪ್ರಭು, ನೀವೇ ಆ ಸಾಧಕನಿಗೆ ಸದ್ಬುದ್ಧಿಯನ್ನು ನೀಡಿರಿ; ನನಗೆ ಈಶ್ವರೀ ಅನುಸಂಧಾನದಲ್ಲಿ ಸ್ಥಿರವಾಗಿಡಿ’, ಎಂದು ಪ್ರಾರ್ಥಿಸಬೇಕು.

ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಆಧ್ಯಾತ್ಮಿಕ ಉಪಾಯಗಳ ವರದಿಯನ್ನು ಪ್ರತಿದಿನ ತೆಗೆದುಕೊಳ್ಳಿ !

ತೊಂದರೆಯಿರುವ ಸಾಧಕರಿಗೆ ತೊಂದರೆಗಳಿಂದಾಗಿ ತಮ್ಮ ಉಪಾಯಗಳ ಗಾಂಭೀರ್ಯ ಉಳಿಯುವುದಿಲ್ಲ. ಇಂತಹವರಿಗೆ ಸಹಾಯ ಮಾಡುವುದು ಜವಾಬ್ದಾರ ಸಾಧಕರ ಸಮಷ್ಟಿ ಸಾಧನೆಯೇ ಆಗಿದೆ. ಇದರೊಂದಿಗೆ ತೊಂದರೆ ಇರುವ ಸಾಧಕರು ತಮ್ಮ ವರದಿಯನ್ನು ಜವಾಬ್ದಾರ ಸಾಧಕರಿಗೆ ನೀಡುವುದೂ ಅವರ ಸಾಧನೆಯೇ ಆಗಿದೆ.