ಸಾತ್ತ್ವಿಕ ರಂಗೋಲಿ ಮತ್ತು ದೇವತೆಗಳ ಚಿತ್ರಗಳ ಬಗ್ಗೆ ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಯುನಿವರ್ಸಲ್ ಥರ್ಮೋ ಸ್ಕ್ಯಾನರ್ (ಯು.ಎ.ಎಸ್) ಈ ಉಪಕರಣದ ಮೂಲಕ ಮಾಡಿರುವ ವೈಜ್ಞಾನಿಕ ಪರೀಕ್ಷಣೆ |
‘ರಂಗೋಲಿಯು ೬೪ ಕಲೆಗಳ ಪೈಕಿ ಒಂದಾಗಿದೆ. ಈ ಕಲೆಯು ಮನೆಮನೆಗಳಿಗೆ ತಲುಪಿದೆ. ಹಬ್ಬ-ಸಮಾರಂಭಗಳಲ್ಲಿ, ದೇವಸ್ಥಾನಗಳಲ್ಲಿ ಮತ್ತು ಮನೆಮನೆಗಳಲ್ಲಿ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಸೌಂದರ್ಯದ ಸಾಕ್ಷಾತ್ಕಾರ ಮತ್ತು ಮಾಂಗಲ್ಯದ ಸಿದ್ಧಿ ಇವು ರಂಗೋಲಿಯ ಎರಡು ಉದ್ದೇಶಗಳಾಗಿವೆ. ಯಾವ ಸ್ಥಳದಲ್ಲಿ ಸಾತ್ತ್ವಿಕ ರಂಗೋಲಿಯನ್ನು ಬಿಡಿಸಲಾಗುತ್ತದೋ ಆ ಸ್ಥಳದಲ್ಲಿ ತನ್ನಿಂದ ತಾನೆ ಮಂಗಲಮಯ ವಾತಾವರಣವು ಸೃಷ್ಟಿಯಾಗುತ್ತದೆ. ಹಿಂದೂ ಧರ್ಮದಲ್ಲಿ ಎಲ್ಲ ಹಬ್ಬ ಮತ್ತು ವಿಧಿಗಳು ವಿವಿಧ ದೇವತೆಗಳಿಗೆ ಸಂಬಂಧಿಸಿವೆ. ಆಯಾ ಹಬ್ಬಗಳಂದು ಮತ್ತು ವಿಧಿಗಳ ಸಮಯದಲ್ಲಿ ಆಯಾ ದೇವತೆಯ ತತ್ತ್ವವು ವಾತಾವರಣದಲ್ಲಿ ಎಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿರುತ್ತದೆ ಮತ್ತು ಧಾರ್ಮಿಕ ವಿಧಿಯಿಂದಾಗಿ ಅದು ರಂಗೋಲಿಯಲ್ಲಿ ಆಕರ್ಷಿತವಾಗುತ್ತದೆ. ಪ್ರತಿಯೊಂದು ಹಬ್ಬಕ್ಕನುಸಾರ ಆಯಾ ದೇವತೆಯ ತತ್ತ್ವವು ರಂಗೋಲಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಿ ಅದರಿಂದ ಎಲ್ಲರಿಗೂ ಲಾಭವಾಗಬೇಕೆಂಬ ಉದ್ದೇಶದಿಂದ ಸನಾತನದ ಸಾಧಕ-ಕಲಾವಿದರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ವಿವಿಧ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಅನೇಕ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿದ್ದಾರೆ.
ಅವುಗಳನ್ನು ಸನಾತನದ ‘ಸಾತ್ತ್ವಿಕ ರಂಗೋಲಿಗಳು’ ಈ ಕಿರುಗ್ರಂಥದಲ್ಲಿ ನೀಡಲಾಗಿದೆ. ಈ ಸನಾತನದ ಸಾತ್ತ್ವಿಕ ರಂಗೋಲಿಗಳನ್ನು ಕು. ಸಂಧ್ಯಾ ಮಾಳಿಯವರು ಬಿಡಿಸಿದ್ದಾರೆ. ಈ ರಂಗೋಲಿಗಳಿಂದ ದೇವತೆಗಳ ತತ್ತ್ವವು ಆಕರ್ಷಿತ ಮತ್ತು ಪ್ರಕ್ಷೇಪಿತವಾಗುವುದರಿಂದ ಅಲ್ಲಿನ ವಾತಾವರಣವು ಆ ತತ್ತ್ವದಿಂದ ತುಂಬಿಕೊಂಡು ಅದರಿಂದ ಎಲ್ಲರಿಗೂ ಲಾಭವಾಗುತ್ತದೆ. ದೇವತೆಯ ತತ್ತ್ವವನ್ನು ಆಕರ್ಷಿಸುವ ಯಂತ್ರ, ದೇವತೆಗಳ ಸಾತ್ತ್ವಿಕ ಚಿತ್ರ ಮತ್ತು ಸಾತ್ತ್ವಿಕ ರಂಗೋಲಿಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ೧೬.೧೦.೨೦೧೮ ಈ ದಿನದಂದು ಒಂದು ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣವನ್ನು ಬಳಸಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ, ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ನೀಡಲಾಗಿದೆ.
೧. ಪರೀಕ್ಷಣೆಯಲ್ಲಿನ ಘಟಕಗಳ ಮಾಹಿತಿ
೧ ಅ. ದೇವತೆಗಳ ಯಂತ್ರ : ಯಂತ್ರವೆಂದರೆ ಒಂದು ವಿಶಿಷ್ಟ ಆಕೃತಿಬಂಧ. ೭ ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ವಿವಿಧ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ವಿವಿಧ ಯಂತ್ರಗಳನ್ನು ನಿರ್ಮಿಸಿದ್ದರು. ಅವುಗಳ ಪೈಕಿ ‘ಶ್ರೀ ಮಹಾಲಕ್ಷ್ಮೀ ಯಂತ್ರ’ವು ಶ್ರೀ ಲಕ್ಷ್ಮೀದೇವಿಯ ತತ್ತ್ವವನ್ನು ಮತ್ತು ‘ಶ್ರೀಯಂತ್ರ’ವು ಶ್ರೀ ದುರ್ಗಾದೇವಿಯ ತತ್ತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುತ್ತದೆ.
೧ ಆ. ದೇವತೆಗಳ ಸಾತ್ತ್ವಿಕ ಚಿತ್ರಗಳು : ಸನಾತನ ಸಂಸ್ಥೆಯ ಸಾಧಕ-ಕಲಾವಿದರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಶ್ರೀ ಲಕ್ಷ್ಮೀದೇವಿಯ ಮತ್ತು ಶ್ರೀ ದುರ್ಗಾದೇವಿಯ ಸಾತ್ತ್ವಿಕ ಚಿತ್ರಗಳನ್ನು ತಯಾರಿಸಿದ್ದಾರೆ. ಅವುಗಳಲ್ಲಿ ಆಯಾ ದೇವಿಯ ತತ್ತ್ವವು ಹೆಚ್ಚಿನ ಪ್ರಮಾಣ ದಲ್ಲಿ ಬಂದಿವೆ.
೧ ಇ. ಸಾತ್ತ್ವಿಕ ರಂಗೋಲಿಗಳು : ಈ ರಂಗೋಲಿಗಳ ಪೈಕಿ ಒಂದು ರಂಗೋಲಿಯಲ್ಲಿ ಶ್ರೀ ಲಕ್ಷ್ಮೀ ದೇವಿಯ ಮತ್ತು ಇನ್ನೊಂದು ರಂಗೋಲಿಯಲ್ಲಿ ಶ್ರೀ ದುರ್ಗಾದೇವಿಯ ತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ. ಈ ರಂಗೋಲಿಗಳನ್ನು ಸನಾತನದ ಸಾಧಕ-ಕಲಾವಿದೆಯು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶದಲ್ಲಿ ಬಿಡಿಸಿದ್ದಾಳೆ.
೨. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
೨ ಅ. ನಕಾರಾತ್ಮಕ ಊರ್ಜೆಗೆ ಸಂಬಂಧಿಸಿದ ನಿರೀಕ್ಷಣೆಗಳ ವಿವೇಚನೆ : ಶ್ರೀ ಲಕ್ಷ್ಮೀದೇವಿಯ ಮತ್ತು ಶ್ರೀ ದುರ್ಗಾದೇವಿಗೆ ಸಂಬಂಧಿಸಿದ ಸಾತ್ತ್ವಿಕ ರಂಗೋಲಿಗಳು, ಯಂತ್ರ ಮತ್ತು ಸಾತ್ತ್ವಿಕ ಚಿತ್ರಗಳಲ್ಲಿ ನಕಾರಾತ್ಮಕ ಊರ್ಜೆಯು ಲವಲೇಶದಷ್ಟೂ ಇರಲಿಲ್ಲ.
೨ ಆ. ಸಕಾರಾತ್ಮಕ ಊರ್ಜೆಗೆ ಸಂಬಂಧಿಸಿದ ನಿರೀಕ್ಷಣೆಗಳ ವಿವೇಚನೆ : ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಯರಿಗೆ ಸಂಬಂಧಿಸಿದ ಸಾತ್ತ್ವಿಕ ರಂಗೋಲಿಗಳು, ಯಂತ್ರ ಮತ್ತು ಸಾತ್ತ್ವಿಕ ಚಿತ್ರಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಇರುವುದು.
೩. ನಿಷ್ಕರ್ಷ
ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿ ಇವರ ತತ್ತ್ವಗಳನ್ನು ಆಕರ್ಷಿಸುವ ಸನಾತನ-ನಿರ್ಮಿತ ಸಾತ್ತ್ವಿಕ ರಂಗೋಲಿಗಳು ಮತ್ತು ಸಾತ್ತ್ವಿಕ ಚಿತ್ರಗಳಲ್ಲಿ ಆಯಾ ದೇವಿಯ ಯಂತ್ರದಲ್ಲಿರುವಂತೆ ಸಕಾರಾತ್ಮಕ ಊರ್ಜೆ (ಚೈತನ್ಯ) ಇದೆ. ಮೇಲಿನ ಎಲ್ಲ ಅಂಶಗಳ ಬಗ್ಗೆ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೪ರಲ್ಲಿ ನೀಡಲಾಗಿದೆ.
೪. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೪ ಅ. ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಯರಿಗೆ ಸಂಬಂಧಿಸಿದ ಯಂತ್ರಗಳಲ್ಲಿ ಬಹಳ ಚೈತನ್ಯವಿರುವುದು : ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀದುರ್ಗಾದೇವಿ ಇವರಿಗೆ ಸಂಬಂಧಿತ ಯಂತ್ರಗಳನ್ನು ಆದಿ ಶಂಕರಾಚಾರ್ಯರು (ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗಳು) ತಯಾರಿಸಿದ್ದಾರೆ. ೭ ನೇ ಶತಮಾನದಲ್ಲಿದ್ದ ಆದಿ ಶಂಕರಾಚಾರ್ಯರು ಅವತಾರಿ ಪುರುಷರಾಗಿದ್ದರು. ಅವರಲ್ಲಿ ಸೂಕ್ಷ್ಮಾತಿಸೂಕ್ಷ್ಮ ಸ್ಪಂದನಗಳನ್ನು ತಿಳಿಯುವ ಕ್ಷಮತೆ ಇದ್ದುದರಿಂದ ಅವರು ಉಪಾಸಕರಿಗೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಾಗಿರುವ ದೇವತೆಗಳ ವಿವಿಧ ಯಂತ್ರಗಳನ್ನು ನಿರ್ಮಿಸಿದರು. ಈ ಯಂತ್ರಗಳು ಬಹಳ ಸಾತ್ತ್ವಿಕವಾಗಿವೆ, ಹಾಗೆಯೇ ಆ ಯಂತ್ರಗಳಲ್ಲಿ ಸಂಬಂಧಿತ ದೇವತೆಗಳ ತತ್ತ್ವವನ್ನು ಆಕರ್ಷಿಸುವ ಕ್ಷಮತೆ ಇದೆ. ಆದುದರಿಂದ ಪರೀಕ್ಷಣೆಯಲ್ಲಿನ ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಯವರೊಂದಿಗೆ ಸಂಬಂಧಿತ ಯಂತ್ರಗಳಲ್ಲಿ ಬಹಳ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯು ಕಂಡು ಬಂದಿತು.
೪ ಆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧಕ-ಕಲಾವಿದರು ಬಿಡಿಸಿದ ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿಯರ ತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿಗಳು ಮತ್ತು ಸಾತ್ತ್ವಿಕ ಚಿತ್ರಗಳಲ್ಲಿ ಆಯಾ ದೇವಿಯ ಯಂತ್ರದಂತೆ ಸಕಾರಾತ್ಮಕ ಸ್ಪಂದನಗಳಿರುವುದು : ಸ್ಪಂದನಶಾಸ್ತ್ರಕ್ಕನುಸಾರ ಯಾವುದಾದರೊಂದು ದೇವತೆಯ ಚಿತ್ರ ಅಥವಾ ಮೂರ್ತಿಯು ಅದರ ಮೂಲ ರೂಪದೊಂದಿಗೆ ಎಷ್ಟು ಹೆಚ್ಚು ಹೋಲುವುದೋ, ಅಷ್ಟು ಆ ಚಿತ್ರದಲ್ಲಿ ಅಥವಾ ಮೂರ್ತಿಯಲ್ಲಿ ಆ ದೇವತೆಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಸಾಧಕ-ಚಿತ್ರಕಾರರು ‘ಕಲೆಗಾಗಿ ಕಲೆಯಲ್ಲ, ಆದರೆ ಈಶ್ವರಪ್ರಾಪ್ತಿಗಾಗಿ ಕಲೆ’ ಅಂದರೆ ‘ಸಾಧನೆ’ಯೆಂದು, ಹಾಗೆಯೇ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ಪರಾತ್ಪರ ಗುರು ಡಾ. ಆಠವಲೆಯವರು ಕಾಲಾನುಸಾರ ಮಾಡಿದ ಮಾರ್ಗದರ್ಶನಕ್ಕನುಸಾರ ಬಿಡಿಸಿದ್ದಾರೆ. ಇದರಿಂದ ಆ ಚಿತ್ರಗಳಲ್ಲಿ ಆಯಾ ದೇವತೆಗಳ ತತ್ತ್ವ (ಚೈತನ್ಯ)ವು ಬಂದಿದೆ. ಆದುದರಿಂದ ಆ ಚಿತ್ರಗಳು ಬಹಳ ಸಾತ್ತ್ವಿಕವಾಗಿ ತಯಾರಾಗಿದ್ದು ಆ ಚಿತ್ರಗಳಲ್ಲಿ ಬಹಳ ಸಕಾರಾತ್ಮಕ ಊರ್ಜೆಯು ಕಂಡು ಬಂದಿತು.
ಸರ್ವಸಾಮಾನ್ಯವಾಗಿ ಎಲ್ಲ ರಂಗೋಲಿಗಳಲ್ಲಿ ಸಕಾರಾತ್ಮಕ ಸ್ಪಂದನಗಳಿರುವುದಿಲ್ಲ. ರಂಗೋಲಿಯು ಎಷ್ಟು ಸಾತ್ತ್ವಿಕವೋ, ಅದರಲ್ಲಿ ಅಷ್ಟು ಸಕಾರಾತ್ಮಕ ಸ್ಪಂದನಗಳ ಪ್ರಮಾಣವು ಹೆಚ್ಚಿರುತ್ತದೆ. ಇದರಿಂದ ರಂಗೋಲಿ ಬಿಡಿಸುವವರು ಮತ್ತು ನೋಡುವವರು ಇಬ್ಬರಿಗೂ ಲಾಭವಾಗುತ್ತದೆ. ಸ್ಥೂಲ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಅಂದರೆ ‘ಸೂಕ್ಷ್ಮ ಸಾತ್ತ್ವಿಕ ರಂಗೋಲಿ’ಗಳನ್ನು ವಿಕಸಿತಗೊಳಿಸುವಾಗ ‘ರಂಗೋಲಿಯಲ್ಲಿ ದೇವತೆಯ ತತ್ತ್ವವು ಬರುತ್ತಿದೆಯೇ?’ ಎಂಬುದನ್ನು ತಿಳಿಯಲು ಚಿತ್ರಕಾರನಲ್ಲಿ ಸೂಕ್ಷ್ಮದಲ್ಲಿನ ಸ್ಪಂದನಗಳನ್ನು ತಿಳಿಯುವ ಕ್ಷಮತೆಯು ಇರಬೇಕಾಗುತ್ತದೆ. ಈ ಕ್ಷಮತೆಯು ಯೋಗ್ಯವಾದ ಸಾಧನೆಯಿಂದ ವಿಕಸಿತವಾಗುತ್ತದೆ. ಸನಾತನ-ನಿರ್ಮಿತ ಶ್ರೀ ಲಕ್ಷ್ಮೀತತ್ತ್ವ ಮತ್ತು ಶ್ರೀ ದುರ್ಗಾತತ್ತ್ವವಿರುವ ರಂಗೋಲಿಗಳು ಸನಾತನದ ಸಾಧಕ-ಕಲಾವಿದರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಬಿಡಿಸಿದ್ದಾರೆ. ಅವರು ಬಿಡಿಸುತ್ತಿರುವಾಗ ಅದರಲ್ಲಿ ಸಂಬಂಧಿತ ದೇವತೆಯ ತತ್ತ್ವವು ಹೆಚ್ಚೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುವಂತಹ ಆಕೃತಿಬಂಧವನ್ನೇ ಉಪಯೋಗಿಸಲಾಗಿದೆ. ಈ ರಂಗೋಲಿಗಳಲ್ಲಿ ಆಯಾ ದೇವತೆಗಳ ತತ್ತ್ವವು ಬಂದಿದೆ. ಇದರಿಂದ ಆ ರಂಗೋಲಿಗಳಲ್ಲಿ ಬಹಳ ಸಕಾರಾತ್ಮಕ ಊರ್ಜೆಯು ಕಂಡು ಬಂದಿತು.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೧೦.೨೦೨೦)
ವಿ-ಅಂಚೆ : [email protected]