ಸಮಾಜದಲ್ಲಿರುವ ಸಂತರಿಗೆ ಸನಾತನ ಸಂಸ್ಥೆಯು ‘ತಮ್ಮದೆಂದು’ ಅನಿಸಲು ಕಾರಣವೇನು ?

ಪ್ರಸ್ತುತ ಇಡೀ ಮನುಕುಲದ ಕಲ್ಯಾಣಕ್ಕಾಗಿ ಧರ್ಮಸಂಸ್ಥಾಪನೆ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆಯನ್ನು ತಿಳಿಸಿ, ಅದಕ್ಕಾಗಿ ಹಗಲಿರುಳು ಕಾರ್ಯನಿರತರಾಗಿರುವ ವಿಭೂತಿಗಳೆಂದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆ ! ಸಂತರು ಎಂದರೆ ಸಾಕ್ಷಾತ್ ಧರ್ಮದ ಆಧಾರ ಮತ್ತು ರಕ್ಷಕರಾಗಿರುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರು ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲ ಸಂತರ ಬೆಂಬಲ ಮತ್ತು ಸಹಾಯ ಆವಶ್ಯಕವಾಗಿದೆ ಎಂಬುದನ್ನು ಅರಿತುಕೊಂಡು ೧೯೯೬ನೇ ಇಸವಿಯಿಂದಲೇ ಈ ಕಾರ್ಯಕ್ಕಾಗಿ ಸಂತರನ್ನು ಸಂಘಟಿಸಲು ಪ್ರಾರಂಭಿಸಿದ್ದರು. ಪರಾತ್ಪರ ಗುರು ಡಾಕ್ಟರರಲ್ಲಿದ್ದ ಸಂತರ ಬಗೆಗಿನ ಭಾವ, ಕಲಿಯುವ ವೃತ್ತಿ, ನಮ್ರತೆ, ಪ್ರೇಮಭಾವ ಇತ್ಯಾದಿ ಗುಣಗಳಿದ್ದುದರಿಂದ ಅವರಿಗೆ ಅನೇಕ ಸಂತರು ಆತ್ಮೀಯರಾದರು ಮತ್ತು ಆ ಸಂತರು ಸನಾತನ ಸಂಸ್ಥೆಯ ಕಾರ್ಯದಲ್ಲಿ ಪಾಲ್ಗೊಂಡರು.

(ಪೂ.) ಸಂದೀಪ ಆಳಶಿ

ಮುಂದೆ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಿಂದ ರಾಷ್ಟ್ರ ಮತ್ತು ಧರ್ಮದ ಕಾರ್ಯವನ್ನು ಮಾಡುವ ಸನಾತನದ ಅನೇಕ ಸಂತರು ಮತ್ತು ಸಾಧಕರು ಸಿದ್ಧಗೊಂಡರು. ‘ಆಪಣಾಸಾರಿಖೆ ಕರಿತಿ ತಾತ್ಕಾಳ| ನಾಹಿ ಕಾಳವೇಳ ತಯಾಲಾಗಿ ||, (ಅರ್ಥ: ಕ್ಷಣಾರ್ಧದಲ್ಲಿ ತಮ್ಮಂತೆ ಸಿದ್ಧಗೊಳಿಸುತ್ತಾರೆ. ಇದನ್ನು ಮಾಡಲು ಅವರಿಗೆ ಸಮಯ ಬೇಕಾಗುವುದಿಲ್ಲ) ಹೀಗಿದೆ ಗುರುಮಹಿಮೆ.

ಪರಾತ್ಪರ ಗುರು ಡಾಕ್ಟರರ ಕೃಪೆ ಮತ್ತು ಬೋಧನೆಯಿಂದ ಸನಾತನದ ಸಂತರು ಮತ್ತು ಸಾಧಕರಲ್ಲಿಯೂ ಅವರಲ್ಲಿರುವಂತಹ ಗುಣಗಳೇ ನಿರ್ಮಾಣವಾಗಿವೆ. ಈ ಗುಣಗಳಿಂದ ಈಗ ಸಮಾಜದಲ್ಲಿರುವ ಸಂತರೊಂದಿಗೆ ಆತ್ಮೀಯ ಸಂಬಂಧವು ಇದೆ. ಪರಾತ್ಪರ ಗುರು ಡಾಕ್ಟರರು ಕಲಿಸಿದ ಯೋಗ್ಯ ಸಾಧನೆಯನ್ನು ಮಾಡಿದ್ದರಿಂದ ಸಾಧಕರಲ್ಲಿ ನಿರ್ಮಾಣವಾದ ಸಾಧಕತ್ವವನ್ನು ಗುರುತಿಸಿ ಸಮಾಜದಲ್ಲಿರುವ ಸಂತರು ಪ್ರಭಾವಿತರಾಗುತ್ತಾರೆ. ವಿಶ್ವವ್ಯಾಪಿ ಹಿಂದೂ ಸಂಘಟನೆ ಮತ್ತು ಧರ್ಮಪ್ರಸಾರ, ಅಲ್ಲದೇ ವಿಶ್ವಶಾಂತಿಗಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮುಂತಾದ ಸನಾತನ ಸಂಸ್ಥೆಯ ಶ್ರೇಷ್ಠ ಧ್ಯೇಯಗಳಿಂದ ಸಮಾಜದಲ್ಲಿನ ಸಂತರಿಗೆ ಸಂಸ್ಥೆಯ ಕಾರ್ಯವು ಪ್ರಶಂಸನೀಯವೆನಿಸುತ್ತದೆ. ಹೀಗೆ ಎಲ್ಲ ಸಂತರಿಗೆ ಸನಾತನ ಸಂಸ್ಥೆ ‘ತಮ್ಮದೆಂದು ಅನಿಸುತ್ತದೆ ಮತ್ತು ಅವರು ಸನಾತನದ ಕಾರ್ಯದಲ್ಲಿ ಸಹಭಾಗಿಯಾಗುತ್ತಿದ್ದಾರೆ. ಇದರ ಬಗೆಗಿನ ಕೆಲವು ಅಂಶಗಳ ಮೇಲೆ ಬೆಳಕು ಚೆಲ್ಲುವ ಲೇಖನವನ್ನು ಮುಂದೆ ನೀಡಲಾಗಿದೆ.

ಸಂಕಲನಕಾರರು : ಪೂ. ಸಂದೀಪ ಆಳಶಿ (ಸನಾತನ ಗ್ರಂಥಗಳ ಸಂಕಲನಕಾರರು), ಸನಾತನ ಆಶ್ರಮ, ರಾಮನಾಥಿ, ಗೋವಾ.

ಸನಾತನದ ಸಾಧಕರು ಮತ್ತು ಸಂತರಲ್ಲಿರುವ ಅತ್ಯಲ್ಪ ಅಹಂ, ಕಲಿಯುವ ವೃತ್ತಿ ಮತ್ತು ಪ್ರೇಮಭಾವಗಳಿಂದ ಸಮಾಜದಲ್ಲಿರುವ ಸಂತರಿಗೆ ಅವರು ‘ತಮ್ಮವರು’ ಎಂದೆನಿಸುವುದು

(ಪರಾತ್ಪರ ಗುರು) ಡಾ. ಆಠವಲೆ

‘೧೯೯೬ ರಿಂದ ೨೦೦೫ ನೇ ಇಸವಿಯವರೆಗಿನ ಕಾಲಾವಧಿಯಲ್ಲಿ ನಾನು ಎಲ್ಲೆಡೆ ತಿರುಗಾಡಿ ವಿವಿಧ ಸಂತರನ್ನು ಭೇಟಿಯಾಗುತ್ತಿದ್ದೆನು. ನನ್ನಲ್ಲಿನ ಜಿಜ್ಞಾಸೆಯಿಂದ ನಾನು ಅಧ್ಯಾತ್ಮದ ವಿವಿಧ ಅಂಗಗಳ ಮಾಹಿತಿಯನ್ನು ಪಡೆಯಲು ಸಂತರನ್ನು ನಮ್ರತೆ ಯಿಂದ ಭೇಟಿಯಾಗುತ್ತಿದ್ದೆನು ಮತ್ತು ಪ್ರಶ್ನೆಗಳನ್ನು ಕೇಳುತ್ತಿದ್ದೆನು. ನಾನು ಅವರೊಂದಿಗೆ ಮನೆಯವರಂತೆ ವರ್ತಿಸುತ್ತಿದ್ದೆನು ಮಾತನಾಡುತ್ತಿದ್ದೆನು. ಆದುದರಿಂದ ನನಗೆ ಬಹಳಷ್ಟು ಸಂತರು ಹತ್ತಿರದವರಾದರು. ಈಗ ಸನಾತನದ ಸಾಧಕರಿಗೆ ಮತ್ತು ಸಂತರಿಗೂ ಸಮಾಜದಲ್ಲಿನ ಸಂತರು ಹತ್ತಿರವಾಗುತ್ತಿದ್ದಾರೆ. ಇದರ ಕಾರಣವೆಂದರೆ, ಕೆಲವು ಸಂಪ್ರದಾಯಗಳ ಸಾಧಕರು ಮತ್ತು ಸಂತರಂತೆ ಸನಾತನದ ಸಾಧಕರು ಮತ್ತು ಸಂತರಲ್ಲಿ ಅಹಂಭಾವವಿಲ್ಲ. ಅಲ್ಲದೇ ಅವರಲ್ಲಿ ಕಲಿಯುವ ವೃತ್ತಿ ಮತ್ತು ಪ್ರೇಮಭಾವವಿರುವುದರಿಂದ, ಅವರು ಸಂತರೊಂದಿಗೆ ನಡೆದುಕೊಳ್ಳುವ ರೀತಿಯಿಂದ ಸಮಾಜದಲ್ಲಿರುವ ಸಂತರಿಗೆ ಅವರು ‘ತಮ್ಮವರು ಎಂದೆನಿಸುತ್ತದೆ. ಇಂತಹ ಸಂತರ ಪೈಕಿ ಹೆಚ್ಚಿನ ಸಂತರು ಸನಾತನದ ಕಾರ್ಯದಲ್ಲಿ ಸಹಭಾಗಿಯಾಗುತ್ತಿದ್ದಾರೆ ಮತ್ತು ತಾವಾಗಿಯೇ ಸನಾತನದ ಕಾರ್ಯಕ್ಕೆ ಸಹಾಯವನ್ನು ಕೂಡ ಮಾಡುತ್ತಿದ್ದಾರೆ. – (ಪರಾತ್ಪರ ಗುರು) ಡಾ. ಆಠವಲೆ


‘ಶ್ರೀಸಂಸ್ಥಾನ ಹಳದಿಪುರ’ ಮಠಾಧಿಪತಿಗಳು ಪ.ಪೂ. ಶ್ರೀ ಶ್ರೀ ವಾಮನಾಶ್ರಮ ಸ್ವಾಮೀಜಿ

ಪ.ಪೂ. ಶ್ರೀ ಶ್ರೀ ವಾಮನಾಶ್ರಮ ಸ್ವಾಮೀಜಿ

೧. ಸ್ವಾಮೀಜಿಗಳ ಸೇವೆಯಲ್ಲಿ ಸಾಧಕರಿಂದ ಒಂದು ತಪ್ಪಾಗಿರುವುದು ತಿಳಿದಾಗ ಸಾಧಕರು ಸ್ವಾಮೀಜಿಯವರಲ್ಲಿ ಕ್ಷಮಾಯಾಚನೆ ಮಾಡುವುದು ಮತ್ತು ಇದರಿಂದ ಸ್ವಾಮೀಜಿಗಳು ಸಾಧಕರ ಮೇಲೆ ಪ್ರಸನ್ನರಾಗುವುದು

‘ಹಿಂದೊಮ್ಮೆ ‘ಶ್ರೀಸಂಸ್ಥಾನ ಹಳದಿಪುರದ’ ಮಠಾಧಿಪತಿಗಳು ಪ.ಪೂ. ಶ್ರೀ ಶ್ರೀ ವಾಮನಾಶ್ರಮ ಸ್ವಾಮೀಜಿಯವರು ರಾಮನಾಥಿಯ ಸನಾತನದ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಗ ಆಶ್ರಮದ ವ್ಯವಸ್ಥಾಪನೆ ಮತ್ತು ಸಾಧಕರು ನಡೆಸುತ್ತಿರುವ ‘ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯ ಪ್ರಕ್ರಿಯೆ, ಹಾಗೆಯೇ ಆಶ್ರಮದಲ್ಲಿ ನಡೆಯುವ ಧರ್ಮಪ್ರಚಾರದ ಸಮಷ್ಟಿ ಕಾರ್ಯ, ಇವೆಲ್ಲವೂ ಅವರಿಗೆ ಬಹಳ ಇಷ್ಟವಾಯಿತು. ಆ ಸಮಯದಲ್ಲಿ ಸ್ವಾಮೀಜಿಗಳೊಂದಿಗೆ ಬಂದಿದ್ದ ಅವರ ಕೆಲವು ಭಕ್ತರು ಸಾಧಕರಿಂದ ಸಂತಸೇವೆಯಲ್ಲಾದ ಒಂದು ತಪ್ಪಿನ ಬಗ್ಗೆ ಹೇಳಿದರು. ಆಗ ಸಾಧಕರು ತಕ್ಷಣ ಸ್ವಾಮೀಜಿಯವರಲ್ಲಿ ಕ್ಷಮೆಯಾಚನೆ ಮಾಡಿದರು. ಸಾಧಕರಲ್ಲಿರುವ ಸಾಧಕತ್ವವನ್ನು ಗಮನಿಸಿದ ಸ್ವಾಮೀಜಿಗಳು ಪ್ರಸನ್ನರಾಗಿ ತಮ್ಮ ಭಕ್ತರಿಗೆ, “ಇದನ್ನು ಕಲಿಯುವುದು ಮಹತ್ವದ್ದಾಗಿದೆ. ಇತರೆಡೆ ಎಲ್ಲಿಯೂ ಇಂತಹ ಆಚರಣೆಯನ್ನು ಕಲಿಸುವುದಿಲ್ಲ’ ಎಂದು ಹೇಳಿದರು.

. ಸ್ವಾಮೀಜಿಗಳು ತಮ್ಮ ಭಕ್ತರನ್ನು ಸನಾತನದ ಆಶ್ರಮದಲ್ಲಿ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಕಲಿಯಲು ಶಿಬಿರಕ್ಕೆ ಕಳುಹಿಸುವುದು

ಕರ್ನಾಟಕ ರಾಜ್ಯದ ಪ.ಪೂ. ಶ್ರೀ ಶ್ರೀ ವಾಮನಾಶ್ರಮ ಸ್ವಾಮೀಜಿ (ಬಲಗಡೆ), ಇವರೊಂದಿಗೆ ಸಂವಾದ ಮಾಡುತ್ತಿರುವ ಪರಾತ್ಪರ ಗುರು ಡಾ. ಆಠವಲೆ

ಸ್ವಾಮೀಜಿಗಳು ‘ನಮ್ಮ ಕೆಲವು ಭಕ್ತರು ರಾಮನಾಥಿ ಆಶ್ರಮದಲ್ಲಿದ್ದು ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ಕಲಿಯಬಹುದೇ ?’ ಎಂದು ಸಾಧಕದಲ್ಲಿ ವಿನಯದಿಂದ ಕೇಳಿ ದರು. ಮುಂದೆ ಕೆಲವು ತಿಂಗಳುಗಳ ಬಳಿಕ ಈ ಸಂಬಂಧದಲ್ಲಿ ರಾಮನಾಥಿ ಆಶ್ರಮದಲ್ಲಿ ಒಂದು ಶಿಬಿರವನ್ನು ಆಯೋಜಿಸಲಾಯಿತು. ಆಗ ಸ್ವಾಮೀಜಿಗಳು ತಮ್ಮ ಶಿಷ್ಯರನ್ನು ಈ ಶಿಬಿರದಲ್ಲಿ ಭಾಗವಹಿಸಲು ಕಳುಹಿಸಿದರು.

– ಶ್ರೀ. ರಾಮ ಹೊನಪ (ಸೂಕ್ಷ್ಮಜ್ಞಾನ ಪಡೆಯುವ ಸಾಧಕ) ಸನಾತನ  ಆಶ್ರಮ ರಾಮನಾಥಿ ಗೋವಾ

‘ಭಾರತ ಸೇವಾಶ್ರಮ ಸಂಘ’ (ದೆಹಲಿ)ದ ಮುಖ್ಯ ವ್ಯವಸ್ಥಾಪಕರಾದ ಸ್ವಾಮಿ ಆತ್ಮಜ್ಞಾನಾನಂದ ಮಹಾರಾಜರು

ಸದ್ಗುರು (ಡಾ.) ಚಾರುದತ್ತ ಪಿಂಗಳೆ

೧. ಸಾಧಕರ ಸೇವಾಭಾವ ಮತ್ತು ನಮ್ರತೆಯನ್ನು ನೋಡಿ ಸ್ವಾಮಿ ಆತ್ಮಜ್ಞಾನಾನಂದ ಮಹಾರಾಜರು ಪ್ರಭಾವಿತರಾಗುವುದು

‘ದೆಹಲಿಯ ‘ಉತ್ತರ ಭಾರತ ಹಿಂದೂ ಅಧಿವೇಶನಕ್ಕಾಗಿ ಸಾಧಕರು ‘ಭಾರತ ಸೇವಾಶ್ರಮ ಸಂಘದ ಸಭಾಂಗಣವನ್ನು ಪಡೆದುಕೊಂಡಿದ್ದರು. ಇದರಿಂದ ದೆಹಲಿಯ ಸಾಧಕರಾದ ಶ್ರೀ. ಸಂಜೀವ ಕುಮಾರ ಮತ್ತು ಕು. ಕೃತಿಕಾ ಖತ್ರಿಯವರು ‘ಭಾರತ ಸೇವಾಶ್ರಮ ಸಂಘದ ಮುಖ್ಯ ವ್ಯವಸ್ಥಾಪಕರಾದ ಸ್ವಾಮಿ ಆತ್ಮಜ್ಞಾನಾನಂದ ಮಹಾರಾಜರ ಸಂಪರ್ಕದಲ್ಲಿದ್ದರು. ಮಹಾರಾಜರನ್ನು ಆಗಾಗ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆಯುವುದು, ಅವರಿಗೆ ಸನಾತನ ಪಂಚಾಂಗವನ್ನು ನೀಡುವುದು ಮುಂತಾದ ನಿಮಿತ್ತಗಳಿಂದ ಮಹಾರಾಜರ  ಸಂಪರ್ಕವಾಗುತ್ತಿತ್ತು. ಮುಂದೆ ‘ಭಾರತ ಸೇವಾಶ್ರಮ ಸಂಘದಲ್ಲಿ ಅಧಿವೇಶನದ ಆಯೋಜನೆಯು ಪ್ರಾರಂಭವಾಯಿತು. ಆ ಸಮಯದಲ್ಲಿ ಅಲ್ಲಿ ಸೇವೆಗಾಗಿ ಬರುವ ಸಾಧಕರ ಸೇವಾಭಾವ, ನಮ್ರತೆಯಿಂದ ವರ್ತಿಸುವುದು-ಮಾತನಾಡುವುದು, ಸಾಧಕರ ವರ್ತನೆಯಲ್ಲಿರುವ ಸಹಜತೆ ಮತ್ತು ಶಾಂತತೆಯಿಂದ ಮಾಡುತ್ತಿದ್ದ ಸೇವೆಯಿಂದ ಸ್ವಾಮೀಜಿಗಳು ಬಹಳ ಪ್ರಭಾವಿತರಾದರು.

೨. ಮಹಾರಾಜರು ಸನಾತನ ಸಂಸ್ಥೆಗೆ ಮಾಡಿದ ಸಹಾಯ

ಸಾಧಕರ ನಡವಳಿಕೆಯನ್ನು ನೋಡಿ ಮಹಾರಾಜರು ಅಲ್ಲಿನ ಆಡಳಿತ ಮಂಡಳಿಯವರಿಗೆ ಸನಾತನ ಸಂಸ್ಥೆಗಾಗಿ ಮೀಸಲಾಗಿಟ್ಟಿದ್ದ ಕೊಠಡಿಗಿಂತ ಹೆಚ್ಚುವರಿ ಕೊಠಡಿಯನ್ನು ಒದಗಿಸುವಂತೆ ಹೇಳಿದರು.

೩. ಮಹಾರಾಜರು ಸಾಧಕರ ಗುಣಗಳ ಬಗ್ಗೆ ಮಾಡಿರುವ ಸನ್ಮಾನ

ಅ. ಮಹಾರಾಜರು ತಮ್ಮ ಆಶ್ರಮದಲ್ಲಿರುವ ಕೆಲವು ಸನ್ಯಾಸಿಗಳಿಗೆ ಸನಾತನದ ಸಾಧಕರಿಂದ ಸಾಧನೆಯ ಸಂದರ್ಭದಲ್ಲಿ ಕಲಿಯಲು ಹೇಳಿದರು.

. ಮಹಾರಾಜರು ಸನಾತನದ ಸಾಧಕರಿಗೆ, “ಸ್ವಾಮಿ ಪ್ರಣವಾನಂದರ (‘ಭಾರತ ಸೇವಾಶ್ರಮ ಸಂಘದ ಸಂಸ್ಥಾಪಕ-ಸಂತರ) ನಿಜವಾದ ಕಾರ್ಯವನ್ನು ನೀವೇ ಮಾಡುತ್ತಿರುವಿರಿ” ಎಂದು ಹೇಳಿದರು.

– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ.

ಭಾದರಾ (ರಾಜಸ್ಥಾನ)ದ ಪ.ಪೂ. ತ್ರ್ಯಂಬಕೇಶ್ವರ ಚೈತನ್ಯ ಮಹಾರಾಜರು ಮತ್ತು ಪ.ಪೂ. ಗುಣಪ್ರಕಾಶಜಿ ಮಹಾರಾಜರು

ಪ.ಪೂ. ತ್ರ್ಯಂಬಕೇಶ್ವರ ಚೈತನ್ಯ ಮಹಾರಾಜರು

೧. ಸನಾತನದ ಸಾಧಕಿ ಕು. ಪೂನಮ್ ಚೌಧರಿ ಮತ್ತು ಇತರ ಸಾಧಕರು ತಮ್ಮ ಸೇವಾಭಾವ ಮತ್ತು ಸಾತ್ತ್ವಿಕ ಆಚರಣೆಯಿಂದ ಮಹಾರಾಜರ ಮನಸ್ಸನ್ನು ಗೆಲ್ಲುವುದು

ಭಾದರಾ (ರಾಜಸ್ಥಾನ)ದ ಪ.ಪೂ. ತ್ರ್ಯಂಬಕೇಶ್ವರ ಚೈತನ್ಯ ಮಹಾರಾಜರು ಮತ್ತು ಪ.ಪೂ. ಗುಣಪ್ರಕಾಶಜಿ ಮಹಾರಾಜರಿಗೆ ಸನಾತನ ಸಂಸ್ಥೆಯ ಪರಿಚಯವಾಯಿತು. ಸನಾತನದ ಸಾಧಕಿ ಕು. ಪೂನಮ್ ಚೌಧರಿ ಮತ್ತು ಇತರ ಸಾಧಕರ ಸೇವಾಭಾವ, ಸಾತ್ವಿಕ ನಡುವಳಿಕೆಯನ್ನು ನೋಡಿ ಇಬ್ಬರೂ ಮಹಾರಾಜರು ಪ್ರಭಾವಿತರಾದರು. ‘ಇಂತಹ ಸಾಧಕರನ್ನು ಸಿದ್ಧಗೊಳಿಸುವ ಗುರುಗಳು ಮತ್ತು ಅವರ ‘ಸನಾತನ ಸಂಸ್ಥೆ ಎಷ್ಟು ಶ್ರೇಷ್ಠವಾಗಿದೆ !’ ಎಂದು ಅವರು ಅನೇಕ ಸಲ ಹೇಳಿದರು.

೨. ಪ.ಪೂ. ಗುಣಪ್ರಕಾಶಜಿ ಮಹಾರಾಜರು ಸನಾತನದ ಸಾಧಕರ ಮೇಲೆ ಇಟ್ಟಿರುವ ವಿಶ್ವಾಸ !

ಪ.ಪೂ. ಗುಣಪ್ರಕಾಶಜಿ ಮಹಾರಾಜರು

ಪ.ಪೂ. ಗುಣಪ್ರಕಾಶಜಿ ಮಹಾರಾಜರು ಮಾಘ ಮೇಳ ಅಥವಾ ಇತರ ದೊಡ್ಡ ಕಾರ್ಯಕ್ರಮಗಳ ಪ್ರಸಂಗದಲ್ಲಿ ಅಲ್ಲಿಯ ವ್ಯವಸ್ಥೆಯನ್ನು ನೋಡಿಕೊಳ್ಳಲು ಸನಾತನದ ಸಾಧಕರನ್ನು ತಪ್ಪದೇ ಕರೆಸಿಕೊಳ್ಳುತ್ತಾರೆ. ಉಜ್ಜೈನ್ ಕುಂಭಮೇಳದ ನಿಯೋಜನೆಯ ಸೇವೆಗಾಗಿ ಕು. ಪೂನಮ್ ಚೌಧರಿಯವರು ಅವರ ಬಳಿಗೆ ಹೋಗಿದ್ದರು. ಕು. ಪೂನಮ ಇವರ ಸೇವಾಭಾವವನ್ನು ನೋಡಿದ ಮಹಾರಾಜರು ತಮ್ಮ ಅನ್ನದಾಸೋಹ ಗೃಹದ ಕೀಲಿಕೈಯನ್ನು ಸಹ ಪೂನಮ್ ಇವರಿಗೆ ನೀಡಿದ್ದರು.

– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ.

ಸನಾತನದ ಸಂತರಲ್ಲಿ ಪ್ರಾರ್ಥನೆ ಮತ್ತು ಸಾಧಕರಿಗೆ ಸೂಚನೆ 

ಧರ್ಮಪ್ರಚಾರದ ಸೇವೆಯನ್ನು ಮಾಡುವ ಸನಾತನದ ಸಂತರು ಮತ್ತು ಸಾಧಕರು ಸಮಾಜದಲ್ಲಿರುವ ವಿವಿಧ ಸಂತರ ದರ್ಶನಕ್ಕಾಗಿ ಅಥವಾ ಅವರ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾರೆ. ಆಗ ಸಮಾಜದಲ್ಲಿನ ಸಂತರ ವಿಷಯದಲ್ಲಿ ಮೇಲಿನ ಅನುಭವಗಳಿಗಿಂತ ವಿಭಿನ್ನ ರೀತಿಯ ಅನುಭವಗಳು ಬಂದಿದ್ದರೆ, ಅವರು ಅದನ್ನು ರಾಮನಾಥಿ ಆಶ್ರಮಕ್ಕೆ [email protected] ಈ ಗಣಕೀಯ ವಿಳಾಸಕ್ಕೆ ಕಳುಹಿಸಬೇಕು.

ಅಂಚೆ ವಿಳಾಸ : ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ- ೪೦೩೪೦೧

ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶಕ್ಕೆ ಸಾಧನೆಯನ್ನು ಮಾಡಿದ್ದರಿಂದ ಸನಾತನದ ಸಾಧಕರಲ್ಲಿ ಸಾಧಕತ್ವವು ನಿರ್ಮಾಣವಾಗಿರುವುದರಿಂದ ಸಮಾಜದಲ್ಲಿನ ಸಂತರಿಗೆ ಸನಾತನ ಸಂಸ್ಥೆಯ ಬಗ್ಗೆ ಪ್ರೇಮವೆನಿಸುವುದರ ಉದಾಹರಣೆಗಳು