ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು ?

ದೇವಿ ಪ್ರತಿಮೆಗೆ ಅನಾಮಿಕಾ ಬೆರಳಿನಿಂದ ಚಂದನವನ್ನು ಹಚ್ಚಿರಿ. ನಂತರ ಅರಿಶಿನ-ಕುಂಕುಮ ಅರ್ಪಿಸಿರಿ. ತೊಟ್ಟಿನ ಭಾಗವು ದೇವಿಯೆಡೆಗೆ ಬರುವಂತೆ ಹೂವನ್ನು ಅರ್ಪಿಸಿರಿ. ಸಾಧ್ಯವಿದ್ದಲ್ಲಿ ಹೂವಿನ ಮಾಲೆಯನ್ನು ಅರ್ಪಿಸಿರಿ. ದೇವಿಗೆ ಒಂದು ಅಥವಾ ಒಂಭತ್ತರ ಪಟ್ಟಿನ ಸಂಖ್ಯೆಯಲ್ಲಿ ಹೂವುಗಳನ್ನು ಅರ್ಪಿಸಿ

ನವರಾತ್ರ್ಯುತ್ಸವದಲ್ಲಿನ ಅಯೋಗ್ಯ ಪದ್ಧತಿಗಳನ್ನು ತಡೆಗಟ್ಟಿ ಉತ್ಸವದ ಪಾವಿತ್ರ್ಯತೆಯನ್ನು ಕಾಪಾಡಿ !

ಗರಬಾದ ನಿಮಿತ್ತದಿಂದ ವ್ಯಭಿಚಾರವೂ ನಡೆಯುತ್ತದೆ. ಪೂಜಾಸ್ಥಳದಲ್ಲಿ ತಂಬಾಕುಸೇವನೆ, ಮದ್ಯಪಾನ, ಧ್ವನಿಪ್ರದೂಷಣೆ ಮುಂತಾದ ಪದ್ಧತಿಗಳು ನಡೆಯುತ್ತವೆ. ಈ ಅಯೋಗ್ಯಪದ್ಧತಿಗಳೆಂದರೆ ಧರ್ಮ ಮತ್ತು ಸಂಸ್ಕೃತಿಯ ಹಾನಿಯಾಗಿದೆ. ಈ ಅಯೋಗ್ಯಪದ್ಧತಿಗಳನ್ನು ನಿಲ್ಲಿಸುವುದೆಂದರೆ ಕಾಲಾನುಸಾರ ಆವಶ್ಯಕವಾಗಿರುವ ಧರ್ಮಪಾಲನೆಯೇ ಆಗಿದೆ.

ಶಾರದೀಯ ನವರಾತ್ರಿ ವ್ರತವನ್ನು ಹೇಗೆ ಪಾಲಿಸಬೇಕು ?

ದೇವಿಯ ವ್ರತದಲ್ಲಿ ಕುಮಾರಿ ಪೂಜೆಯನ್ನು ಮಾಡುವುದು ಅತ್ಯಂತ ಆವಶ್ಯಕವೆಂದು ಪರಿಗಣಿಸಲಾಗಿದೆ. ಕ್ಷಮತೆಯಿದ್ದರೆ, ನವರಾತ್ರಿಯ ಕಾಲದಲ್ಲಿ ಪ್ರತಿದಿನ ಅಥವಾ ಮುಕ್ತಾಯದ ದಿನದಂದು ೯ ಜನ ಕುಮಾರಿಯರನ್ನು ದೇವಿಯ ರೂಪವೆಂದು ತಿಳಿದು ಅವರ ಚರಣಗಳನ್ನು ತೊಳೆದು ಅವರನ್ನು ಗಂಧ-ಪುಷ್ಪಾದಿಗಳಿಂದ ಪೂಜಿಸಬೇಕು

ಕರ್ನಾಟಕದಲ್ಲಿನ ಕೆಲವು ಪ್ರಸಿದ್ಧ ದೇವಿಯರ ಛಾಯಾಚಿತ್ರಮಯ ದರ್ಶನ !

ನಾಡ ದೇವತೆಯಾದ ಮೈಸೂರಿನ ಚಾಮುಂಡೇಶ್ವರಿ ದೇವಿ

ನವರಾತ್ರಿಯಲ್ಲಿ ಯಾವ ಜಪವನ್ನು ಮಾಡಬೇಕು ?

ಆದಿಶಕ್ತಿ ಶ್ರೀ ದುರ್ಗಾದೇವಿಯಿಂದ ಎಲ್ಲಾ ದೇವಿಯರ ನಿರ್ಮಿತಿಯಾಗಿದೆ. ನವರಾತ್ರಿಯ ಸಮಯದಲ್ಲಿ ವಾಯು ಮಂಡಲದಲ್ಲಿ ಶ್ರೀ ದುರ್ಗಾದೇವಿಯ ತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.

ದೇವಿಗೆ ಕುಂಕುಮಾರ್ಚನೆಯನ್ನು ಮಾಡುವುದರ ಮಹತ್ವ

ದೇವಿಯ ನಾಮಜಪವನ್ನು ಮಾಡುತ್ತಾ ಒಂದೊಂದು ಚಿಟಿಕೆಯಷ್ಟು ಕುಂಕುಮವನ್ನು ದೇವಿಯ ಚರಣಗಳಿಂದ ತಲೆಯವರೆಗೂ ಅರ್ಪಿಸಬೇಕು ಅಥವಾ ಕುಂಕುಮದ ಸ್ನಾನವನ್ನು ಮಾಡಿಸಬೇಕು

ನವರಾತ್ರಿಯ ಸಮಯದಲ್ಲಿ ಬಿಡಿಸಬೇಕಾದ ರಂಗೋಲಿಗಳು

ಈ ರಂಗೋಲಿಗಳನ್ನು ನವರಾತ್ರಿಯ ಸಮಯದಲ್ಲಿ ಇಲ್ಲಿ ನೀಡಿರುವಂತೆ ಹಾಕಬೇಕು .

ನವರಾತ್ರಿಯ ನಾಲ್ಕನೆ ದಿನ

ಆಶ್ವಯುಜ ಶುಕ್ಲ ಚತುರ್ಥಿಯು ನವರಾತ್ರಿಯ ನಾಲ್ಕನೇ ದಿನವಾಗಿದೆ. ಈ ದಿನ ದುರ್ಗೆಯ ನಾಲ್ಕನೇಯ ರೂಪದ ಅಂದರೆ ಕೂಷ್ಮಾಂಡಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳ ಉಪಾಸನೆಯಿಂದ ಎಲ್ಲ ರೀತಿಯ ರೋಗಗಳು ನಾಶವಾಗುತ್ತವೆ ಎಂದು ತಿಳಿಯಲಾಗುತ್ತದೆ.

ಅಖಂಡದೀಪ

ಯಾವ ಸ್ಥಾನದಲ್ಲಿ ದೀಪವನ್ನು ಸ್ಥಾಪನೆ ಮಾಡಬೇಕಾಗಿದೆಯೋ, ಆ ಭೂಮಿಯ ಮೇಲೆ ನೀರಿನ ತ್ರಿಕೋನವನ್ನು ಮಾಡುತ್ತಾರೆ.

ವಿಶ್ವಜನನಿ ಜಗದಂಬಾ ಮತ್ತು ನವರಾತ್ರಿಯ ವೈಶಿಷ್ಟ್ಯ !

ನವರಾತ್ರಿಯ ಸ್ಥಾಪನೆಗೆ ಘಟಸ್ಥಾಪನೆ (ಇದಕ್ಕೆ ದೇವರು ಕುಳಿತುಕೊಳ್ಳುವುದು) ಎನ್ನಲಾಗುತ್ತದೆ. ಘಟವನ್ನು ಸ್ಥಾಪಿಸಿದ ನಂತರ ಪ್ರತಿದಿನ ಹೊಸ ಮಾಲೆಯನ್ನು ಕಟ್ಟಬೇಕು. ಪ್ರತಿದಿನ ದೇವರ ನೈವೇದ್ಯಕ್ಕೆ ಸಿಹಿ ಪದಾರ್ಥವನ್ನು ತಯಾರಿಸಬೇಕು.