ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಅಂಜಲಿ ಗಾಡಗೀಳ ಇವರಿಂದ  ಸತ್ತ್ವಗುಣಿ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗುವುದು !

ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರುದ್ವಯರ ಅವತಾರಿ ಕಾರ್ಯವು ಈ ಯುದ್ಧಕ್ಕಷ್ಟೇ ಸೀಮಿತವಾಗಿಲ್ಲ, ಎಲ್ಲಿಯವರೆಗೆ ಶುದ್ಧ ಧರ್ಮಬೀಜ ಪೃಥ್ವಿಯ ಮೇಲೆ ಬರುವುದಿಲ್ಲವೋ, ಅಲ್ಲಿಯವರೆಗೆ ಅವತಾರಗಳು ಕಾರ್ಯನಿರತವಾಗಿರುತ್ತವೆ. ಹೇಗೆ ‘ಶ್ರೀರಾಮ ಮತ್ತು ರಾಮಾಯಣ, ಹೇಗೆ ‘ಶ್ರೀಕೃಷ್ಣ ಮತ್ತು ಗೀತಾ-ಭಾಗವತ, ಹಾಗೆಯೇ, ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನದ ಗ್ರಂಥಗಳಾಗಿವೆ.

ಆಪತ್ಕಾಲವು ಅಶಾಶ್ವತ, ಆದರೆ ‘ಪರಾತ್ಪರ ಗುರು ಡಾ. ಆಠವಲೆ,  ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ರೂಪದಲ್ಲಿ ಕಾರ್ಯನಿರತವಾಗಿರುವ ಗುರುತತ್ತ್ವವೇ ಶಾಶ್ವತ !

ಕೆಲವೊಮ್ಮೆ ಒಬ್ಬರೇ ಸಾಧಕರಿಗೆ ತೊಂದರೆಯಾಗುವ ಮೊದಲೇ ಮೂರೂ ಗುರುಗಳು ಅವರನ್ನು ಜಾಗರೂಕಗೊಳಿಸುತ್ತಾರೆ. ಇಂತಹ ಸಮಯದಲ್ಲಿ ಅವರ ಮನಸ್ಸಿನಲ್ಲಿ ಆ ಸಾಧಕರ ನೆನಪಾಗಿ ಅವರು ಆ ಸಾಧಕನಿಗೆ ಇಂತಹ ಸ್ಥಳದಲ್ಲಿ ಸೇವೆಗೆ ಹೋಗುವಾಗ ಜಾಗರೂಕ ಇರಲು ಮತ್ತು ಎಲ್ಲ ನಾಮಜಪಾದಿ ಉಪಾಯ ಮಾಡಲು ಸೂಚಿಸಿದಂತಹ ಅನೇಕ ಪ್ರಸಂಗಗಳು ನೋಡಲು ಸಿಕ್ಕಿದವು.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಸತ್ಯ ಸನಾತನ ಧರ್ಮದ ಉತ್ಸವ !

ಶ್ರೀ ಗುರುಗಳ ಜನ್ಮೋತ್ಸವವು ಸ್ಥೂಲದಲ್ಲಿ ಆಚರಿಸುವ ಮೊದಲು ಅದು ಶಿಷ್ಯನ ಮನಸ್ಸಿನಲ್ಲಿ ಆಚರಣೆಯಾಗುತ್ತಿರುತ್ತದೆ. ಶಿಷ್ಯನ ಮನಸ್ಸು ಆ ಆನಂದದಲ್ಲಿ ಮುಳುಗುತ್ತಿರುತ್ತದೆ. ಅವನಿಗೆ ಏನಾದರೂ ಮಾಡಿ ‘ನಾವು ಈ ಆನಂದವನ್ನು ವ್ಯಕ್ತಪಡಿಸಬೇಕು’, ಎಂದೆನಿಸುತ್ತದೆ. ಅವನ ಮನಸ್ಸಿನಲ್ಲಿ ತುಂಬಿಕೊಂಡ ಈ ಆನಂದವು ಮುಂದೆ ಈ ‘ಉತ್ಸವದ’ ರೂಪವನ್ನು ಧಾರಣೆ ಮಾಡುತ್ತದೆ.

ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !

ಪರಾತ್ಪರ ಗುರು ಡಾ. ಆಠವಲೆಯವರು ಆರಂಭಿಸಿದ ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗಿರುವ ಸಾಧಕರಿಗೆ ಈ ಮಾಧ್ಯಮದಿಂದ ಆಶೀರ್ವಾದವು ಸಿಕ್ಕಿದೆ. ಅದರ ಜೊತೆಗೆ ಪರಾತ್ಪರ ಗುರು ಡಾ. ಆಠವಲೆಯವರು ಸತತವಾಗಿ ಸಾಧಕರ ಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಿರುವುದರಿಂದ ಸಾಧಕರಿಗೆ ಸಾಧನೆ ಮಾಡಲು ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ಸಿಕ್ಕಿದೆ.

ಏಕಮೇವಾದ್ವಿತೀಯ ಗ್ರಂಥಗಳ ಲೇಖನದ ಕಾರ್ಯವನ್ನು ಮಾಡುವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಇಲ್ಲಿಯವರೆಗೆ ಜಗತ್ತಿನಲ್ಲಿ ಕೆಲವು ಸಂತರ ‘ಅಧ್ಯಾತ್ಮ’ದ ಬಗೆಗಿನ ಕೆಲವು ಗ್ರಂಥಗಳು ಕೆಲವು ಭಾಷೆಗಳಲ್ಲಿ ಮಾತ್ರ ಪ್ರಕಟಗೊಂಡಿವೆ. ತದ್ವಿರುದ್ಧ ಕೇವಲ ೨೦ ವರ್ಷಗಳಲ್ಲಿ (ಏಪ್ರಿಲ್ ೨೦೨೧ ರ ವರೆಗೆ) ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಂದ ವಿವಿಧ ವಿಷಯಗಳ ೩೩೭ ಗ್ರಂಥಗಳು ಪ್ರಕಟವಾಗಿವೆ.