ಪ್ರತಿಯೊಬ್ಬ ಹಿಂದೂವಿನ ಹೃದಯದಲ್ಲಿ ರಾಮಮಂದಿರ ಸ್ಥಾಪನೆಯಾಗಲು ‘ಗುರುಕೃಪಾಯೋಗಾನುಸಾರ’ ಸಾಧನೆಯನ್ನು ಹೇಳಿ ಅದರಂತೆ ಸಾಧಕರಿಂದ ಕೃತಿಯನ್ನು ಮಾಡಿಸಿಕೊಳ್ಳುವ ಪರಾತ್ಪರ ಗುರು ಡಾ. ಆಠವಲೆ !

“ಸದ್ಯ ದೇಶದಲ್ಲಿ ಅನೇಕ ದೇವಸ್ಥಾನಗಳಿವೆ. ದೇವಸ್ಥಾನಗಳನ್ನು ಕಟ್ಟುವ ಮೊದಲು ‘ದೇವಸ್ಥಾನಗಳ ರಕ್ಷಣೆ, ವ್ಯವಸ್ಥಾಪನೆ ಮತ್ತು ದೇವಸ್ಥಾನವನ್ನು ಕಟ್ಟುವ ಉದ್ದೇಶವನ್ನು ಹೇಗೆ ಸಾರ್ಥಕಗೊಳಿಸಬಹುದು ?’, ಎಂಬುದನ್ನು ನೋಡಬೇಕು” ಎಂದು ಹೇಳಿದರು.

ಗುರುಮಂತ್ರದ ಮಹತ್ವವನ್ನು ಗಮನದಲ್ಲಿಡದೇ ಗುರುಗಳ ದೇಹದ ಹೆಸರಿನಲ್ಲಿ ಸಿಲುಕುವ ಶಿಷ್ಯರು !

‘ಗುರುಗಳು ಶಿಷ್ಯನ ಉದ್ಧಾರಕ್ಕಾಗಿ ಶಿಷ್ಯನ ಅವಶ್ಯಕತೆಗನುಸಾರ ಗುರುಮಂತ್ರವೆಂದು ಯಾವುದಾದರೊಂದು ದೇವತೆಯ ನಾಮ ಜಪವನ್ನು ಮಾಡಲು ಹೇಳುತ್ತಾರೆ. ಈ ನಾಮಜಪವು ಆ ಸಾಧಕನ ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರುತ್ತದೆ, ಹಾಗೆಯೇ ಆ ಜಪದ ಹಿಂದೆ ಗುರುಗಳ ಸಂಕಲ್ಪವೂ ಕಾರ್ಯನಿರತವಾಗಿರುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು

ಆಧ್ಯಾತ್ಮಿಕ ಮಟ್ಟದ ಮಹತ್ವ ‘ಉಚ್ಚ ಆಧ್ಯಾತ್ಮಿಕ ಮಟ್ಟವಿದ್ದರೆ, ರಜ -ತಮಗಳ ಪರಿಣಾಮವಾಗುವುದಿಲ್ಲ. ಬದಲಾಗಿ ಉಚ್ಚ ಆಧ್ಯಾತ್ಮಿಕ ಮಟ್ಟದಿಂದ ನಿರ್ಮಾಣವಾದ ಚೈತನ್ಯದಿಂದ ರಜ-ತಮಗಳ ಮೇಲೆ ಪರಿಣಾಮ ವಾಗುತ್ತದೆ ಮತ್ತು ರಜ-ತಮ ಕಡಿಮೆಯಾಗುತ್ತವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡಬೇಕಿದ್ದರೆ, ಭಾರತ ಬಿಟ್ಟು ಬೇರೆ ಯಾವುದೇ ದೇಶದಲ್ಲಿ ರಬೇಡಿ; ಏಕೆಂದರೆ ಭಾರತೀಯರ ಸ್ಥಿತಿ ಸರಿಯಿರದಿದ್ದರೂ, ಭಾರತ ದಂತಹ ಸಾತ್ತ್ವಿಕ ದೇಶ ವಿಶ್ವದಲ್ಲಿ ಎಲ್ಲಿಯೂ ಇಲ್ಲ. ಬೇರೆ ಎಲ್ಲಾ ದೇಶಗಳಲ್ಲಿ ರಜ-ತಮದ ಪ್ರಮಾಣ ಅತ್ಯಧಿಕವಾಗಿದೆ; ಆದರೂ ಶೇ. ೫೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಯು ಜಗತ್ತಿನಲ್ಲಿ ಎಲ್ಲಿಯೂ ಇದ್ದು ಸಾಧನೆ ಮಾಡಬಹುದು !

ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಮಾಡಬೇಕಾದ ಪ್ರಯತ್ನಗಳು !

ಸಾಧ್ಯವಾದಷ್ಟು ಸಮಷ್ಟಿಯಲ್ಲಿದ್ದು ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರಯತ್ನಿಸಿ ನಮ್ಮ ತಪ್ಪುಗಳ ಕಡೆಗೆ ಸತತ ಗಮನಕೊಟ್ಟರೆ ಬೇಗ ಗುರುಕೃಪೆಯಾಗಲು ಸಾಧ್ಯವಾಗುತ್ತದೆ. ಅದರಿಂದ ಮನೋಲಯ ಮತ್ತು ಬುದ್ಧಿಲಯವಾಗುವುದರಿಂದ ಬೇಗನೆ ದೇವರಪ್ರಾಪ್ತಿಯಾಗುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು

`ಜೀವನದ ಈ ಸಾಧನೆಯ ಪ್ರಯಾಣದಲ್ಲಿ ಎಲ್ಲಿ ದೇವರು ಸಿಗುತ್ತಾನೆಯೋ, ಅಲ್ಲಿ ಇತರ ಇನ್ನೇನನ್ನು ಪಡೆಯುವ ಆಸೆ-ಆಕಾಂಕ್ಷೆಗಳು ಉಳಿಯುವುದಿಲ್ಲ. ದೇವರ ಈ ವಿಶ್ವವು ತುಂಬಾ ಸುಂದರ ಮತ್ತು ಅದ್ಭುತವಾಗಿದೆ. ಅದರಲ್ಲಿ ಏಕರೂಪವಾದರೆ, ಯಾವುದರ ನೆನಪು ಸಹ ಬರುವುದಿಲ್ಲ.

ಭಾರತದಲ್ಲಿ ಸಮಾನ ನಾಗರಿಕ ಕಾನೂನು ಬರಲಿದೆ ! – ಶ್ರೀ ಹಾಲಸಿದ್ಧನಾಥ ದೇವರ ಭವಿಷ್ಯವಾಣಿ

ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಕುರ್ಲಿಯ ಶ್ರೀ ಹಾಲಸಿದ್ದನಾಥ ದೇವರ ಭಕ್ತರಿಗೆ ಭವಿಷ್ಯವಾಣಿಯಿಂದ ಆಶೀರ್ವಚನ
ಬಡಜನರು ಗುಡಿ ಗೋಪುರ ಕಟ್ಟುವರು !

ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ಕರ್ವೆಮಾಮಾ ಇವರಿಂದ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಅವರು ಮಾಡಿದ ಮಾರ್ಗದರ್ಶನ !

ನಾವು ದಿನವಿಡೀ `ನಾನು, ನನ್ನದು’ ಹೇಳುತ್ತಿರುತ್ತೇವೆ. ಅದರ ಬದಲು `ಈಶ್ವರ, ಈಶ್ವರನದು’ ಎಂದು ಹೇಳಿದರೆ ನಮ್ಮಿಂದ ಈಶ್ವರನ ಎಷ್ಟೋ ಸ್ಮರಣೆಯಾಗುತ್ತದೆ ! ನಾವು ಈಶ್ವರನ ಅಖಂಡ ಸ್ಮರಣೆ ಮಾಡಬೇಕು ಎಂದರು ಪೂ. ಕರ್ವೆ ಮಾಮಾನವರ

ಸಾಧಕರೇ, `ವ್ಯಷ್ಟಿ ಸಾಧನೆಯ ವರದಿ ಕೊಡುವುದು, ಇದು ಆತ್ಮನಿವೇದನ ಭಕ್ತಿಯಾಗಿದೆ’, ಎಂದರಿತು ನಿಯಮಿತವಾಗಿ ವರದಿಯನ್ನು ಕೊಟ್ಟು ಸಾಧನೆಯ ಫಲಶೃತಿಯನ್ನು ಹೆಚ್ಚಿಸಿ !

ವರದಿ ಕೊಡುವುದು, ಎಂದರೆ ಸಾಧನೆಯ ಪ್ರಯತ್ನಗಳನ್ನು ಇದ್ದ ಹಾಗೆಯೇ ಪ್ರಾಮಾಣಿಕವಾಗಿ ಸಂತರಿಗೆ ಅಥವಾ ಜವಾಬ್ದಾರ ಸಾಧಕರಿಗೆ ನಿಯಮಿತವಾಗಿ ಆತ್ಮನಿವೇದನೆಯ ಸ್ವರೂಪದಲ್ಲಿ ಹೇಳುವುದು.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ ಇವರ ಅಮೃತವಚನಗಳು

‘ಉನ್ನತರು ಒಂದೇ ಪ್ರಶ್ನೆಯನ್ನು ಅನೇಕ ಬಾರಿ ಕೇಳಿದರೂ ಶಿಷ್ಯನು ಪ್ರತಿಯೊಂದು ಸಮಯದಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದೇ ಆಜ್ಞಾಪಾಲನೆ ಎಂದು ನಮ್ರತೆಯಿಂದ ಉತ್ತರ ಕೊಟ್ಟರೆ ಮಾತ್ರ ಅವನು ಉತ್ತಮ ಶಿಷ್ಯನು. ಇದರಿಂದ ಶಿಷ್ಯನ ಮನೋಲಯವಾಗಲು ಸಹಾಯವಾಗುತ್ತದೆ’.