ಚೈತ್ರ ನವರಾತ್ರಿಯ ಸಮಯದಲ್ಲಿ ಮುಸ್ಲಿಮರು ಅಂಗಡಿಗಳನ್ನು ತೆರೆಯವುದನ್ನು ನಿಷೇಧಿಸಿ !

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ತದಲ್ಲಿ ಪತ್ರ ಬರೆದ ಹಿಂದುತ್ವವಾದಿ ನಾಯಕ ದಿನೇಶ್ ಶರ್ಮಾ ಫಲಾಹಾರಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಮಾರ್ಚ್ 28 ರಂದು ಚೈತ್ರ ನವರಾತ್ರಿ ಪ್ರಾರಂಭವಾಗುತ್ತಿದ್ದಂತೆ, ಹಿಂದುತ್ವ ನಿಷ್ಠ ನಾಯಕ ದಿನೇಶ್ ಶರ್ಮಾ ಫಲಾಹಾರಿ ಅವರು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ತದಲ್ಲಿ ಪತ್ರ ಬರೆದು, ನವರಾತ್ರಿಯ ಅವಧಿಯಲ್ಲಿ ಮುಸ್ಲಿಂ ಅಂಗಡಿಗಳನ್ನು ಮುಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.

ಫಲಾಹಾರಿ ಮುಂದೆ ಮಾತನಾಡಿ, ಮುಸ್ಲಿಮರು ದೇವಾಲಯಗಳ ಸುತ್ತಲೂ ಅಂಗಡಿಗಳನ್ನು ಹಾಕುತ್ತಾರೆ ಮತ್ತು ಮಣಿಕಟ್ಟಿನ ಸುತ್ತಲೂ ದಾರವನ್ನು ಕಟ್ಟುತ್ತಾರೆ. ಅವರು ಪ್ರಸಾದದಲ್ಲಿ ಉಗುಳುತ್ತಾರೆ ಮತ್ತು ಲವ್ ಜಿಹಾದ್ ಅನ್ನು ಉತ್ತೇಜಿಸುತ್ತಾರೆ. ಅವರು ಹಿಂದೂಗಳ ಪವಿತ್ರ ಧರ್ಮವನ್ನು ದ್ವೇಷಿಸುತ್ತಾರೆ, ಹಬ್ಬಗಳನ್ನು ದ್ವೇಷಿಸುತ್ತಾರೆ, ಹಿಂದೂಗಳನ್ನು ದ್ವೇಷಿಸುತ್ತಾರೆ. ಹಿಂದೂ ಹೃದಯ ಸಾಮ್ರಾಟ್ ಯೋಗಿ ಆದಿತ್ಯನಾಥ್ ಅವರಲ್ಲಿ ನಾವು ವಿನಂತಿಸುವುದೇನೆಂದರೆ, ನವರಾತ್ರಿ ಆಚರಣೆಯ 9 ದಿನಗಳ ಕಾಲ ಮುಸಲ್ಮಾನರನ್ನು ದೂರ ಇಡಬೇಕು ಎಂದು ಫಲಾಹಾರಿ ಆಗ್ರಹಿಸಿದರು.

ಸಂಪಾದಕೀಯ ನಿಲುವು

ಇತ್ತೀಚೆಗೆ ನಡೆದ ಮಹಾಕುಂಭ ಪರ್ವದ ಸ್ಥಳದಲ್ಲಿ ಆಡಳಿತ ಮಂಡಳಿಯು ಇದೇ ರೀತಿಯ ನಿಷೇಧ ಹೇರಿತ್ತು, ಹಾಗಾಗಿ ಸರಕಾರಕ್ಕೆ ಇದು ಅಸಾಧ್ಯವೇನಲ್ಲ!