ಹಿಂದೂ ವಿದ್ಯಾರ್ಥಿಯ ದೂರಿನ ನಂತರ ವಿಶ್ವವಿದ್ಯಾಲಯದಿಂದ ಸ್ಪಷ್ಟನೆ
ನವದೆಹಲಿ – ಅಮೇರಿಕಾದ ಹ್ಯೂಸ್ಟನ್ ವಿಶ್ವವಿದ್ಯಾಲಯದಲ್ಲಿ ‘ಲಿವ್ಡ್ ಹಿಂದೂ ರಿಲಿಜನ್’ ಎಂಬ ಪಠ್ಯಕ್ರಮವನ್ನು ಕಲಿಸಲಾಗುತ್ತಿದೆ. ಈ ಪಠ್ಯಕ್ರಮದಲ್ಲಿ ಹಿಂದೂಗಳನ್ನು ತಪ್ಪಾಗಿ ಬಿಂಬಿಸದ್ದರಿಂದ ಹಿಂದೂ ವಿದ್ಯಾರ್ಥಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ನಂತರ, ಹ್ಯೂಸ್ಟನ್ ವಿಶ್ವವಿದ್ಯಾಲಯವು ಸ್ಪಷ್ಟನೆ ನೀಡಿದೆ. ವಿಶ್ವವಿದ್ಯಾಲಯವು, ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯತೆ ನೀಡುತ್ತದೆ ಮತ್ತು ಶಿಕ್ಷಕರಿಗೆ ಸಂಕೀರ್ಣ ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ, ಎಂದು ಹೇಳಿದೆ.
೧. ವಸಂತ ಭಟ ಎಂಬ ವಿದ್ಯಾರ್ಥಿಯು ಪಠ್ಯಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅದನ್ನು ‘ಹಿಂದೂಫೋಬಿಕ್’ (ಹಿಂದೂದ್ವೇಷಿ) ಎಂದು ಕರೆದರು. ನಂತರ, ವಿಶ್ವವಿದ್ಯಾಲಯವು ತನ್ನ ನಿಲುವನ್ನು ಮಂಡಿಸಿತು. ವಿಶ್ವವಿದ್ಯಾಲಯದ ಅಧಿಕಾರಿ ಮತ್ತು ಧಾರ್ಮಿಕ ಅಧ್ಯಯನ ವಿಭಾಗದ ನಿರ್ದೇಶಕರು ಪಠ್ಯಕ್ರಮವನ್ನು ಪರಿಶೀಲಿಸಿದರು ಮತ್ತು ಈ ವಿಷಯದ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರು.
೨. ಈ ಪಠ್ಯಕ್ರಮವನ್ನು ಕಲಿಸುವ ಪ್ರಾಧ್ಯಾಪಕ ಆರನ್ ಮೈಕೆಲ್ ಉಲೆರಿ, ಹಿಂದೂ ಧರ್ಮದ ವಿವಿಧ ರೂಪಗಳನ್ನು ವಿವರಿಸುವುದು ತಮ್ಮ ಉದ್ದೇಶ ಎಂದು ಹೇಳಿದರು. ಹಿಂದೂ ಧರ್ಮವು ಅನೇಕ ವಿಭಿನ್ನ ಸಂಪ್ರದಾಯಗಳು ಮತ್ತು ಶ್ರದ್ಧೆಗಳ ಸಮ್ಮಿಲನವಾಗಿದೆ. ಪ್ರಾಚೀನ ಕಾಲದಲ್ಲಿ ಭಾರತೀಯ ಸಂಸ್ಕೃತ ಸಾಹಿತ್ಯದಲ್ಲಿ ‘ಹಿಂದೂ’ ಪದವು ಕಂಡುಬಂದಿರಲಿಲ್ಲ; ಆದರೆ ಅದು ಭೌಗೋಳಿಕ ಮತ್ತು ಸಾಂಸ್ಕೃತಿಕ ಗುರುತಾಗಿ ವಿಕಸನಗೊಂಡಿತು. 1922 ರಲ್ಲಿ ‘ಹಿಂದುತ್ವ’ವು ರಾಜಕೀಯ ಸಿದ್ಧಾಂತವಾಗಿ ಹೊರಹೊಮ್ಮಿತು ಮತ್ತು ಅದರ ಐತಿಹಾಸಿಕ ಅಂಶಗಳನ್ನು ಪಠ್ಯಕ್ರಮದಲ್ಲಿ ಸರಿಯಾಗಿ ಕಲಿಸಲಾಗುತ್ತದೆ, ಎಂದು ಹೇಳಿದರು.
ಏನು ಈ ಪ್ರಕರಣ ?
ಹ್ಯೂಸ್ಟನ್ ವಿಶ್ವವಿದ್ಯಾಲಯದ ‘ಲಿವ್ಡ್ ಹಿಂದೂ ರಿಲಿಜನ್’ ಪಠ್ಯಕ್ರಮ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ, ಇದರಲ್ಲಿ ಪ್ರಾಧ್ಯಾಪಕ ಆರನ್ ಮೈಕೆಲ್ ಉಲೆರಿ ಪ್ರತಿ ವಾರ ಆನ್‌ಲೈನ್ ಉಪನ್ಯಾಸಗಳನ್ನು ನೀಡುತ್ತಾರೆ. ವಸಂತ ಭಟ ಇದೇ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿದ್ದಾರೆ. ಅವರು ‘ಕಾಲೇಜ್ ಆಫ್ ಲಿಬರಲ್ ಆರ್ಟ್ಸ್ ಅಂಡ್ ಸೋಶಿಯಲ್ ಸೈನ್ಸಸ್’ನ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಭಟ ಪ್ರಕಾರ, ಪ್ರಾಧ್ಯಾಪಕ ಉಲೆರಿ ಹಿಂದೂ ಧರ್ಮವು ಪ್ರಾಚೀನ ಮತ್ತು ಜೀವಂತ ಧರ್ಮವಲ್ಲ, ಆದರೆ ರಾಜಕೀಯ ಅಸ್ತ್ರ ಎಂದು ಹೇಳಿದ್ದಾರೆ. ಹಿಂದೂ ರಾಷ್ಟ್ರವಾದಿಗಳು ಅದನ್ನು ಅಸ್ತ್ರವಾಗಿ ಬಳಸುತ್ತಾರೆ. ಇದು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವ್ಯವಸ್ಥೆಯಾಗಿದೆ. ಮತ್ತು ‘ಹಿಂದೂ ಧರ್ಮವು ಪ್ರಾಚೀನವಾಗಿದೆ’ ಎಂಬ ಸತ್ಯವನ್ನು ಸಹ ನಿರಾಕರಿಸಲಾಗಿದೆ.
ಭಟ ಇದಕ್ಕೆ ಪುರಾವೆಗಳನ್ನು ಸಹ ನೀಡಿದ್ದಾರೆ. ಈ ಪಠ್ಯಕ್ರಮದಲ್ಲಿ ‘ಹಿಂದೂ’ ಪದವು ಆಧುನಿಕವಾಗಿದೆ ಮತ್ತು ಧರ್ಮಗ್ರಂಥಗಳಲ್ಲಿ ಕಂಡುಬರುವುದಿಲ್ಲ ಎಂದು ಹೇಳಲಾಗಿದೆ. ಹಿಂದುತ್ವ ಅಥವಾ ಹಿಂದುತ್ವನಿಷ್ಠ ಎಂಬ ಪದವನ್ನು ಹಿಂದೂ ರಾಷ್ಟ್ರೀಯವಾದಿಗಳು ತಮ್ಮ ಧರ್ಮದ ವೈಶಿಷ್ಟ್ಯವನ್ನು ತೋರಿಸಲು ಮತ್ತು ಇತರರನ್ನು, ವಿಶೇಷವಾಗಿ ಇಸ್ಲಾಂವನ್ನು ಕೆಟ್ಟದಾಗಿ ಬಿಂಬಿಸಲು ಬಳಸುತ್ತಾರೆ. ಹಿಂದೂ ಧರ್ಮವು ಭಾರತದ ಅಧಿಕೃತ ಧರ್ಮವಾಗಿರಬೇಕು ಎಂದು ಈ ಜನರು ನಂಬುತ್ತಾರೆ.
🇺🇸 Houston University Faces Hinduphobia Allegations Over Hinduism Course
An Indian-American student alleges the course misrepresents Hinduism and labels PM Modi a "Hindu fundamentalist"
The university defends its curriculum, emphasizing adherence to academic standards and… pic.twitter.com/unluiY6maB
— Sanatan Prabhat (@SanatanPrabhat) March 29, 2025
ಸಂಪಾದಕೀಯ ನಿಲುವುವಿದೇಶಿ ವಿಶ್ವವಿದ್ಯಾಲಯದಲ್ಲಿ ಹಿಂದೂ ಧರ್ಮದ ಬಗ್ಗೆ ಶಿಕ್ಷಣ ನೀಡುತ್ತಿರುವುದು ಹಿಂದೂಗಳಿಗೆ ಸಂತೋಷ ತಂದಿದೆ; ಆದರೆ ವಾಸ್ತವದಲ್ಲಿ ಅದು ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತದೆ. ಆದ್ದರಿಂದ, ಅಂತಹ ವಿಶ್ವವಿದ್ಯಾಲಯಗಳು ಈಗ ಭಾರತದಿಂದ ಪಠ್ಯಕ್ರಮವನ್ನು ಪರಿಶೀಲಿಸುವ ಕಾನೂನನ್ನು ರೂಪಿಸಬೇಕು! |