ಮಧ್ಯಪ್ರದೇಶ : ಶ್ರೀ ರಾಮ ನವಮಿ ಮತ್ತು ಚೈತ್ರ ನವರಾತ್ರಿಯ ನಿಮಿತ್ತ ಹಾಕಲಾಗಿದ್ದ ಕೇಸರಿ ಧ್ವಜಗಳನ್ನು ತೆಗೆದ ಪುರಸಭೆ!

ಪುರಸಭೆ ಆಯುಕ್ತರ ಮುಖಕ್ಕೆ ಕಪ್ಪು ಮಸಿ ಬಳಿದ ಹಿಂದುತ್ವನಿಷ್ಠರು

ದಮೋಹ (ಮಧ್ಯಪ್ರದೇಶ) – ಮಾರ್ಚ್ 29 ರ ಬೆಳಿಗ್ಗೆ, ಹಿಂದೂ ಸಂಘಟನೆಗಳ ಕೆಲ ಯುವಕರು ಪುರಸಭೆಯ ಮುಖ್ಯ ಆಯುಕ್ತ ಪ್ರದೀಪ್ ಶರ್ಮಾ ಅವರ ಮುಖಕ್ಕೆ ಕಪ್ಪು ಮಸಿ ಹಚ್ಚಿದರು. ಶ್ರೀ ರಾಮ ನವಮಿ ಮತ್ತು ಚೈತ್ರ ನವರಾತ್ರಿಗಾಗಿ ಅಲ್ಲಿನ ಚೌಕದಲ್ಲಿರುವ ಗಂಟೆ ಗೋಪುರದ ಮೇಲೆ ಹಾರಿಸಲಾದ ಕೇಸರಿ ಧ್ವಜಗಳನ್ನು ತೆಗೆದುಹಾಕಲು ಶರ್ಮಾ ಆದೇಶಿಸಿದ್ದರು. ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಪುರಸಭೆಯ ಅಧಿಕಾರಿಗಳು ಕೇಸರಿ ಧ್ವಜಗಳನ್ನು ತೆಗೆಯಲು ಪ್ರಾರಂಭಿಸಿದಾಗ, ಹಿಂದೂ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಾ ಅಧಿಕಾರಿಗಳನ್ನು ತಡೆದರು, ಅಲ್ಲದೇ ರಸ್ತೆಯನ್ನು ತಡೆದು ಮುಖ್ಯ ಆಯುಕ್ತರಾದ ಶರ್ಮಾ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಮಾಜಿ ಕಾರ್ಪೊರೇಟರ್ ವಿವೇಕ್ ಅಗರ್ವಾಲ್ ಮತ್ತು ಛೋಟು ಯಾದವ್ ಅವರು ಶರ್ಮಾ ಅವರ ಮನೆಗೆ ಹೋಗಿ ಅವರ ಮುಖಕ್ಕೆ ಕಪ್ಪು ಮಸಿ ಬಳಿದರು.

ಜಿಲ್ಲಾಧಿಕಾರಿ ಸುಧೀರ್ ಕೊಚರ್ ಅವರು ಇಡೀ ಘಟನೆಯನ್ನು “ದುರದೃಷ್ಟಕರ” ಎಂದು ಹೇಳಿದ್ದು ಈ ಘಟನೆಯ ತನಿಖೆ ಮಾಡುವಂತೆ ಆದೇಶಿಸಿದ್ದಾರೆ.