ವಿಷಯಾಸಕ್ತ ಮನಸ್ಸನ್ನು ಭಗವಂತನ ನಾಮದಿಂದ ಶುದ್ಧಗೊಳಿಸಿ ಆನಂದ ಮತ್ತು ಶಾಂತಿಯನ್ನು ಅನುಭವಿಸೋಣ !
ಮೊದಲು ನಮಗೆ ನಮ್ಮ ಮೇಲೆ ವಿಶ್ವಾಸವಿರಬೇಕು ಮತ್ತು ನಂತರವೇ ನಾವು ಈಶ್ವರನ ಮೇಲೆ ಶ್ರದ್ಧೆಯನ್ನಿಡಬಹುದು. ನಾವು ಯಾವುದಾದರೊಂದು ವ್ಯಕ್ತಿಯ ಮೇಲೆ ನಂಬಿಕೆ ಇಡುತ್ತೇವೆ; ಆದರೆ ಈಶ್ವರನನ್ನು ನಂಬುವುದಿಲ್ಲ. ನಮ್ಮ ಜೀವನದಲ್ಲಿ ಅನುಕೂಲ ವಿಷಯ ಘಟಿಸಿದಾಗ ನಾವು ಈಶ್ವರನ ಮೇಲೆ ವಿಶ್ವಾಸ ಇಡುತ್ತೇವೆ ಮತ್ತು ಆನಂದಿಯಾಗುತ್ತೇವೆ.