Earthquake Astrology : ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿನ ಭೂಕಂಪನದ ಬಗ್ಗೆ 3 ವಾರಗಳ ಹಿಂದೆಯೇ ಭವಿಷ್ಯ ನುಡಿದಿದ್ದ 20 ವರ್ಷದ ಯುವ ಜ್ಯೋತಿಷಿ ಅಭಿಜ್ಞ ಆನಂದ

ಅಭಿಜ್ಞ ಆನಂದ, ಜ್ಯೋತಿಷಿ

ನವದೆಹಲಿ – ಇತ್ತೀಚೆಗೆ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಪ್ರಬಲ ಭೂಕಂಪನ ಸಂಭವಿಸಿತು. ಈ ಭೂಕಂಪನದ ಬಗ್ಗೆ 20 ವರ್ಷದ ಅಭಿಜ್ಞ ಆನಂದ ಎಂಬ ಯುವ ಜ್ಯೋತಿಷಿ 3 ವಾರಗಳ ಹಿಂದೆಯೇ ಭವಿಷ್ಯ ನುಡಿದ್ದರು. ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ಮಾರ್ಚ್ 1 ರಂದು ಈ 2 ದೇಶಗಳಲ್ಲಿ ಭೂಕಂಪನ ಸಂಭವಿಸಲಿದೆ’ ಎಂದು ಹೇಳಿದ್ದರು. ಈ ಭವಿಷ್ಯದ ನಂತರ ಕೆಲವೇ ವಾರಗಳಲ್ಲಿ ಅವರ ಭೂಕಂಪದ ಭವಿಷ್ಯ ನಿಜವಾಗಿದೆ.

ಅಭಿಜ್ಞ ಆನಂದ ಯಾರು?

20 ವರ್ಷದ ಅಭಿಜ್ಞ ಆನಂದ ಅವರು 11 ನೇ ವಯಸ್ಸಿನಿಂದ ಜ್ಯೋತಿಷ್ಯವನ್ನು ಕಲಿಯಲು ಪ್ರಾರಂಭಿಸಿದರು. ಅವರು ಮೂಲತಃ ಮೈಸೂರಿನವರಾಗಿದ್ದಾರೆ. ಅವರು ಅತ್ಯಂತ ಕಿರಿಯ ವಯಸ್ಸಿನ ಜ್ಯೋತಿಷಿ. ಅವರು 7 ನೇ ವಯಸ್ಸಿನಲ್ಲಿ ಭಗವದ್ಗೀತೆಯನ್ನು ಬಾಯಿಪಾಠ ಮಾಡಿದ್ದಾರೆ. ಅವರು ಬಾಲ್ಯದಿಂದಲೂ ಸಂಸ್ಕೃತ ಭಾಷೆಯನ್ನು ಕಲಿಯುತ್ತಿದ್ದಾರೆ. ಅಭಿಜ್ಞ ಆನಂದ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಅದರಲ್ಲಿ ಅವರು ಅನೇಕ ವೀಡಿಯೊಗಳನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಅನೇಕ ಭವಿಷ್ಯವಾಣಿಗಳನ್ನು ಮಾಡಿದ್ದಾರೆ.

ಜ್ಯೋತಿಷ್ಯ ಮತ್ತು ಸಂಸ್ಕೃತವನ್ನು ಕಲಿಯಲು ಶ್ರೀಕೃಷ್ಣ ಮಾರ್ಗದರ್ಶನ ಮಾಡಿದನು!

ಟಿವಿ 9 ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜ್ಯೋತಿಷ್ಯ ಮತ್ತು ಸಂಸ್ಕೃತವನ್ನು ಕಲಿಯುವ ಮಾರ್ಗವನ್ನು ಆಯ್ಕೆ ಮಾಡಲು ಭಗವಾನ್ ಶ್ರೀಕೃಷ್ಣನು ಮಾರ್ಗದರ್ಶನ ಮಾಡಿದ್ದಾನೆ ಎಂದು ಅವರು ಹೇಳಿದರು. ‘ಪ್ರಾಜನಾ ಜ್ಯೋತಿಷ್ಯ’ ಎಂಬ ತಮ್ಮದೇ ಆದ ಸಂಸ್ಥೆಯ ಮೂಲಕ ಅವರು 1 ಸಾವಿರದ 200 ಮಕ್ಕಳು ಮತ್ತು 150 ಸಂಶೋಧಕರಿಗೆ ಕಲಿಸುತ್ತಾರೆ. ಈ ಸಂಸ್ಥೆಯನ್ನು ಅವರು 2018 ರಲ್ಲಿ ಪ್ರಾರಂಭಿಸಿದರು. ಅಭಿಜ್ಞ ಅವರು 16 ನೇ ವಯಸ್ಸಿನಲ್ಲಿ ವಾಸ್ತು ಶಾಸ್ತ್ರದಲ್ಲಿ ಪದವಿ ಪಡೆದರು.

ಅಭಿಜ್ಞ ಆನಂದ ನುಡಿದಿರುವ ಪ್ರಮುಖ ಭವಿಷ್ಯಗಳು

ಅಭಿಜ್ಞ ಆನಂದ ಅವರು 2020 ರಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಬರುತ್ತದೆ, 2022 ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಸಂಭವಿಸುತ್ತದೆ, 2023 ರಲ್ಲಿ ಇಸ್ರೇಲ್ ಮೇಲೆ ಹಮಾಸ್ ಭಯೋತ್ಪಾದಕ ದಾಳಿ ನಡೆಯುತ್ತದೆ ಮತ್ತು 2024 ರಲ್ಲಿ ಬಾಂಗ್ಲಾದೇಶದ ಅಧಿಕಾರದ ಬದಲಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದರು.