|
ಮಂಡಲಾ (ಮಧ್ಯಪ್ರದೇಶ) – ಇಲ್ಲಿನ ಘುಟಾಸ್ ಗ್ರಾಮದಲ್ಲಿ ‘ಸೈನ್ ಫಾರ್ ಇಂಡಿಯಾ’ ಎಂಬ ಶಾಲೆಯಿದ್ದು, ಅದರ ವಸತಿಗೃಹದಲ್ಲಿ ವಾಸಿಸುತ್ತಿದ್ದ 15 ಬಾಲಕಿಯರು ಮತ್ತು 33 ಬಾಲಕರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಈ ಶಾಲೆಗೆ ವಸತಿಗೃಹ ನಡೆಸಲು ಅನುಮತಿ ಕೂಡ ಇಲ್ಲ.
ಮಧ್ಯಪ್ರದೇಶ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತನಿಖೆಯಲ್ಲಿ ಈ ಮಕ್ಕಳ ಬ್ರೈನ್‌ವಾಷ್ ಮಾಡಿ ಕ್ರೈಸ್ತ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯಿಸಲಾಗಿದೆ ಎಂಬುದು ತಿಳಿದುಬಂದಿದೆ. ಈ ಶಾಲೆಯನ್ನು ಒಡಿಶಾದ ಜ್ಯೋತಿ ರಾಜ್ ನಡೆಸುತ್ತಿದ್ದಾರೆ. ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಮಾಹಿತಿಯನ್ನು ಭೋಪಾಲ ಪ್ರಧಾನ ಕಚೇರಿ ಮತ್ತು ಆಡಳಿತಕ್ಕೆ ಕಾರ್ಯಾಚರಣೆಗಾಗಿ ಕಳುಹಿಸಿದೆ.
ಮಕ್ಕಳು ವೈದ್ಯರು ಮತ್ತು ಇಂಜಿನಿಯರ್ ಬದಲಿಗೆ ಪಾದ್ರಿಯಾಗುವ ಬಗ್ಗೆ ಮಾತನಾಡುತ್ತಿದ್ದರು!
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಓಂಕಾರ ಸಿಂಗ ಅವರು, ಈ 48 ಮಕ್ಕಳು ಒಡಿಶಾದ ಅನುಪಪುರ ದಮೋಹ ಮತ್ತು ಸುತ್ತಮುತ್ತಲಿನ ಪ್ರದೇಶದವರಾಗಿದ್ದಾರೆ. ನಮ್ಮ ತಂಡವು ಮಕ್ಕಳೊಂದಿಗೆ ಚರ್ಚಿಸಿದಾಗ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು. ವೈದ್ಯರು ಅಥವಾ ಇಂಜಿನಿಯರ್ ಆಗುವ ಬದಲು ಮಕ್ಕಳು ಪಾದ್ರಿಗಳು ಮತ್ತು ಸನ್ಯಾಸಿನಿಯಾಗುವ ಬಗ್ಗೆ ಮಾತನಾಡುತ್ತಿದ್ದರು. ಕ್ರೈಸ್ತ ಧರ್ಮಕ್ಕೆ ಸೇರಿಸಿಕೊಳ್ಳಲು ತಮ್ಮನ್ನು ಕೇಳಲಾಯಿತು ಎಂದು ಮಕ್ಕಳೇ ಹೇಳಿದ್ದಾರೆ. ಅವರನ್ನು ಸಂಪೂರ್ಣವಾಗಿ ಬ್ರೈನ್‌ವಾಷ್ ಮಾಡಲಾಗಿತ್ತು. ಶಾಲೆಯಲ್ಲಿ ಬೈಬಲ್ ಸೇರಿದಂತೆ ಹಲವಾರು ಧಾರ್ಮಿಕ ಪುಸ್ತಕಗಳು ಪತ್ತೆಯಾಗಿವೆ, ಇದು ಅಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದಕ್ಕೆ ಸಾಕ್ಷಿಯಾಗಿದೆ, ಎಂದು ಹೇಳಿದರು.
ಶಾಲೆಯಲ್ಲಿ ಬೈಬಲ್ ಜೊತೆಗೆ ಪ್ರಾರ್ಥನೆ!
ಪೊಲೀಸ್ ಅಧಿಕಾರಿ ಕೆ.ಕೆ. ಉಪಾಧ್ಯಾಯ ಅವರು, ಶಾಲೆಯಲ್ಲಿ ಏನೋ ಅವ್ಯವಹಾರ ನಡೆಯುತ್ತಿದೆ ಎಂದು ಮೊದಲೇ ಅನುಮಾನವಿತ್ತು. ಆಯೋಗದ ತಂಡ ಬಂದಾಗ ಮಕ್ಕಳು ಬೈಬಲ್ ಹಿಡಿದು ಪ್ರಾರ್ಥನಾ ಕೊಠಡಿಗೆ ಹೋಗುತ್ತಿರುವುದು ಕಂಡುಬಂದಿತು. ಪ್ರತಿದಿನ ಸಂಜೆ 6:30ಕ್ಕೆ ಕ್ರೈಸ್ತ ಪ್ರಾರ್ಥನೆ ಮಾಡುವುದಾಗಿ ಮಕ್ಕಳು ತಿಳಿಸಿದ್ದಾರೆ. ಈ ಹಿಂದೆ ಅವರು ಬೇರೆ ಧರ್ಮವನ್ನು ಅನುಸರಿಸುತ್ತಿದ್ದರು, ಎಂದು ಹೇಳಿದರು.
ಬಾಲಕಿಯರ ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ!
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ನಿವೇದಿತಾ ಶರ್ಮಾ ಅವರು, ಶಾಲೆಯ ದಾಖಲೆಗಳಲ್ಲಿ ಮಕ್ಕಳ ಧರ್ಮ ಹಿಂದೂ ಮತ್ತು ಜಾತಿ ಗೊಂಡ ಎಂದು ಬರೆಯಲಾಗಿತ್ತು. ಆದರೆ ವಸತಿಗೃಹದ ದಾಖಲೆಗಳಲ್ಲಿ ಅವರನ್ನು ಕ್ರೈಸ್ತರು ಎಂದು ಉಲ್ಲೇಖಿಸಲಾಗಿದೆ. ಮಕ್ಕಳ ಸಂಪೂರ್ಣ ದಾಖಲೆಗಳು ಕೂಡ ಪತ್ತೆಯಾಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ ವಸತಿಗೃಹದ ಬಾಲಕಿಯರ ಶೌಚಾಲಯದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದು ಅತ್ಯಂತ ಆಕ್ಷೇಪಾರ್ಹವಾಗಿದೆ, ಎಂದು ಹೇಳಿದರು.
ಮಂಡಲಾದ ಹೆಚ್ಚಿನ ಶಾಲೆಗಳ ಪರಿಸ್ಥಿತಿ ಒಂದೇ !
ಮಂಡಲಾ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ತಾರೇಂದ್ರ ಚೌರಾಸಿಯಾ ಅವರು, ಮಕ್ಕಳ ಮಣಿಕಟ್ಟಿನ ಕೆಂಪು ದಾರ, ಹಣೆಯ ತಿಲಕ ಮಾಯವಾಗಿದೆ. ಹಿಂದೂ ಚಿಹ್ನೆಗಳನ್ನು ಅಳಿಸಲಾಗಿದೆ. ಇಲ್ಲಿ ಬುಡಕಟ್ಟು ಮಕ್ಕಳ ಜೊತೆಗೆ ಬೈಗಾ ಸಮುದಾಯದ ಮಕ್ಕಳನ್ನೂ ಮತಾಂತರ ಮಾಡಲಾಗಿದೆ. ಅವರ ಪೋಷಕರ ಅನುಮತಿ ಇಲ್ಲದೆ ಪ್ರಾರ್ಥನೆ ಮಾಡಲು ಒತ್ತಾಯಿಸಲಾಗುತ್ತಿದೆ ಮತ್ತು ಅವರ ಶಾಲಾ ಅರ್ಜಿಯಲ್ಲಿ ಕ್ರೈಸ್ತ ಧರ್ಮವನ್ನು ಕೂಡ ಬರೆಯಲಾಗುತ್ತಿದೆ. ಸುಮಾರು ಎಲ್ಲಾ ಶಾಲೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಎಂದು ಹೇಳಿದರು.
ಕ್ರೈಸ್ತ ಮಿಷನರಿಗಳಿಗೆ ಹಣಕಾಸಿನ ಮೂಲವನ್ನು ಪತ್ತೆ ಮಾಡುವಂತೆ ಒತ್ತಾಯ!
ಕೇವಲ 100 ಕುಟುಂಬಗಳಿರುವ ಈ ಹಿಂದುಳಿದ ಗ್ರಾಮದಲ್ಲಿ ಕ್ರೈಸ್ತ ಮಿಷನರಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಾಲೆಗಳನ್ನು ಕಟ್ಟುತ್ತಿದ್ದಾರೆ ಮತ್ತು ಅಲ್ಲಿ ಮಕ್ಕಳಿಗೆ ಕಡಿಮೆ ಹಣದಲ್ಲಿ ಶಿಕ್ಷಣ ನೀಡುತ್ತಿದ್ದಾರೆ ಎಂಬುದು ಆಶ್ಚರ್ಯಕರವಾಗಿದೆ. ಇದರ ಹಿಂದಿನ ಉದ್ದೇಶವೇನು ಮತ್ತು ಈ ಕೆಲಸಕ್ಕೆ ಯಾರು ಹಣ ನೀಡುತ್ತಿದ್ದಾರೆ? ಎಂಬುದನ್ನು ತನಿಖೆ ಮಾಡುವುದು ಮುಖ್ಯ ಎಂದು ಒತ್ತಾಯಿಸಲಾಗುತ್ತಿದೆ.
ಸಂಪಾದಕೀಯ ನಿಲುವು
|